Don't Miss!
- News
ಚೀನಾದ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ
- Sports
ಆ ಒಂದು ಸ್ಥಾನಕ್ಕೆ ಮುಂದುವರಿದ ಭಾರೀ ಚರ್ಚೆ: ಮತ್ತೆ ಅಡಕತ್ತರಿಯಲ್ಲಿ ಸಿಲುಕಿಕೊಂಡ ಕನ್ನಡಿಗ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉಡುಪಿ: 'ಕುರುಪ್' ಸಿನಿಮಾ ನೋಡಿ ಕೊಲೆ, ಪೊಲೀಸರ ಮುಂದೆ ನಡೆಯಲಿಲ್ಲ ಆಟ!
ಸಿನಿಮಾ ಹಲವರ ಬಾಳನ್ನು ಬೆಳಗಿಸಬಹುದು. ಹಲವರ ಬಾಳನ್ನು ವಿನಾಶಕ್ಕೂ ದೂಡಬಹುದು..ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರ ನೋಡಿ ಅದೇಷ್ಟೋ ಸಾವಿರ ಮಂದಿ ಸಜ್ಜನ ಬದುಕಿಗೆ ಕಾಲಿಟ್ಟಿ ಇತಿಹಾಸವಿದೆ. ಅದೇ ರೀತಿ ಸಿನಿಮಾಗಳನ್ನೇ ಆದರ್ಶವಾಗಿಟ್ಟುಕೊಂಡು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ಉದಾಹರಣೆಯೂ ಇದೆ.
ಮಲಯಾಳಂನ ಸೂಪರ್ ಹಿಟ್ ಚಿತ್ರ 'ಕುರುಪ್' ಸಿನಿಮಾ ನೋಡಿದ ಉಡುಪಿಯ ಇಳಿವಯಸ್ಸಿನ ಕ್ರಿಮಿನಲ್ ವೃದ್ಧ ಮಾಡಬಾರದ್ದನ್ನು ಮಾಡಿ ಅಮಾಯಕನ ಜೀವ ತೆಗೆದಿದ್ದಾನೆ. ಸಿನಿಮಾವನ್ನೇ ಸ್ಫೂರ್ತಿ ಪಡೆದು, ಸಿನಿಮಾ ಮಾದರಿಯಲ್ಲೇ ಕಥೆ ಹಣೆದು ಅಮಾಯಕನ ಜೀವ ಬಲಿ ಪಡೆದಿದ್ದಾನೆ. ಸಿನಿಮಾವನ್ನೇ ಹೋಲುವ ಭಯಾನಕ ಮರ್ಡರ್ ಸ್ಟೋರಿ ಉಡುಪಿಯ ಜನರನ್ನು ದಂಗು ಬಡಿಸಿದೆ.
'ದ್ವಿತ್ವ'
ನಿಂತ
ಬಳಿಕ
ಪವನ್
ಕುಮಾರ್
ಮುಂದಿನ
ಹೆಜ್ಜೆ
ಮಲಯಾಳಂ
ನಟನ
ಜೊತೆ!
ಬುಧವಾರ ಬೆಳ್ಳಂಬೆಳಗ್ಗೆ ಉಡುಪಿಯ ಬೈಂದೂರು ಗಡಿ ಭಾಗದಲ್ಲಿ ಸಿಕ್ಕ ಸಂಪೂರ್ಣ ಸುಟ್ಟ ಕಾರು ಮತ್ತು ಅದೊರಳಗೆ ಸುಟ್ಟು ಕರಕಲಾದ ಅಸ್ಥಿಪಂಜರ ಉಡುಪಿಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು..ಆರಂಭದಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಅಂತಾ ಎಲ್ಲರೂ ಭಾವಿಸಿಕೊಂಡಿದ್ದರು. ಪೊಲೀಸರೂ, ಇದು ಆತ್ಮಹತ್ಯೆ ಯೇ ಅಂತಾ ಭಾವಿಸಿದ್ದರು. ಆದರೆ ಪ್ರಕರಣವನ್ನು ಸೂಕ್ಷ್ಮವಾಗಿ ಜಾಲಾಡಿದಾಗ ಥೇಟ್ 'ಕುರುಪ್' ಸಿನಿಮಾ ಶೈಲಿಯನ್ನೇ ಹೋಲುವ ಕೊಲೆ ಪ್ರಕರಣ ಬಯಲಾಗಿದೆ.

