Don't Miss!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!
Recommended Video

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ನಟ ಶ್ರುತಿ ಹರಿಹರನ್ ಗಂಭೀರ ಆರೋಪ ಮಾಡಿದ್ದಾರೆ. 'ವಿಸ್ಮಯ' ಸಿನಿಮಾದ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತನೆ ಮಾಡಿದ್ದರು, ನನ್ನನ್ನು ರೆಸಾರ್ಟ್ ಗೆ ಕರೆದಿದ್ದರು ಎಂದು ಶ್ರುತಿ ಹರಿಹರನ್ ಹೇಳಿದ್ದರು.
'ರೆಸಾರ್ಟ್
ಗೆ
ಹೋಗೋಣ
ಬಾ'
ಎಂದು
ಕರೆದರು
:
ಸರ್ಜಾ
ಮೇಲೆ
ಶ್ರುತಿ
ಬಾಂಬ್!
ನಟಿ ಶ್ರುತಿ ಹರಿಹರನ್ ಮಾಡಿದ ಆರೋಪದ ಬಗ್ಗೆ ಈಗ ಅರ್ಜುನ್ ಸರ್ಜಾ ಮಾತನಾಡಿದ್ದಾರೆ. ''ಈ ರೀತಿ ಯಾಕೆ ಹೇಳುತ್ತಿದ್ದಾರೆ ನನಗೆ ತಿಳಿದಿಲ್ಲ. ನಾನು ಈ ರೀತಿ ಮಾಡಿಲ್ಲ. ಅವರನ್ನು ಸುಮ್ಮ ಸುಮ್ಮನೆ ತಬ್ಬಿಕೊಳ್ಳಬೇಕು ಎನ್ನುವ ಅಗತ್ಯ ನನಗೆ ಇಲ್ಲ. ಪ್ರಚಾರಕ್ಕೆ ಈ ರೀತಿ ಮಾಡುತ್ತೀದ್ದಾರರೊ ಏನೋ'' ಎಂದು ಘಟನೆ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದಾರೆ. ಮುಂದೆ ಓದಿ...

ಇಂತಹ ಚೀಪ್ ಮೆಂಟಾಲಿಟಿ ಬಂದಿಲ್ಲ
''ನನಗೆ ಇಂತಹ ಚೀಪ್ ಮೆಂಟಾಲಿಟಿ ಬಂದಿಲ್ಲ, ಬರುವುದೂ ಇಲ್ಲ. ಈ ಮಾತು ಕೇಳಿ ತುಂಬಾನೇ ಬೇಜಾರಾಗ್ತಿದೆ. ಬಟ್, ಆಕೆಯ ವಿರುದ್ಧ ಮಾನ ನಷ್ಟ ಮೊಕದ್ದಮೆ ಹಾಕ್ತೀನಿ. ಮಹಿಳೆಯರ ಮೇಲೆ ನನಗೆ ತುಂಬಾ ಗೌರವವಿದೆ. 'ಯಾವ ಹೆಣ್ಣಿಗೂ ನಾನು ಅವಮಾನ ಮಾಡಿಲ್ಲ, ಮಾಡೋದಿಲ್ಲ.'' - ಅರ್ಜುನ್ ಸರ್ಜಾ, ನಟ
ಶ್ರುತಿ
ಹರಿಹರನ್
ವಿರುದ್ಧ
ಸಿಡಿದೆದ್ದ
'ಕುರುಕ್ಷೇತ್ರ'
ನಿರ್ಮಾಪಕ
ಮುನಿರತ್ನ

ಸುಮ್ಮನೆ ಮೈ ಮುಟ್ಟುವವನು ನಾನಲ್ಲ
''ಮೀಟೂ ಬಗ್ಗೆ ನನಗೆ ಗೌರವವಿದೆ. ಆದರೆ, ಒಳ್ಳೆಯ ವಿಷ್ಯಕ್ಕೆ ಇದನ್ನು ಬಳಸುವುದು ಉತ್ತಮ, ಸುಮ್ಮನೆ ಹೇಳೋದು ಸರಿಯಿಲ್ಲ. ಇದರ ಹಿನ್ನೆಲೆ ಏನು, ಏನಾದರೂ ಸಾಕ್ಷಿ ಇದ್ರೆ ಕರೆಕ್ಟ್. ಶೂಟಿಂಗ್ ನೆಪದಲ್ಲಿ ಸುಮ್ಮನೆ ಮೈ ಮುಟ್ಟುವವನು ನಾನಲ್ಲ. 150 ಚಿತ್ರದಲ್ಲಿ 60-70 ಜನ ಹೀರೋಯಿನ್ ಜೊತೆಗೆ ನಟಿಸಿದ್ದೇನೆ. ಯಾರು ಇಂತಹ ಆರೋಪ ಮಾಡಿಲ್ಲ.'' - ಅರ್ಜುನ್ ಸರ್ಜಾ, ನಟ
ಅಳಿಯನ
ಬಗ್ಗೆ
ಬಂದ
ಆಪಾದನೆಗೆ
ನಟ
ರಾಜೇಶ್
ಗರಂ!

ಆಕೆಯ ಬಗ್ಗೆ ಹೇಳಿದ್ದು ಒಂದೇ ಮಾತು
''ಇದು ಒಂದೂವರೆ ವರ್ಷದ ಹಿಂದಿನ ಸಿನಿಮಾ. ಆಗ ಅವರ ಬಗ್ಗೆ ನಾನು ಒಂದೇ ಒಂದು ಮಾತಾಡಿದ್ದು. ಚೆನ್ನಾಗಿ ಆಕ್ಟ್ ಮಾಡ್ತಾರೆ, ಕನ್ನಡ ಹಾಗೂ ತಮಿಳು ಎರಡೂ ಭಾಷೆಯನ್ನು ಚೆನ್ನಾಗಿ ಮಾತನಾಡುತ್ತಾರೆ ಎಂದು ಹೇಳಿದ್ದೆ ಅಷ್ಟೇ. ಸಿನಿಮಾ ಮುಗಿದ ಮೇಲೆ ನಿಮ್ಮ ಜೊತೆ ಇನ್ನೊಂದು ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಖಂಡಿತಾ ಮಾಡೋಣ ಅಂದಿದ್ದೆ.'' - ಅರ್ಜುನ್ ಸರ್ಜಾ, ನಟ

ನಾಚಿಕೆ ಆಗಬೇಕು
''ಇಷ್ಟು ವರ್ಷದ ನಂತರ ನನ್ನ ಮೇಲೆ ಆರೋಪ ಮಾಡಿದ್ದನ್ನು ನೋಡಿ ಶಾಕ್ ಆಗ್ತಿದೆ. ನಟನೆ ಮಾಡುವುದು ಕ್ಯಾಮೆರಾ ಹಿಂದೆನಾ ಅಥವಾ ಕ್ಯಾಮೆರಾ ಮುಂದೆನಾ?. ಚಿತ್ರೀಕರಣ ಮಾಡುವ ಸಮಯದಲ್ಲಿ 200-250 ಜನ ಇರ್ತಾರೆ. ಎಲ್ಲರ ಮುಂದೆ ನಾನು ಹಾಗೆ ಮಾಡಲು ಸಾಧ್ಯವೇ. ಸುಮ್ಮನೆ ಹೀಗೆ ಮಾಡುವುದಕ್ಕೆ ನಾಚಿಕೆ ಆಗಬೇಕು.'' - ಅರ್ಜುನ್ ಸರ್ಜಾ, ನಟ

ಮೌನಂ ಸಮ್ಮತಂ ಅಂದುಕೊಳ್ಳುತ್ತಾರೆ
''ನಾನು ಸೈಲೆಂಟ್ ಆಗಿದ್ರೆ ಮೌನಂ ಸಮ್ಮತಂ ಅಂದುಕೊಳ್ಳುತ್ತಾರೆ ಎನ್ನುವ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ನಿಜಾ ನನ್ನ ಸ್ನೇಹಿತರಿಗೆ, ಎಲ್ಲರಿಗೂ ಗೊತ್ತಾಗಲಿ. ಈ ತರ ತುಂಬಾ ಬರುತ್ತೆ ಆರೋಪ ಬರುತ್ತದೆ. ಇವುಗಳನ್ನು ಇಗ್ನೋರ್ ಮಾಡ್ಕೊಂಡು ಹೋಗ್ತಿರಬೇಕು.'' - ಅರ್ಜುನ್ ಸರ್ಜಾ, ನಟ

ಆಗಲೇ ಹೇಳಬಹುದಿತ್ತು ಅಲ್ವಾ
''ಆ ಚಿತ್ರದಲ್ಲಿ ಗಂಡ-ಹೆಂಡತಿಯ ಸಂಬಂಧದ ದೃಶ್ಯಗಳು ಹೆಚ್ಚಿತ್ತು. ನಾನೇ ನಿರ್ದೇಶಕರಿಗೆ ಹೇಳಿ ಕಟ್ ಮಾಡಿಸಿದೆ. ನನಗೆ ಅದು ಮುಜುಗರ ಆಗುತ್ತಿತ್ತು. ರಿಹರ್ಸಲ್ ನಲ್ಲಿ ಡೈರೆಕ್ಟರ್, ಇಡೀ ಯೂನಿಟ್ ಎಲ್ಲರೂ ಇರ್ತಾರೆ. ಅಲ್ಲಿ ಹಾಗೆ ಮಾಡಲಿ ಸಾಧ್ಯವೆ. ಇಂತಹ ಘಟನೆ ನಿಜವಾಗಿಯೂ ನೆಡೆದಿದ್ದರೆ ಆಗಲೇ ಹೇಳಬಹುದಿತ್ತು ಅಲ್ವಾ.'' - ಅರ್ಜುನ್ ಸರ್ಜಾ, ನಟ

ಈ ಬಗ್ಗೆ ಕೇಸ್ ಹಾಕುತ್ತೇನೆ
''ಈ ಆರೋಪದ ಬಗ್ಗೆ ನಾನು ಸುಮ್ಮನೆ ಇರುವುದಿಲ್ಲ. ಅವರ ವಿರುದ್ದ ಕೇಸ್ ಹಾಕುತ್ತೇನೆ. ಈಗಾಗಲೇ ಅದರ ಬಗ್ಗೆ ಚರ್ಚೆ ಮಾಡುತ್ತೀದ್ದೇನೆ. ನನಗೆ ತುಂಬ ಕೆಲಸಗಳು ಇವೆ. ನಾನ್ ಯಾಕೆ ಅವರನ್ನು ರೆಸಾರ್ಟ್ ಗೆ ಕರೆಯಲಿ. ಇದು ಎಲ್ಲ ನಾಟಕ ಅಲ್ವಾ'' - ಅರ್ಜುನ್ ಸರ್ಜಾ, ನಟ