For Quick Alerts
  ALLOW NOTIFICATIONS  
  For Daily Alerts

  ''ಭಿಕ್ಷೆ ಬೇಡಿ ನನ್ನ ಹೆಣ ಎತ್ತಬೇಕು'' ಎಂದಿದ್ದರು ಬುಲೆಟ್ ಪ್ರಕಾಶ್ ತಂದೆ

  By Naveen
  |

  ನಟ ಬುಲೆಟ್ ಪ್ರಕಾಶ್ ಸಿನಿಮಾದಲ್ಲಿ ಎಲ್ಲರನ್ನು ನಗಿಸುತ್ತಾರೆ. ಆದರೆ ಸಿನಿಮಾಗೆ ಬರುವ ಮುಂಚೆ ಅವರು ಅನುಭವಿಸಿರುವ ನೋವು ಕೇಳಿದರೆ ಎಲ್ಲರಲ್ಲಿ ಕಣ್ಣೀರು ಬರುತ್ತದೆ.

  ಬಡತನದಲ್ಲಿ ಬೆಳೆದ ಬುಲೆಟ್ ಪ್ರಕಾಶ್ ಚಿಕ್ಕ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ಕಷ್ಟಗಳನ್ನು ನೋಡಿಕೊಂಡು ಬಂದಿದ್ದಾರೆ. ಅವರ ತರ್ಲೆ, ಪುಂಡನ ರೀತಿಯ ಸ್ವಭಾವ ನೋಡಿ ಅವರ ತಂದೆ ''ನಾನು ಸತ್ತರೆ ಬಿಳಿ ಬಟ್ಟೆ ರಸ್ತೆಯಲ್ಲಿ ಹಾಕಿ ಬಿಕ್ಷೆ ಬೇಡಿ ನನ್ನ ಹೆಣ ಎತ್ತಬೇಕು ಹಾಗೆ ಪರಿಸ್ಥಿತಿ ಆಗುತ್ತದೆ'' ಎಂದಿದ್ದರಂತೆ. ಆದರೆ ಇಂದು ಎಲ್ಲ ಕಷ್ಟಗಳನ್ನು ಮೀರಿ, ಸಾವನ್ನು ಕೂಡ ಬುಲೆಟ್ ಪ್ರಕಾಶ್ ಗೆದ್ದಿದ್ದಾರೆ. ಮುಂದೆ ಓದಿ...

  ತಂದೆ ಹೇಳಿದ್ದ ಮಾತು

  ತಂದೆ ಹೇಳಿದ್ದ ಮಾತು

  ''ನಾನು ಸತ್ತರೆ ಬಿಳಿ ಬಟ್ಟೆ ರಸ್ತೆಯಲ್ಲಿ ಹಾಕಿ ಭಿಕ್ಷೆ ಬೇಡಿ ನನ್ನ ಹೆಣ ಎತ್ತಬೇಕು ಎಂದು ನಮ್ಮ ತಂದೆ ಹೇಳಿದ್ದರು. ಯಾಕೆಂದರೆ, ನಾನು ಸಿಕ್ಕಾಪಟ್ಟೆ ತರ್ಲೆ, ಪುಂಡ ಆಗಿದ್ದೆ. ಯಾರ ಮಾತು ಕೇಳುತ್ತಿರಲಿಲ್ಲ. ಈಗ ಎರಡು ರೀತಿಯ ಜೀವನ ನೋಡಿದ್ದೇನೆ. ಗುಡಿಸಲಿನಲ್ಲಿಯೂ ಮಲಗಿದ್ದೆ, ಫೈವ್ ಸ್ಟಾರ್ ಹೋಟೆಲ್ ನಲ್ಲಿಯೂ ಮಲಗಿದ್ದೆ.''

  84 ವರ್ಷ ಬದುಕುತ್ತೇನೆ ಎಂದರು ಗುರುಗಳು

  84 ವರ್ಷ ಬದುಕುತ್ತೇನೆ ಎಂದರು ಗುರುಗಳು

  ''84 ವರ್ಷ 6ತಿಂಗಳು 5 ದಿವಸ ನಿನ್ನ ಆಯಸ್ಸು' ಎಂದು ಒಬ್ಬ ದೊಡ್ಡ ಗುರುಗಳು ಹೇಳಿದ್ದಾರೆ. ಆದರೆ ನನಗೆ ಅಷ್ಟೊಂದು ಆಯಸ್ಸು ಬೇಡ. ಈಗ ನನಗೆ 42 ವರ್ಷ. ನಾನು 55- 60 ವರ್ಷ ಬದುಕಿದರೆ ಸಾಕು. ನಾನು ನೋಡಬೇಕಾಗಿರುವುದು, ಅನುಭವಿಸಬೇಕಾಗಿರುವುದು ಎಲ್ಲ ಆಗಿದೆ.''

  ಬುಲೆಟ್ ಪ್ರಕಾಶ್ ಗೆ ಮತ್ತೊಂದು ಅವಕಾಶ ಕೊಡ್ತಾರಾ ದಾಸ ದರ್ಶನ್ ? ಬುಲೆಟ್ ಪ್ರಕಾಶ್ ಗೆ ಮತ್ತೊಂದು ಅವಕಾಶ ಕೊಡ್ತಾರಾ ದಾಸ ದರ್ಶನ್ ?

  ಮಗಳ ಮದುವೆ ಮಾಡಬೇಕು

  ಮಗಳ ಮದುವೆ ಮಾಡಬೇಕು

  ''ನನ್ನ ಇಬ್ಬರು ಮಕ್ಕಳಿಗೆ ಒಂದು ದಾರಿ ಮಾಡಬೇಕು. ನನ್ನ ಮಗಳಿಗೆ ಮದುವೆ ಮಾಡಬೇಕು. ನನ್ನ ಮಗನಿಗೆ ಮುಂದೆ ಒಳ್ಳೆ ಭವಿಷ್ಯ ನೀಡಬೇಕು. 2018 ಜೂನ್ ಗೆ ನನ್ನ ಎಲ್ಲ ಕಂಟಕ ಮುಗಿದಿದೆ. ಇನ್ನೇನಾದರೂ ಒಳ್ಳೆಯ ದಿನಗಳನ್ನು ನಾನು ನನ್ನ ಕುಟುಂಬ ಅನುಭವಿಬೇಕು.''

  ರಾಜಕೀಯದಲ್ಲಿ ಬೆಳೆಯುವ ಆಸೆ ಇದೆ

  ರಾಜಕೀಯದಲ್ಲಿ ಬೆಳೆಯುವ ಆಸೆ ಇದೆ

  ''ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿರುವ ಸಮಯದಲ್ಲಿಯೇ ನನಗೆ ರಾಜಕೀಯದ ಆಸೆ ಹುಟ್ಟಿತ್ತು. ಆಗ ಕೆಲವು ಕಾರ್ಯಕ್ರಮಗಳಲ್ಲಿ ವೈಕ್ ನಲ್ಲಿ ಅನೌನ್ಸ್ ಮಾಡುತ್ತಿದ್ದೆ. ಈಗ ರಾಜಕೀಯಕ್ಕೆ ಬಂದಿದ್ದೇನೆ. ಒಳ್ಳೆಯ ಸ್ಥಾನದಲ್ಲಿ ಇದ್ದೇನೆ. ರಾಜಕೀಯದಲ್ಲಿ ಬೆಳೆಯುವ ನನಗೆ ಆಸೆ ಇದೆ.''

  ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ! ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ!

  English summary
  Kannada comedy actor Bullet Prakash spoke about his father.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X