ನಿರ್ಜನ ಪ್ರದೇಶದಲ್ಲಿ ಸುಟ್ಟ ಕಾರೊಂದು ಪತ್ತೆಯಾಗಿತ್ತು
ಬುಧವಾರ ಮುಂಜಾನೆ ಉಡುಪಿ ಜಿಲ್ಲೆಯ ಗಡಿಯ ತಾಲೂಕು ಬೈಂದೂರುನ ನಿರ್ಜನ ಪ್ರದೇಶದಲ್ಲಿ ಸುಟ್ಟ ಕಾರೊಂದು ಅಸ್ಥಿಪಂಜರದೊಂದಿಗೆ ಪತ್ತೆಯಾಗಿ ಜಿಲ್ಲೆ ಬೆಚ್ಚಿಬೀಳುವಂತೆ ಮಾಡಿತ್ತು. ಬೈಂದೂರು ತಾಲೂಕಿ ಶಿರೂರು ಒತ್ತನೆಣೆ ಹೆನ್ ಬೇರು ಎಂಬಲ್ಲಿ ಸೆಡಾನ್ ಕಾರೊಂದು ಸಂಪೂರ್ಣ ಸುಟ್ಟು ಭಸ್ಮವಾಗಿ, ಒಳಗೆ ಅಸ್ಥಿಪಂಜರ ಪತ್ತೆಯಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುಟ್ಟು ಹೋದ ಕಾರು ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ ಎಂಬವರಿಗೆ ಸೇರಿದ್ದು ಎಂದು ಪತ್ತೆಹಚ್ಚಿದ್ದಾರೆ. ಕಾರಿನ ಚೆಸ್ಸಿ ನಂಬರ್ ಮೂಲಕ ಕಾರಿನ ನಂಬರ್ ಪತ್ತೆ ಮಾಡಿ ಪರಿಶೀಲನೆ ನೆಡೆಸಿದಾಗ ಕಾರು ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗಿರುವುದು ತಿಳಿದುಬಂದಿದೆ. ಮಾತ್ರವಲ್ಲದೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಗೆ ಹಣ ನೀಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಶಿಲ್ಪಾಳ ಮೃತ ದೇಹ ಎಂದುಕೊಳ್ಳಲಾಗಿತ್ತು
ತನಿಖೆಯ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹವನ್ನು ಕಾರ್ಕಳದ ಶಿಲ್ಪಾ ಎನ್ನುವ ಮಹಿಳೆಯದ್ದಾಗಿದೆ ಎನ್ನಲಾಗಿತ್ತು. ಆದರೆ ಶಿಲ್ಪ ಜೀವಂತವಾಗಿದ್ದಾರೆ ಎಂಬುದು ನಂತರ ತನಿಖೆಯಲ್ಲಿ ಬಯಲಾಯ್ತು. ಕಾರು ಮಾಲಿಕ ಸದಾನಂದ ಶೇರಿಗಾರ್ ಮತ್ತು ಶಿಲ್ಪಾ ಅವರ ಪತಿ ಸ್ನೇಹಿತರು. ಕೊಲೆಯ ಅನುಮಾನ ಬಂದ ಕೂಡಲೇ ಪ್ರಕರಣವನ್ನು ಬೆನ್ನಟ್ಟಿದ್ದ ಬೈಂದೂರು ಪೊಲೀಸರು ಕಾರಿನ ಮಾಲಕನಾದ ಸದಾನಂದ ಶೇರೆಗಾರ್ ಕುಟುಂಬದ ವಿವರ ಪಡೆದಾಗ ಪೊಲೀಸರಿಗೆ ಇನ್ನಷ್ಟು ಅನುಮಾನ ಶುರುವಾಗಿದೆ.

ಸತ್ತು ಹೋಗಿದ್ದೇನೆಂದು ಬಿಂಬಿಸಲು ಕೊಲೆ!
ಕಾರಿನ ಮಾಲೀಕ ಸದಾನಂದ ಶೇರೆಗಾರ್ 2009ರಲ್ಲಿ ಫೋರ್ಜರಿ ಮಾಡಿದ ಪ್ರಕರಣದ ಬಂಧನ ಭೀತಿಯಿತ್ತು, ಹಾಗಾಗಿ ಬಂಧನದಿಂದ ತಪ್ಪಿಸಿಕೊಳ್ಳಲು, ಮಲಯಾಳಂನ 'ಕುರುಪ್' ಸಿನಿಮಾದಲ್ಲಿ ನೋಡಿದ ಕಥೆಯಂತೆ ತಾನೇ ಸತ್ತುಹೋಗಿರುವ ಹಾಗೆ ಬಿಂಬಿಸಲು ಸ್ವಂತ ಕಾರಿನಲ್ಲಿ ತನ್ನದೇ ಮೈಕಟ್ಟು ಹೋಲುವ ವ್ಯಕ್ತಿಯನ್ನು ತನ್ನ ಅನೈತಿಕ ಸಂಬಂಧದ ಗೆಳತಿ ಶಿಲ್ಪಾ ಪೂಜಾರಿ ಮೂಲಕ ಬಲೆಗೆ ಬೀಳಿಸಿದ್ದ. ಕಾರ್ಕಳದಲ್ಲಿ ಆನಂದ ದೇವಾಡಿಗ ಎಂಬ ಪರಿಚಯದ ವ್ಯಕ್ತಿಯೊಬ್ಬನಿಗೆ ಕಂಠಪೂರ್ತಿ ಕುಡಿಸಿ ವಯಾಗ್ರ ಮಾತ್ರೆ ಎಂದು ನಿದ್ರೆ ಮಾತ್ರ ನೀಡಿ ಕಾರಿನಲ್ಲಿ ಕುಳ್ಳಿಸಿಕೊಂಡು ಬಂದು ಹೇನ್‌ಬೇರು ರಸ್ತೆ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಒಂಬತ್ತು ಲೀಟರ್ ಪೆಟ್ರೋಲ್ ಬಳಸಿ ಸುಟ್ಟಿದ್ದಾರೆ
