twitter
    For Quick Alerts
    ALLOW NOTIFICATIONS  
    For Daily Alerts

    ಗೋಧಿ ಹಿಟ್ಟಿನ ಪಾಕೆಟ್‌ನಲ್ಲಿ 15,000 ಹಣ ಇಟ್ಟು ಕೊಟ್ಟರೇ ಅಮೀರ್ ಖಾನ್? ಸತ್ಯವೇನು?

    |

    ಕೊರೊನಾ ಸಂಕಷ್ಟದ ಸಮಯದಲ್ಲಿ ಸ್ಟಾರ್ ನಟರು ಬಹುಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿಯಂತೂ ಟಾಪ್ ನಟರುಗಳು ಪೈಪೋಟಿಗೆ ಬಿದ್ದಂತೆ ದೇಣಿಗೆಗಳನ್ನು ಘೋಷಿಸುತ್ತಿದ್ದಾರೆ.

    Recommended Video

    ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ದಿನಸಿ ಕೊಟ್ಟ ಕೋವಿಡ್ ವಾರಿಯರ್ಸ್ ತಂಡ | Sandalwood

    ನಟ ಅಕ್ಷಯ್ ಕುಮಾರ್ 25 ಕೋಟಿ ಘೋಷಿಸಿದರೆ. ಶಾರುಖ್ ಖಾನ್ ಮೂರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ದೇಣಿಗೆ ನೀಡುವ ಜೊತೆಗೆ ದಿನಸಿ, ಆಹಾರ, ವೈದ್ಯರಿಗೆ ಜೀವರಕ್ಷಕ ಕಿಟ್‌ಗಳು ನೀಡಿದ್ದಾರೆ. ಇದಕ್ಕೆಲ್ಲಾ ಕಳಶವಿಟ್ಟಂತೆ ತನ್ನ ನಾಲ್ಕಂತಸ್ತಿನ ಕಚೇರಿಯನ್ನು ಕೊರೊನಾ ರೋಗಿಗಳ ಉಪಚಾರಕ್ಕೆ ಕೊಟ್ಟುಬಿಟ್ಟಿದ್ದಾರೆ.

    ಇವೆಲ್ಲವುದರ ನಡುವೆ ಹೆಚ್ಚು ಸುದ್ದಿ ಮಾಡುತ್ತಿರುವುದೆಂದರೆ ಅಮೀರ್ ಖಾನ್ ಮಾಡಿದ್ದಾರೆ ಎನ್ನಲಾದ ಸಹಾಯ. ಹೌದು, ಅಮೀರ್ ಖಾನ್ ಬಡವರ ಮನೆಗೆ ಬುದ್ಧಿವಂತಿಕೆಯಿಂದ 15,000 ನಗದು ತಲುಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಬಹಳ ವೈರಲ್ ಆಗಿದೆ.

    ಅಮೀರ್ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

    ಅಮೀರ್ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

    ಕೊಲ್ಯಾಜ್ ಮಾಡಿದ, ಗೋದಿ ಹಿಟ್ಟಿನ ಸಣ್ಣ-ಸಣ್ಣ ಪ್ಯಾಕೆಟ್‌ಗಳಲ್ಲಿ ಕಂತೆ ಹಣ ಇರುವ ಚಿತ್ರ, ಅಮೀರ್ ಖಾನ್ ಕೈ ಬೀಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಗೋಧಿ ಹಿಟ್ಟಿನ ಸಣ್ಣ ಪ್ಯಾಕೆಟ್‌ನಲ್ಲಿ ಹದಿನೈದು ಸಾವಿರ ಹಣ ಇಟ್ಟುಕೊಟ್ಟಿದ್ದಾರೆ ಅಮೀರ್ ಖಾನ್ ಎಂಬ ಸಂದೇಶ ಚಿತ್ರದೊಂದಿಗೆ ಹರಿರಾಡುತ್ತಿದೆ.

