For Quick Alerts
  ALLOW NOTIFICATIONS  
  For Daily Alerts

  ಹೊಸ ನಿರೀಕ್ಷೆ ಹುಟ್ಟು ಹಾಕಿದ ಹೊಸಬರ "ಆನೆಬಲ" ಚಿತ್ರ

  |

  ಜನತಾ ಟಾಕೀಸ್ ಸಂಸ್ಥೆಯ ಚೊಚ್ಚಲ ನಿರ್ಮಾಣದ 'ಆನೆಬಲ' ಚಿತ್ರವು ಈ ವರ್ಷದ ನಿರೀಕ್ಷೆಯನ್ನ ಹುಟ್ಟುಹಾಕಿರುವ ಹೊಸಬರ ಚಿತ್ರವಾಗಿದೆ.

  ಈ ನಿರೀಕ್ಷೆಗೆ ಕಾರಣ ಹೊಸ ಕತೆ ಮತ್ತು ಚಿತ್ರಕತೆ ಜೊತೆಗೆ ಇಡೀ ಚಿತ್ರ ನೇರ ಹಾಗೂ ನಾಚುರಲ್ ನಿರೂಪಣೆಯನ್ನ ಒಳಗೊಂಡಿದೆ. ನೂರಕ್ಕೂ ಕಲಾವಿದರು ಅಭಿನಯಿಸಿರುವ ಈ ಚಿತ್ರದಲ್ಲಿ ಒಬ್ಬ ಕಂಠದಾನ ಕಲಾವಿದರನ್ನೂ ಬಳಸದೇ ಓರಿಜಿನಲ್ ವಾಯ್ಸ್ ಗೋಸ್ಕರ ಇಡಿ ತಂಡ ಶ್ರಮಪಟ್ಟು ಡಬ್ ಮಾಡಿಸಿದೇ ಅದರಲ್ಲಿ ಬರುವ ನೂರಕ್ಕೂ ಹೆಚ್ಚು ವಯಸ್ಸಿನ ಅಜ್ಜಿಯೇ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿರುವುದು ಸಹ ವಿಶೇಷ.

  ಬರೀ ವಾಯ್ಸ್ ನಲ್ಲಿ ಮಾತ್ರವಲ್ಲ ಚಿತ್ರ ಎಲ್ಲಾ ವಿಭಾಗಳಲ್ಲೂ ತನ್ನ ಓರಿಜಿನಾಲಿಟಿ ಕಾಯ್ದುಕೊಂಡಿದೆ. ಮೊನ್ನೆಯಷ್ಟೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ ಆನೆಬಲ ಚಿತ್ರವು ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ "ಮುದ್ದೆ ಮುದ್ದೆ ಹಾಡು" ಹಾಗೂ ಸೂನಗಹಳ್ಳಿ ರಾಜು ಬರೆದಿರುವ "ಮಳವಳ್ಳಿ ಜಾತ್ರೆಲಿ ತುಂಡು ಹೈಕ್ಳಾ ದರ್ಬಾರು".... ಹಾಡುಗಳು ಸೂಪರ್ ಹಿಟ್ ಆಗಿದೆ.ಯು ಟ್ಯೂಬ್ ನಲ್ಲಿ ಆ ಹಾಡುಗಳನ್ನ ನೋಡುವ ಪ್ರೇಕ್ಷಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಆನೆಬಲ ಚಿತ್ರತಂಡದವರಲ್ಲಿ ವಿಶ್ವಾಸವನ್ನ ಹೆಚ್ಚಿಸಿದೆ.

  ಬಾದಮಿ ಬನಶಂಕರಿ ಜಾತ್ರೆಗೆ ವಿಶೇಷ ಹಾಡನ್ನ ರಚಿಸುವ ಮೂಲಕ ಆನೆಬಲ ಚಿತ್ರತಂಡ ಶುಭಕೋರಿದೆ.

  ಅನೇಕ ಹೊಸ ಅಂಶಗಳನ್ನೇ ಹೊತ್ತು ಬರುತಿರುವ ಈ ಚಿತ್ರವನ್ನು ಸೂನಗಹಳ್ಳಿ ರಾಜು ಅವರ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದು, ಈ ಚಿತ್ರಕ್ಕೆ ಲೂಸಿಯಾ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಅವರು ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್ ಅವರು ಸಹ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ.ಹಾಗೇ ಸಿನೆಮಾ ಆರಂಭಕ್ಕೆ ಮೂಲ ಜನಪದವನ್ನ ಹಾಡಿರುವ ಕಂದೇಗಾಲದ ಪುಟ್ಟಮ್ಮ ಮತ್ತು ತಂಡದವರ ಅವರ ಧ್ವನಿ ಕೇಳಲು ಸೊಗಸಾಗಿದೆ. ಜೆ.ಟಿ.ಬೆಟ್ಟೆಗೌಡ ಕೀಲಾರ ಅವರ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಅವರ ಸಂಕಲನವಿದೆ.

  ಮುದ್ದೆ ಹಾಡಿಗೆ ಡ್ಯಾನ್ಸ್ ಮಾಸ್ಟರ್ ಕಲೈ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ.ಈಶ್ವರಿ ಕುಮಾರ್ ಅವರ ಕಲಾ ನಿರ್ದೇಶನವಿದ್ದು ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  ಸಾಗರ್ , ರಕ್ಷಿತಾ, ಮಲ್ಲರಾಜು, ಚಿರಂಜೀವಿ, ಹರೀಶ್, ಗೌತಮ್, ಮುತ್ತುರಾಜ್, ಶ್ರೇಷ್ಠ, ಉದಯ್, ಕೆಂಚೇಗೌಡ, ಶಿವಕುಮಾರ್, ಶಂಭುಗೌಡ, ಮಂಜಣ್ಣ, ಗೌರಮ್ಮ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

  ಆನೆಬಲ ಚಿತ್ರದ ಹಾಡನ್ನ ನೋಡಿದ ಅನೇಕ ವಿದೇಶಿ ಕನ್ನಡಿಗರು ಚಿತ್ರ ವೀಕ್ಷಣೆಗಾಗಿ ಕಾಯುತಿರುವುದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  English summary
  Aanebala kannada movie songs getting possessive response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X