»   » ಚಿತ್ರೀಕರಣದ ವೇಳೆ ಕಾಶ್ಮೀರದಲ್ಲಿ ನಡೆದ ದೊಡ್ಡ ಅಪಘಾತದಿಂದ ಶಿವಣ್ಣ ಬಚಾವ್

ಚಿತ್ರೀಕರಣದ ವೇಳೆ ಕಾಶ್ಮೀರದಲ್ಲಿ ನಡೆದ ದೊಡ್ಡ ಅಪಘಾತದಿಂದ ಶಿವಣ್ಣ ಬಚಾವ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಎಲ್ಲರಿಗೂ ಗೊತ್ತಿರುವಾಗೆ, ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಆರ್ಮಿ ಆಫೀಸರ್. ಹೀಗಾಗಿ, ಕಾಶ್ಮೀರದ ಗಡಿ ಭಾಗದಲ್ಲಿ ಚಿತ್ರದ ಶೂಟಿಂಗ್ ನಡೆದಿತ್ತು.

ಆದ್ರೆ, ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದಲ್ಲಿ ದೊಡ್ಡ ಅಪಘಾತವೊಂದು ಸಂಭವಿಸಿ ಅದರಿಂದ ಶಿವಣ್ಣ ಮತ್ತು ಚಿತ್ರತಂಡ ಪಾರಾಗಿದ್ದರಂತೆ. ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದ್ದು, 'ಮಾಸ್ ಲೀಡರ್' ಚಿತ್ರೀಕರಣದ ವೇಳೆ ಸ್ವಲ್ಪ ಯಾಮಾರಿದ್ರು ದೊಡ್ಡ ದುರಂತವೇ ಆಗುತ್ತಿತ್ತು ಎಂದು ಚಿತ್ರತಂಡವೇ ಹೇಳಿರುವುದಾಗಿ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.

ಏನದು ಘಟನೆ? ಏನಾಯಿತು? ಶಿವಣ್ಣ ಮತ್ತು ಟೀಮ್ ಹೇಗೆ ಬಚಾವ್ ಆದರು ಎಂದು ಮುಂದೆ ಓದಿ......

ಸಾಹಸ ದೃಶ್ಯ ಚಿತ್ರೀಕರಣ

ಭಾರತ-ಪಾಕಿಸ್ತಾನ ಗಡಿಗೆ 7 ಕೀ.ಮಿ ದೂರದಲ್ಲಿ ಶಿವರಾಜ್ ಕುಮಾರ್ ಅವರು ಸ್ನೋಮೊಬಿಲ್ ರೈಡಿಂಗ್ ಮಾಡುತ್ತಾ ಚೇಸ್ ಮಾಡಿಕೊಂಡು ಉಗ್ರರ ಮೇಲೆ ಗುಂಡು ಹಾರಿಸುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಕಾಶ್ಮೀರದ ಗಲ್ ಮಾರ್ಗ್ ನಲ್ಲಿ ಈ ದೃಶ್ಯದ ಶೂಟಿಂಗ್ ಮಾಡಲಾಗುತ್ತಿತ್ತು.

'ಮಾಸ್ ಲೀಡರ್' ಚಿತ್ರದ ನೈಜಕಥೆ ಬಹಿರಂಗ!

ಹಿಮಬೈಕ್ ಪಲ್ಟಿ

ಈ ವೇಳೆ ಶಿವರಾಜ್ ಕುಮಾರ್ ಅವರು ಡ್ರೈವ್ ಮಾಡುತ್ತಿದ್ದ ಹಿಮಬೈಕ್ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಧರ್ಭದಲ್ಲಿ ಶಿವಣ್ಣ ಸ್ವಲ್ಪದ ದೂರದಿಂದ ಪ್ರಾಣಾಪಾಯದಿಂದ ದೂರಾಗಿದ್ದರಂತೆ. ವೇಗವಾಗಿ ಹೋಗುತ್ತಿದ್ದ ಬೈಕ್ ನ ಪೆವಿಲಿಯನ್ ಸೀಟ್ ನಲ್ಲಿ ಕೂತಿದ್ದ ಶಿವರಾಜ್ ಕುಮಾರ್ ಗನ್ ನಿಂದ ಎದುರಾಳಿ ಮೇಲೆ ಗುಂಡು ಹಾರಿಸುವ ದೃಶ್ಯವಿದು.

