For Quick Alerts
  ALLOW NOTIFICATIONS  
  For Daily Alerts

  ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನಕ್ಕೆ ಅಮಿತಾಬ್ ಬಚ್ಚನ್ ಸಂತಾಪ

  |

  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಸಿ ಎಂ ಮನೋಹರ್ ಪರಿಕ್ಕರ್ ಭಾನುವಾರ ನಿಧನರಾಗಿದ್ದಾರೆ. ಕಳೆದ ವರ್ಷ ಮೇದೋಜ್ಜೀರಕ ಗ್ರಂಥಿ ಸಮಸ್ಯೆಗಾಗಿ ಚಿಕಿತ್ಸೆ ಪಡೆದಿದ್ದ ಅವರು, ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

  ಸಜ್ಜನ ಸರಳ, ರಾಜಕಾರಣಿ ಪರಿಕ್ಕರ್ ನಿಧನಕ್ಕೆ ಇಡೀ ದೇಶವೆ ಕಂಬನಿ ಮಿಡಿದಿದೆ. ರಾಜಕೀಯ ಗಣ್ಯರು ಮಾತ್ರವಲ್ಲದೆ ಬಾಲಿವುಡ್ ನಟರು ಸಹ ಪರಿಕ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಪರಿಕರ್ ಜೊತೆ ಕಳೆದ ಕೆಲವು ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

  ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ನಿಧನ

  ''ಮನೋಹರ್ ಪರಿಕ್ಕರ್ ಇನ್ನಿಲ್ಲ, ಸೌಮ್ಯ ಸ್ವಭಾವದ, ಗೌರವದ, ಸರಳ ವ್ಯಕ್ತಿ. ಧೈರ್ಯದಿಂದನೇ ಅನಾರೋಗ್ಯದ ವಿರುದ್ಧ ಹೋರಾಡಿದವರು. ಕೆಲವು ಸಂದರ್ಭಗಳಲ್ಲಿ ನಾನು ಅವರ ಜೊತೆ ಕಾಲ ಕಳೆದಿದ್ದೇನೆ. ಮೃದುವಾದ ನಗು ಅವರ ಮುಖದ ಮೇಲೆ ಸದಾ ಹೊಳೆಯುತ್ತಿತ್ತು. ಅವರ ನಿಧನದ ಸುದ್ದಿ ತುಂಬ ದುಃಖ ತಂದಿದೆ''' ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.

  ಕೆಲವು ಕಾರ್ಯಕ್ರಮದಲ್ಲಿ ಅಮಿತಾಬ್, ಪರಿಕ್ಕರ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಅದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತಾ ಆತ್ಮಕ್ಕೆ ಶಾಂತಿ ಅಮಿತಾಬ್ ಶಾಂತಿ ಕೋರಿದ್ದಾರೆ.

  ಮನೋಹರ್ ಪರಿಕ್ಕರ್ ಅಂತ್ಯ ಸಂಸ್ಕಾರ ಎಲ್ಲಿ? ಯಾವಾಗ?

  ಇನ್ನು ನಟಿ ಯಾಮಿ ಗೌತಮ್ ಕೂಡ ಪರಿಕ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ''ಪರಿಕ್ಕರ್ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಕೊಡಲಿ. ನಿಧನದ ಸುದ್ದಿ ಕೇಳಿ ತುಂಬ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದಿದ್ದಾರೆ.

  English summary
  Bollywood actor Amitabh Bachan and actress Yami Gautam pay their condolence to manohar parrikar . Goa CM Manohar Parrikar passes away on Sunday (March 17th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X