ಅಭಿಷೇಕ್ ಗೆ ಫೋನ್ ಮಾಡಿದ್ದರಂತೆ ಕಿಚ್ಚ ಸುದೀಪ್
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ತೆರೆಕಂಡಿದೆ. ಅಭಿಷೇಕ್ ಮೊದಲ ಸಿನಿಮಾ ಆಗಿದ್ದ ಕಾರಣ ಇಡೀ ಸೌತ್ ಇಂಡಿಯಾ ಸ್ವಾಗತ ಕೋರಿದೆ. ಸೂಪರ್ ಸ್ಟಾರ್ ರಜನಿಕಾಂತ್, ಚಿರಂಜೀವಿ, ತೆಲುಗು ನಟ ನಾನಿ, ದರ್ಶನ್, ಯಶ್ ಸೇರಿದಂತೆ ಅನೇಕರು ವಿಶ್ ಮಾಡಿದ್ದರು.
ಕಿಚ್ಚ ಸುದೀಪ್ ಕೂಡ ವಿಡಿಯೋ ಮೂಲಕ ಅಭಿಷೇಕ್ ಗೆ ಶುಭ ಕೋರಿದ್ದರು. ಮೊದಲ ಸಿನಿಮಾ ಒಳ್ಳೆಯದಾಗಲಿ, ತಂದೆಯಂತೆ ಇಂಡಸ್ಟ್ರಿಯಲ್ಲಿ ನೀವು ಬೆಳೆಯಬೇಕು. ನಾವೆಲ್ಲ ನಿಮ್ಮ ಜೊತೆಯಲ್ಲಿದ್ದೇವೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಸ್ವಾಗತ ಕೋರಿದ್ದರು.
ಅಷ್ಟಕ್ಕೆ ಸುಮ್ಮನಾಗದ ಸುದೀಪ್, ಅಂಬಿ ಪುತ್ರನಿಗೆ ಫೋನ್ ಮಾಡಿದ್ದರಂತೆ. 'ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅವರು ಕೂಡ ನಮ್ಮ ಮನೆಯವರೇ. ನಮ್ಮ ತಂದೆಯನ್ನ ಅಂಬಿ ಮಾಮ ಎಂದು ಕರೆಯುತ್ತಿದ್ದರು. ಅವರಿಗೂ ನಮ್ಮ ಮೇಲೆ ಪ್ರೀತಿ ಇದೆ' ಅಭಿ ಹೇಳಿಕೊಂಡರು.

ಅಂದ್ಹಾಗೆ, ಮೇ 31ರಂದು ಅಮರ್ ಸಿನಿಮಾ ಬಿಡುಗಡೆಯಾಗಿದ್ದು, ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸಿದ್ದು, ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದಾರೆ. ಅಭಿಷೇಕ್ ಗೆ ಜೋಡಿಯಾಗಿ ತಾನ್ಯ ಹೋಪ್ ನಟಿಸಿದ್ದು, ರಾಜ್ ದೀಪಕ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