ಚಿಂದಿ ಉಡಾಯಿಸುತ್ತಿದೆ 'ಮಾಸ್ ಲೀಡರ್' ಟ್ರೈಲರ್

900 ಕೆಜಿ ತೂಕದ ಬೈಕ್

ಹಿಮಬೈಕ್ ಬರೋಬ್ಬರಿ 900 ಕೆಜಿ ತೂಕ ಹೊಂದಿರುತ್ತೆ. ಆ ಬೈಕ್ ಗಳನ್ನ ಆಕ್ಷನ್ ದೃಶ್ಯಕ್ಕೆ ಬಳಸಲಾಗಿತ್ತು. ಈ ವೇಳೆ 20 ಜನ ಪರಿಣಿತ ಸ್ನೋಮೊಬಿಲ್ ಡ್ರೈವರ್ ಗಳು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಸ್ವಾತಂತ್ರ್ಯದಿನೋತ್ಸವದ ಪ್ರಯುಕ್ತ 'ಸೆಂಚುರಿ ಸ್ಟಾರ್' ಸಿನಿಮಾ ರಿಲೀಸ್

ಘಟನೆ ಬಗ್ಗೆ ವಿಜಯ ರಾಘವೇಂದ್ರ ಏನು ಹೇಳಿದರು

''ಈ ಅವಘಡದ ವೇಳೆ ಚೈನ್ ರಿಯಾಕ್ಷನ್ ರೀತಿಯಲ್ಲಿ ಬಿದ್ದೆವು. ಚೇಸ್ ಮಾಡ್ತಾ ಮೂರು ಬೈಕ್ ಗಳು ಒಂದಾದ ಮೇಲೆ ಒಂದರಂತೆ ಸ್ಕಿಡ್ ಆದವು. ಅದು ಎತ್ತರದ ಪ್ರದೇಶ. ಬೈಕ್ ಮೇಲೆಕ್ಕೆ ಹತ್ತಬೇಕಿತ್ತು. ಸ್ಕಿಡ್ ಆದಾಗ ನಾನು ಕೂಡ ಬಿದ್ದೆ. ಹಿಂದಕ್ಕೆ ತಿರುಗಿ ನೋಡಿದರೆ ಶಿವಣ್ಣ ಬೈಕ್ ಕೂಡ ಪಲ್ಟಿ ಹೊಡಿದಿತ್ತು. ಅದೃಷ್ಟವಶಾತ್ ನಮಗೆ ಪೆಟ್ಟಾಗಲಿಲ್ಲ'' - ವಿಜಯ ರಾಘವೇಂದ್ರ, ನಟ

ನಿರ್ದೇಶಕರು ಈ ಘಟನೆ ಬಗ್ಗೆ ವಿವರಿಸಿದ್ದು ಹೀಗೆ...

''ಗಡಿಗೆ ತುಂಬಾ ಹತ್ತಿರದಲ್ಲಿರುವ ಗುಲ್ ಮಾರ್ಗ್ ಬಳಿ ಸ್ಮೋಮೊಬಿಲ್ ಮೂಲಕ ಹಿಮದಿಬ್ಬವನ್ನ ಏರುವಾಗ ಈ ಅಪಘಾತ ಸಂಭವಿಸಿತು. ಶಿವರಾಜ್ ಕುಮಾರ್ ಇಳಿಜಾರಿನಲ್ಲಿ ಬಿದ್ದಿದ್ದರೆ ಅವರ ತಲೆಯ ಕಡೆ ಏರಿಯ ಬೈಕ್ ಬಿದ್ದಿತ್ತು. ದೊಡ್ಡ ದುರಂತವೊಂದು ತಪ್ಪಿದ್ದು ನಮ್ಮ ಅದೃಷ್ಟ'' - ನರಸಿಂಹ, ನಿರ್ದೇಶಕ

English summary
Accident in shooting of Shiva rajkumar Starrer Mass Leader at kashmir. The Movie directed by narasimha, and features vijaya raghavendra, guru jaggesh, lose mada yogesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada