For Quick Alerts
  ALLOW NOTIFICATIONS  
  For Daily Alerts

  ಬಹುದಿನಗಳ ಆಸೆಯನ್ನ ಈಡೇರಿಸಲು ಹೊರಟ ನಟ ಚರಣ್ ರಾಜ್

  By Bharath Kumar
  |
  ಮೂರು ವರ್ಷದ ನಂತರ ಬಂದ ಚರಣ್ ತಂದರು ಅಚ್ಚರಿಯ ಸುದ್ದಿ | Filmibeat Kannada

  ಕನ್ನಡದ ಪ್ರೇಕ್ಷಕರಿಗೆಲ್ಲ ನಟನಾಗಿ ಚಿರಪರಿಚಿತರಾಗಿರುವ ಚರಣ್ ರಾಜ್, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಖ್ಯಾತಿ ಹೊಂದಿರುವ ಕಲಾವಿದ. ಬಹುಭಾಷೆಗಳಲ್ಲಿ ಬ್ಯುಸಿಯಿರುವ ಚರಣ್ ರಾಜ್ ಆಗಾಗ ಕನ್ನಡದಲ್ಲಿ ಸಿನಿಮಾ ಮಾಡುತ್ತಿರುತ್ತಾರೆ. ಆದ್ರೀಗ, ಕನ್ನಡದಲ್ಲಿ ಹೊಸ ವೃತ್ತಿಯನ್ನ ಆರಂಭಿಸಲಿದ್ದಾರೆ.

  ಹೌದು, ಚರಣ್ ರಾಜ್ ಅವರು ಕನ್ನಡದಲ್ಲಿ ಹೊಸ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಪೂರ್ವ ತಯಾರಿ ಈಗಾಗಲೇ ಮಾಡಿಕೊಂಡಿದ್ದು, ಚಿತ್ರವನ್ನ ಆರಂಭಿಸಲು ಸಿದ್ದವಾಗಿದ್ದಾರೆ.

  ಇಷ್ಟು ದಿನ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಕೇವಲ ನಟನಾಗಿದ್ದ ಚರಣ್ ರಾಜ್ ಅವರನ್ನ ಇನ್ಮುಂದೆ ನಿರ್ದೇಶಕರಾಗಿಯೂ ನೋಡುವ ಅವಕಾಶ ಸಿಕ್ಕಿದೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಚರಣ್ ರಾಜ್ ಅವರ ಮಗ ಕೂಡ ಅಭಿನಯಿಸಲಿದ್ದಾರೆ. ಹಾಗಿದ್ರೆ, ಚರಣ್ ರಾಜ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಯಾವುದು? ಯಾವಾಗ ಆರಂಭ ಎಂಬ ಪೂಣ ಮಾಹಿತಿ ತಿಳಿಯಲು ಮುಂದೆ ಓದಿ.......

  ಏಪ್ರಿಲ್ 27 ರಂದು ಆರಂಭ

  ಏಪ್ರಿಲ್ 27 ರಂದು ಆರಂಭ

  ಇದೇ ಏಪ್ರಿಲ್ 27 ರಂದು ನಟ ಚರಣ್ ರಾಜ್ ಅವವರ ಹುಟ್ಟುಹಬ್ಬವಿದೆ. ಈ ವಿಶೇಷ ದಿನದಂದು ಚರಣ್ ನಿರ್ದೇಶನ ಮಾಡಲಿರುವ ಕನ್ನಡ ಚಿತ್ರದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದಾರೆ.

  ಪಕ್ಕಾ ಕಾಮಿಡಿ ಸಿನಿಮಾ

  ಪಕ್ಕಾ ಕಾಮಿಡಿ ಸಿನಿಮಾ

  ಚರಣ್ ನಿರ್ದೇಶನ ಮಾಡಲಿರುವ ಈ ಚಿತ್ರ ಪಕ್ಕಾ ಕಾಮಿಡಿ ಟ್ರ್ಯಾಕಿನ ಮರ್ಡರ್ ಮಿಸ್ಟರಿ. ಇಷ್ಟು ಬಿಟ್ಟರೇ, ಬೇರೆ ಯಾವ ಎಂಬ ಸುಳಿವನ್ನ ಚರಣ್ ರಾಜ್ ಬಿಟ್ಟುಕೊಟ್ಟಿಲ್ಲ. ಎಲ್ಲವನ್ನೂ ಹುಟ್ಟುಹಬ್ಬದ ದಿನವೇ ಘೋಷಣೆ ಮಾಡಲಿದ್ದಾರಂತೆ.

  ಚರಣ್ ರಾಜ್ ಮಗನ ಅಭಿನಯ

  ಚರಣ್ ರಾಜ್ ಮಗನ ಅಭಿನಯ

  ಈ ಚಿತ್ರದ ನಾಯಕ ಮತ್ತು ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಕನ್ನಡದ ಖ್ಯಾತ ಕಾಮಿಡಿ ನಟರೋರ್ವರು ಮುಖ್ಯಪಾತ್ರವೊಂದನ್ನು ಮಾಡಲಿದ್ದಾರಂತೆ. ಚರಣ್ ರಾಜ್ ಅವರ ಪುತ್ರ ತೇಜ್ ಕೂಡಾ ಈ ಚಿತ್ರದ ಭಾಗವಾಗಲಿದ್ದಾರೆಂಬುದು ವಿಶೇಷ. ತೇಜ್ ಈ ಚಿತ್ರದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆ ಹಾಡೂ ಕೂಡಾ ಒಟ್ಟಾರೆ ಕಥೆಯಲ್ಲಿ ಪ್ರಧಾನ ಪಾತ್ರ ಹೊಂದಿರಲಿದೆಯಂತೆ.

  ತಮಿಳಿನಲ್ಲಿ ಅಭಿನಯಿಸಿರುವ ತೇಜ್

  ತಮಿಳಿನಲ್ಲಿ ಅಭಿನಯಿಸಿರುವ ತೇಜ್

  ಅಂದ್ಹಾಗೆ, ಚರಣ್ ರಾಜ್ ಪುತ್ರ ತೇಜ್ ಈಗ ತಮಿಳಿನಲ್ಲಿ ಬಹು ಬೇಡಿಕೆಯ ನಾಯಕ ನಟ. ತೇಜ್ ಅಭಿನಯದ 'ಲಾಲಿ' ಎಂಬ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಇನ್ನೊಂದು ಚಿತ್ರ ತೆರೆಕಾಣುವ ಸನಿಹದಲ್ಲಿದೆ.

  ಚಿತ್ರದ ತಾಂತ್ರಿಕ ತಂಡ

  ಚಿತ್ರದ ತಾಂತ್ರಿಕ ತಂಡ

  ಇನ್ನುಳಿದಂತೆ ಈ ಚಿತ್ರವನ್ನು ಮಂಜುನಾಥ್ ಎಂಆರ್ ಎಲ್, ಎನ್ ರವಿ ಕುಮಾರ್, ಎಸ್‌ವಿಕೆ ಬ್ರದರ್ಸ್, ಸಿ ದೇವೇಂದ್ರ ರಾಜ್ ಸೇರಿದಂತೆ ಹೊಸೂರು ಸ್ನೇಹಿತರೇ ಸೇರಿಕೊಂಡು ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ನಿರ್ದೇಶನವನ್ನು ಚರಣ್ ರಾಜ್ ಅವರೇ ಮಾಡಲಿದ್ದಾರೆ. ಸಾಯಿಕೃಷ್ಣ ಸಂಭಾಷಣೆ ಬರೆಯಲಿದ್ದಾರೆ.

  ಮೂರು ವರ್ಷದ ನಂತರ ಬಂದ ಚರಣ್ ತಂದರು ಅಚ್ಚರಿಯ ಸುದ್ದಿಮೂರು ವರ್ಷದ ನಂತರ ಬಂದ ಚರಣ್ ತಂದರು ಅಚ್ಚರಿಯ ಸುದ್ದಿ

  English summary
  South Indian Famous Kannada actor charan raj is back to sandalwood as a director. he has set to date april 27th for launch of his directorial movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X