ಕಾರ್ ನಲ್ಲಿ ಸುಟ್ಟು ಕರಕಲಾದ ವ್ಯಕ್ತಿ ಅರವತ್ತು ವರ್ಷ ಹರೆಯದ ಆನಂದ ದೇವಾಡಿಗ ಅಂತಾ ಹೇಳಲಾಗಿದೆ. ಆರೋಪಿ ಸದಾನಂದ ತನ್ನ ಗೆಳತಿ ಶಿಲ್ಪಾ ಮೂಲಕ ಆನಂದ್ ರನ್ನು ಪುಸಲಾಯಿಸಿ, ರಾತ್ರಿ ಕಂಠಪೂರ್ತಿ ಕುಡಿಸಿ ಕಾರ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಒಂಭತ್ತು ಲೀಟರ್ ಪೆಟ್ರೋಲ್ ಬಳಸಿ ಕಾರ್ ಸುಟ್ಟು ಕೊಲೆಮಾಡಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಕೊಲೆಯಾದ ಆನಂದ್ , ಹೆಣ್ಣು ಹೆಂಡದ ಆಸೆಯಿಂದ ಜೀವ ಕಳೆದುಕೊಂಡಿದ್ದಾರೆ. ಪ್ರಮುಖ ಆರೋಪಿ ಸದಾನಂದ್ ಮತ್ತು ಶಿಲ್ಪಾ ಊರು ಬಿಟ್ಟು ಪರಾರಿಯಾಗುವ ವೇಳೆ ಪೊಲೀಸರ ಕೈ ಗೆ ಸಿಕ್ಕಿಬಿದ್ದಿದ್ದಾರೆ.

ಎಲ್ಲ ಆರೋಪಿಗಳ ಬಂಧನ
ಪರಾರಿಯಾಗಲು ಸಹಾಯ ಮಾಡಿದ ಸತೀಶ್ ದೇವಾಡಿಗ, ನಿತಿಶ್ ದೇವಾಡಿಗ ರನ್ನೂ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ತನಿಖೆಯ ವೇಳೆ ಸದಾನಂದ ಶೇರೆಗಾರ್(52), ಶಿಲ್ಪಾ (30) ಪ್ರಮುಖ ಆರೋಪಿಗಳಾದರೆ ಸತೀಶ್ ದೇವಾಡಿಗ, ನಿತಿನ್ ದೇವಾಡಿಗ ಕೊಲೆಗೆ ಸಾಥ್ ನೀಡಿರುವುದು ಪತ್ತೆಯಾಗಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಮತ್ತು ಹೆಚ್ಚಿನ ವಿವರಗಳನ್ನು ಆರಕ್ಷಕರು ತನಿಖೆ ನಡೆಸುತ್ತಿದ್ದಾರೆ.

'ಕುರುಪ್' ಸಿನಿಮಾ ನೋಡಿ ಕೊಲೆ ಮಾಡಿದ್ದಾಗಿ ಹೇಳಿಕೆ
ಆರೋಪಿ ಸದಾನಂದ ಶೇರಿಗಾರ್, ಕ್ರೈಂ ಸ್ಟೋರಿ, ಥ್ರಿಲ್ಲಿಂಗ್ ಸಸ್ಪೆನ್ಸ್ ಸಿನಿಮಾ ನೋಡುವ ಹವ್ಯಾಸ ಇಟ್ಟುಕೊಂಡಿದ್ದು ಮಲೆಯಾಳಂ ನ 'ಕುರುಪ್' ಚಿತ್ರ ನೋಡಿ ಇದೇ ಮಾದರಿಯಲ್ಲಿ ಕೊಲೆ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ. ಮಲೆಯಾಳಂ ನ ಕುರುಪ್ ಚಿತ್ರ ಕಳೆದ ಮೂವತ್ತೈದು ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿ ತೆರೆಗೆ ಬಂದಿತ್ತು. ಇನ್ಶುರೆನ್ಸ್ ಪಾಲಿಸಿ ಹಣ ಪಡೆಯಲು ಎನ್ ಆರ್ ಐ ವ್ಯಕ್ತಿಯೊಬ್ಬ ತನ್ನ ಕಾರ್ ನಲ್ಲಿ ತನ್ನನ್ನೇ ಹೋಲುವ ವ್ಯಕ್ತಿಯನ್ನು ಕಾರ್ ನಲ್ಲಿರಿಸಿ ಸುಟ್ಟು ಕೊಲೆ ಮಾಡಿದ್ದ. ಆ ಬಳಿಕ ತನ್ನದೇ ಡೆತ್ ನೋಟ್ ತಯಾರಿಸಿದ್ದ. ಈ ಕಥಾ ಹಂದರ ಚಿತ್ರ ರಸಿಕರ ಮನಸೂರೆಗೊಳಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಸದಾನಂದ ಶೇರಿಗಾರ್ ಕೊಲೆ ಮಾಡಿದ್ದಾನೆ. ಆದರೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.