»   » 'ಚಕ್ರವರ್ತಿ' ಚಿತ್ರಕ್ಕಾಗಿ ಸಿಡಿದೆದ್ದ ಸ್ಟಾರ್ ನಟ

'ಚಕ್ರವರ್ತಿ' ಚಿತ್ರಕ್ಕಾಗಿ ಸಿಡಿದೆದ್ದ ಸ್ಟಾರ್ ನಟ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಪೈರಸಿ ಕಮ್ಮಿ ಎಂದು ಕನ್ನಡಿಗರು ಹೆಮ್ಮೆಯಿಂದ ಹೇಳುತ್ತಿರುತ್ತಾರೆ. ಕರ್ನಾಟಕದಲ್ಲಿ ಪೈರಸಿ ಕಮ್ಮಿ ಎಂದು ಪರಭಾಷಾ ನಟರು ಕೂಡ ಅಷ್ಟೇ ಖುಷಿಯಿಂದ ಹೇಳ್ತಾರೆ. ಹೀಗಿರುವಾಗ, ಕನ್ನಡದ ಯಶಸ್ವಿ ಸಿನಿಮಾಗಳನ್ನ ಕಿಡಿಗೇಡಿಗಳು ಪೈರಸಿ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಪೂರ್ತಿ ಸಿನಿಮಾವನ್ನ, ಫೇಸ್ ಬುಕ್ ಹಾಗೂ ಬೇರೆ ಬೇರೆ ವೆಬ್ ಸೈಟ್ ಗಳಲ್ಲಿ ಹರಿದು ಬಿಟ್ಟಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೌಡ್ ಮಾಡಿ ಕನ್ನಡ ಇಂಡಸ್ಟ್ರಿಗೆ ಮಾರಕವಾಗುತ್ತಿದ್ದಾರೆ.

ಚಕ್ರವರ್ತಿ ಚಿತ್ರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸ್ಯಾಂಡಲ್ ವುಡ್ ನಟ ಆದಿತ್ಯ ಸಿಡಿದೆದ್ದಿದ್ದಾರೆ. ಮುಂದೆ ಓದಿ....

'ಚಕ್ರವರ್ತಿ' ಸಿನಿಮಾ ಲೀಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಪೂರ್ತಿ ಲೀಕ್ ಆಗಿದೆ. ಏಪ್ರಿಲ್ 14 ರಂದು ಬಿಡುಗಡೆಯಾಗಿದ್ದ 'ಚಕ್ರವರ್ತಿ' ಚಿತ್ರವನ್ನ ಮೊಬೈಲ್ ನಲ್ಲಿ ಶೂಟ್ ಮಾಡಿ ಫೇಸ್ ಬುಕ್, ಯ್ಯೂಟ್ಯೂಬ್ ಗಳಲ್ಲಿ ಅಪ್ಲೌಡ್ ಮಾಡಲಾಗಿದೆ.

ಕನ್ನಡ ಚಿತ್ರಪ್ರೇಮಿಗಳೇ ನೀವು ಮಾಡುತ್ತಿರುವುದು ಎಷ್ಟು ಸರಿ ನೀವೇ ಹೇಳಿ?

ಕಿಡಿಗೇಡಿಗಳ ವಿರುದ್ಧ ಆದಿತ್ಯ ಗರಂ

''ಚಕ್ರವರ್ತಿ' ಚಿತ್ರವನ್ನ ಕೆಲವು ಕಿಡಿಗೇಡಿಗಳು ಮೊಬೈಲ್ ನಲ್ಲಿ ಶೂಟ್ ಮಾಡಿ ಯ್ಯೂಟ್ಯೂಬ್ ನಲ್ಲಿ ಅಪ್ಲೌಡ್ ಮಾಡಿದ್ದಾರೆ. ಇದನ್ನ ತೆಗೆದು ಹಾಕಿ. ನಮ್ಮ ಕೆಲಸಕ್ಕೆ ಅವಮಾನ ಮಾಡಲಾಗುತ್ತಿದೆ'' ಎಂದು ಆದಿತ್ಯ ಟ್ವೀಟ್ ಮಾಡಿದ್ದಾರೆ.

ಚಕ್ರವರ್ತಿ ಮೊದಲ ಪ್ರದರ್ಶನ, ಅಭಿಮಾನಿಗಳ ವಿಮರ್ಶೆ ಸಂಭ್ರಮ

ಕನ್ನಡಿಗರೇ ಇಂಡಸ್ಟ್ರಿಯನ್ನ ರಕ್ಷಿಸಿ

''ಪೈರಸಿ ವಿರುದ್ಧ ಹೋರಾಡಬೇಕು. ನಮ್ಮ ಇಂಡಸ್ಟ್ರಿಯನ್ನ ಹಾಗೂ ನಮ್ಮ ಚಿತ್ರಗಳನ್ನ ರಕ್ಷಣೆ ಮಾಡಬೇಕು. ಎಲ್ಲ ಕನ್ನಡಿಗರಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇಂತಹ ಅಪರಾಧಿಗಳನ್ನ ಹಿಡಿದು ಬುದ್ದಿ ಕಲಿಸಿ'' ಎಂದು ಆದಿತ್ಯ ಕೇಳಿಕೊಂಡಿದ್ದಾರೆ.

'ಕಿರಿಕ್ ಪಾರ್ಟಿ'ಗೂ ಪೈರಸಿ ಕಾಟ

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರಕ್ಕೂ ಪೈರಸಿ ಕಾಟ ಎದುರಾಗಿತ್ತು. 'ಕಿರಿಕ್ ಪಾರ್ಟಿ' ಸಿನಿಮಾವನ್ನ ಕೂಡ ಪೈರಸಿ ಮಾಡಿ ಅಪ್ಲೌಡ್ ಮಾಡಿದ್ದರು.

'ರಾಜಕುಮಾರ'ನಿಗೂ ಪೈರಸಿ ಭೂತ

ಇನ್ನು ಇತ್ತೀಚೆಗಷ್ಟೇ ಶತದಿನ ಆಚರಿಸಿಕೊಂಡ 'ರಾಜಕುಮಾರ' ಚಿತ್ರಕ್ಕೂ ಪೈರಸಿ ಭೂತ ಎದುರಾಗಿತ್ತು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಕೂಡ ನೀಡಿದ್ದರು.

ಬೆಂಬಿಡದಂತೆ 'ರಾಜಕುಮಾರ'ನಿಗೆ ಕಾಡುತ್ತಿರುವ ಪೈರಸಿ ಭೂತ

English summary
Kannada Actor Aditya has taken his twitter account to express his displeasure against Piracy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada