For Quick Alerts
  ALLOW NOTIFICATIONS  
  For Daily Alerts

  ಪುಟ್ಟಣ್ಣನ ಬಗ್ಗೆ ಅಂಬರೀಶ್ ಹೇಳಿದ ಕುತೂಹಲಕಾರಿ ಸಂಗತಿಗಳು

  By Naveen
  |

  ನಟ ಅಂಬರೀಶ್ ಮತ್ತೆ ಜಲೀಲನಾಗಿ ಮಿಂಚುವ ಟೈಂ ಬಂದಿದೆ. ಅವರ ಮೊದಲ ಸಿನಿಮಾ 'ನಾಗರಹಾವು' ಹೊಸ ರೂಪದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ. ಇದೇ ತಿಂಗಳ 20 ರಂದು ಸಿನಿಮಾ ರಿಲೀಸ್ ಆಗಲಿದ್ದು, ನಿನ್ನೆ ಇದರ ಬಗ್ಗೆ ಸುದ್ದಿಗೋಷ್ಟಿ ಕಾರ್ಯಕ್ರಮ ನಡೆಯಿತು.

  ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬರೀಶ್ ಟೀಸರ್, ಹಾಡುಗಳನ್ನು ನೋಡಿ ಸಂತಸ ವ್ಯಕ್ತಪಡಿದರು. ಪುಟ್ಟಣ್ಣನ ಜೊತೆಗೆ ಕೆಲಸ ಮಾಡಿದ ಅನುಭವ ಹಾಗೂ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾ ಮೇಕಿಂಗ್ ಸ್ಟೈಲ್ ಹೇಗಿತ್ತು ಎಂಬುದನ್ನು ತಮ್ಮ ಮಾತುಗಳಲ್ಲಿ ತಿಳಿಸಿದರು. 'ನಾಗರಹಾವು' ಚಿತ್ರದ ಬಗ್ಗೆ ಅನೇಕ ಕುತೂಹಲಕಾರಿ ವಿಷಯವನ್ನು ಅಂಬಿ ಹೇಳಿದರು. ಮುಂದೆ ಓದಿ...

  ಸ್ಲೋ ಮೋಷನ್ ದೃಶ್ಯ ತೆಗೆದ ದೇಶದ ಮೊದಲ ಸಿನಿಮಾ

  ಸ್ಲೋ ಮೋಷನ್ ದೃಶ್ಯ ತೆಗೆದ ದೇಶದ ಮೊದಲ ಸಿನಿಮಾ

  ''ನನಗೆ ನಮ್ಮ ತಂದೆ ತಾಯಿ ಜನ್ಮ ನೀಡಿದ್ದರೂ ಕೂಡ ನನಗೆ ಇತಿಹಾಸ ಕೊಟ್ಟ ಸಿನಿಮಾ 'ನಾಗರಹಾವು'. ಈ ಚಿತ್ರದ ಬಗ್ಗೆ ಹಲವಾರು ಘಟನೆಗಳು ನನಗೆ ಗೊತ್ತಿದೆ. ಪುಟ್ಟಣ್ಣ ತುಂಬ ಶ್ರದ್ಧೆಯಿಂದ ಸಿನಿಮಾ ಮಾಡುತ್ತಿದ್ದರು. ನಿರ್ದೇಶಕನ ಶಕ್ತಿ, ದೂರ ದೃಷ್ಟಿ ಈ ಸಿನಿಮಾದಲ್ಲಿ ಕಾಣುತ್ತದೆ. ಔಟ್ ಡೊರ್ ನಲ್ಲಿ ಸ್ಲೋ ಮೋಷನ್ ದೃಶ್ಯ ತೆಗೆದ ದೇಶದ ಮೊದಲ ಸಿನಿಮಾ ಇದು.''

  ಪುಟ್ಟಣ್ಣನ ಮೇಲೆ ವೀರಸ್ವಾಮಿ ಅವರಿಗೆ ನಂಬಿಕೆ ಇತ್ತು

  ಪುಟ್ಟಣ್ಣನ ಮೇಲೆ ವೀರಸ್ವಾಮಿ ಅವರಿಗೆ ನಂಬಿಕೆ ಇತ್ತು

  ''ಪುಟ್ಟಣ್ಣ ಒಂದು ಕಡೆ ಕ್ಯಾಮರಾ ಇಟ್ಟರೆ, ಮತ್ತೆ ಆ ಜಾಗದಲ್ಲಿ ಇಡುತ್ತಿರಲಿಲ್ಲ. ಪಾತ್ರಗಳು ಸಣ್ಣದಿದ್ದರೂ ಅದನ್ನು ಪರಿಣಾಮಕಾರಿಯಾಗಿ ತೋರಿಸುತ್ತಿದ್ದರು. ವೀರಸ್ವಾಮಿ ಅವರು ಕೂಡ ಯಾವುದಕ್ಕೂ ಕೇರ್ ಮಾಡುತ್ತಿರಲಿಲ್ಲ. ಅವರಿಗೆ ಪುಟ್ಟಣ್ಣನ ಮೇಲೆ ತುಂಬ ನಂಬಿಕೆ ಇತ್ತು.''

  ಮೊದಲು ಸ್ಟಡಿ ಕ್ಯಾಮರಾ ಬಳಸಿದ್ದು

  ಮೊದಲು ಸ್ಟಡಿ ಕ್ಯಾಮರಾ ಬಳಸಿದ್ದು

  ''ಎಲ್ ವಿ ಪ್ರಸಾದ್ ಇಡೀ ದಕ್ಷಿಣ ಭಾರತದಲ್ಲಿಯೇ ದೊಡ್ಡ ನಿರ್ಮಾಪಕರು. ಆ ಕಾಲದಲ್ಲಿ ಅವರು ಮೊದಲು ಬಾರಿಗೆ ಒಂದು ಸ್ಟಡಿ ಕ್ಯಾಮರಾ ತರಿಸಿದ್ದರು. ಸ್ಟಡಿ ಕ್ಯಾಮರಾ ಆಗ ಹೊಸದಾಗಿತ್ತು. ಆ ಕ್ಯಾಮರಾ ಬಂದಾಗ ಮೊದಲ ಶಾಟ್ ಅನ್ನು ಪುಟ್ಟಣ್ಣ ಅವರೇ ತೆಗೆಯಬೇಕು ಎಂದು ಅದನ್ನು ಕಳಿಸಿದ್ದರು. ಆ ಕ್ಯಾಮರಾದಲ್ಲಿಯೇ 'ಮಸಣದ ಹೂ' ಸಿನಿಮಾದಲ್ಲಿ ಒಂದು ಶಾಟ್ ತೆಗೆದರು.''

  ಈಗಲೂ ಈ ಸಿನಿಮಾ ಓಡುತ್ತದೆ

  ಈಗಲೂ ಈ ಸಿನಿಮಾ ಓಡುತ್ತದೆ

  ''ಇವತ್ತಿನ ಹಾಗೆ ಡಿಜಿಟಲ್ ಆಗ ಇರಲಿಲ್ಲ. ರೀಲ್ ಗಳು ತುಂಬ ದುಬಾರಿ ಇತ್ತು. ಇವತ್ತು ಬಾಲಾಜಿ ಆ ಚಿತ್ರಕ್ಕೆ ಹೊಸ ರೂಪ ನೀಡಿದ್ದಾನೆ ಅವನಿಗೆ ಹ್ಯಾಟ್ಸಫ್. ಕಷ್ಟ ಪಟ್ಟು ಶ್ರದ್ಧೆಯಿಂದ ರವಿಚಂದ್ರನ್, ಬಾಲಾಜಿ ಈ ಕೆಲಸ ಮಾಡಿದ್ದಾರೆ. ಈಗಲೂ ಈ ಸಿನಿಮಾ ಓಡುತ್ತದೆ ಎಂಬ ನಂಬಿಕೆ ಇದೆ.''

  ನನ್ನ ಯಶಸ್ಸನ ಮೊದಲ ಮೆಟ್ಟಿಲು 'ನಾಗರಹಾವು'

  ನನ್ನ ಯಶಸ್ಸನ ಮೊದಲ ಮೆಟ್ಟಿಲು 'ನಾಗರಹಾವು'

  ''ನಾನು ಒಬ್ಬ ಖಳ ನಟನಾಗಿ ಬಂದು, ಪೋಷಕ ನಟನಾಗಿ, ನಾಯಕ ನಟನಾಗಿ, ಜನನಾಯಕನಾಗಿ, ಅಬ್ದುಲ್ ಕಲಾಂ ಅವರ ಮುಂದೆ ಪ್ರಮಾಣ ವಚನ ಸ್ವೀಕರಿದ್ದೇನೆ ಎಂದರೆ ಅದಕ್ಕೆಲ್ಲ ಮೊದಲ ಮೆಟ್ಟಿಲು 'ನಾಗರಹಾವು' ಸಿನಿಮಾ'. ನನ್ನ ಇಂದಿನ ಎಲ್ಲ ಸಾಧನೆಗಳಿಗೆ ಆ ಸಿನಿಮಾವೆ ಕಾರಣ.''

  English summary
  Kannada actor Ambareesh spoke about 'Nagarahaavu' kannada movie The movie will re releasing on july 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X