    ಸುದ್ದಿ ಪ್ರಾರಂಭವಾಗಿದ್ದು ಟಿಕ್‌ಟಾಕ್‌ ನಿಂದ

    ಸುದ್ದಿ ಪ್ರಾರಂಭವಾಗಿದ್ದು ಟಿಕ್‌ಟಾಕ್‌ ನಿಂದ

    ಈ ಸುದ್ದಿ ಪ್ರಾರಂಭವಾಗಿದ್ದು ಟಿಕ್‌ಟಾಕ್‌ ನಿಂದ. ಅಲ್ಲಿ ಒಬ್ಬಾತ, ಅಮೀರ್ ಖಾನ್ ಗೋಧಿ ಹಿಟ್ಟಿನ ಸಣ್ಣ ಪ್ಯಾಕೆಟ್‌ಗಳ ಟ್ರಕ್ ಅನ್ನು ದೆಹಲಿಗೆ ಕಳುಹಿಸಿದ್ದರು. ಸಣ್ಣ ಪ್ಯಾಕೆಟ್‌ಗಳಾದ್ದರಿಂದ ಕೇವಲ ಬಡವರಷ್ಟೆ ಆ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋದರು, ಪ್ಯಾಕೆಟ್‌ಗಳನ್ನು ತೆಗೆದಾಗ ಅದರಲ್ಲಿ ಹಣ ಇತ್ತು. ಪ್ರತಿ ಪ್ಯಾಕೆಟ್‌ನಲ್ಲಿ ಹದಿನೈದು ಸಾವಿರ ಹಣ ಇಟ್ಟಿದ್ದರು ಅಮೀರ್ ಖಾನ್ ಎಂದು ಒಬ್ಬಾತ ವಿಡಿಯೋ ಮಾಡಿ ಹಾಕಿದ್ದ.

    ಕೆಲವೇ ಗಂಟೆಗಳಲ್ಲಿ ವೈರಲ್ ಆದ ವಿಡಿಯೋ

    ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಯಿತು. ಚಿತ್ರಗಳೂ ಸಹ ಕೆಲವೇ ನಿಮಿಷದಲ್ಲಿ ವೈರಲ್ ಆದವು. ಅಮೀರ್ ಖಾನ್ ಮಾಡಿರುವ ಸಹಾಯ ನೇರವಾಗಿ ಬಡವರಿಗೆ ತಲುಪಿದೆ. ಬಡವರು ಮಾತ್ರವೇ ಎತ್ತಿಕೊಳ್ಳಲೆಂದು ಹಿಟ್ಟಿನ ಸಣ್ಣ ಪ್ಯಾಕೆಟ್‌ಗಳನ್ನೇ ಮಾಡಿ ಹಂಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ.

    ಮಾಡಿದ ಸಹಾಯ ಹೇಳಿಕೊಳ್ಳುವುದಿಲ್ಲ ಅಮೀರ್ ಖಾನ್

    ಮಾಡಿದ ಸಹಾಯ ಹೇಳಿಕೊಳ್ಳುವುದಿಲ್ಲ ಅಮೀರ್ ಖಾನ್

    ಬೇರೆ ನಟರ ರೀತಿಯಲ್ಲಿ ತಾವು ಮಾಡಿದ ಸಹಾಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವ ಕಾರ್ಯವನ್ನು ಅಮೀರ್ ಖಾನ್ ಈ ವರೆಗೆ ಮಾಡಿಲ್ಲ. ಹಾಗಾಗಿಯೇ ಈ ಗೋಧಿ ಹಿಟ್ಟಿನಲ್ಲಿ ಹಣ ಇಟ್ಟಿರುವ ಕಾರ್ಯ ಅಮೀರ್ ಮಾಡಿರಬಹುದು ಎಂಬ ಅನುಮಾನ ಮತ್ತಷ್ಟು ಬಲವಾಗಿದೆ. ಅಮೀರ್ ಖಾನ್ ನಡೆಸುವ 'ವಾಟರ್ ಕಪ್‌' ನಿಂದಾಗಿ ನೂರಾರು ಹಳ್ಳಿಗಳು ನೀರಿನ ಸ್ವಾವಂಬಿಗಳಾಗಿವೆ ಆದರೆ ಅವರೆಂದೂ ಅದರಿಂದ ಪ್ರಚಾರ ಪಡೆದುಕೊಂಡವರಲ್ಲ.

    ಸ್ಪಷ್ಟ ಮಾಹಿತಿ ಲಭ್ಯವಿಲ್ಲ

    ಸ್ಪಷ್ಟ ಮಾಹಿತಿ ಲಭ್ಯವಿಲ್ಲ

    ಹಿಟ್ಟಿನ ಪ್ಯಾಕೆಟ್‌ನಲ್ಲಿ ಹಣ ಇಟ್ಟು ಹಂಚಿರುವ ಬಗ್ಗೆ ಮಾಹಿತಿ ಪಡೆಯಲೆಂದು ಕೆಲವು ಮಾಧ್ಯಮಗಳು ಅಮೀರ್ ಖಾನ್ ಅವರನ್ನು ಸಂಪರ್ಕ ಮಾಡಿವೆಯಾದರೂ ಸ್ಪಷ್ಟತೆ ಲಭ್ಯವಾಗಿಲ್ಲ. ಇದು ಸುಳ್ಳು ಸುದ್ದಿಯಾಗಿರುವ ಸಾಧ್ಯತೆಯೇ ಹೆಚ್ಚಾಗಿದೆ.

    English summary
    Video Claiming Aamir Khan Distributed Money In Wheat Flour Packets Goes Viral. Is this news true of fake.
    Tuesday, April 28, 2020, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X