For Quick Alerts
  ALLOW NOTIFICATIONS  
  For Daily Alerts

  ತಮ್ಮನ ಲವ್ ಮ್ಯಾರೇಜ್ ಬಗ್ಗೆ ಏನಂತಾರೆ ಚಿರು ಸರ್ಜಾ?

  |
  ತಮ್ಮನ ಲವ್ ಮ್ಯಾರೇಜ್ ಬಗ್ಗೆ ಏನಂತ್ತಾರೆ ಚಿರು ಸರ್ಜಾ? | FILMIBEAT KANNADA

  ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ ಮದುವೆಗೆ ರೆಡಿಯಾಗುತ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಲವ್ ಮೂಡ್ ನಲ್ಲಿ ಇದ್ದಾರೆ. ಅವರ ನಿಶ್ಚಿತಾರ್ಥ ಮುಂದಿನ ತಿಂಗಳು ನಡೆಯಲಿದೆ.

  ಕೆಲ ತಿಂಗಳ ಹಿಂದೆಯಷ್ಟೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ವಿವಾಹ ನಡೆದಿತ್ತು. ಅಣ್ಣನ ನಂತರ ಈಗ ಧ್ರುವಗೆ ಕೂಡ ಕಂಕಣ ಭಾಗ್ಯ ಕೂಡಿ ಬಂದಿದೆ. ಧ್ರುವ ಹಾಗೂ ಪ್ರೇರಣಾ ಅವರ ನಿಶ್ಚಿತಾರ್ಥ ಡಿಸೆಂಬರ್ 9 ರಂದು ನಡೆಯಲಿದೆ.

  ಧ್ರುವಗೆ ಪ್ರೀತಿಯ ಪಾಠ ಮಾಡಿದ ಈ ಟೀಚರ್ ಯಾರು?

  ಅಂದಹಾಗೆ, ಇದೀಗ ತಮ್ಮ ಪ್ರೇಮ ವಿವಾಹದ ಬಗ್ಗೆ ಅಣ್ಣ ಚಿರು ಮಾತನಾಡಿದ್ದಾರೆ. ಸಹೋದರನಿಗೆ ಮನಸ್ಸಿನಿಂದ ಶುಭಾ ಹಾರೈಸಿದ್ದಾರೆ. ಮುಂದೆ ಓದಿ...

  ಇಡೀ ಕುಟುಂಬ ಸಂತಸದಲ್ಲಿದೆ

  ಇಡೀ ಕುಟುಂಬ ಸಂತಸದಲ್ಲಿದೆ

  ''ಮನೆಯಲ್ಲಿ ಇನ್ನೊಂದು ನಿಶ್ಚಿತಾರ್ಥ ನಡೆಯುತ್ತಿದೆ. ನಮ್ಮ ಕುಟುಂಬದಲ್ಲಿ ಇನ್ನೊಬ್ಬ ಹೊಸ ಸದಸ್ಯರು ಬರುತ್ತಿದ್ದಾರೆ. ಇದು ಒಂದು ರೀತಿಯ ಸಂಭ್ರಮ. ಎಲ್ಲರ ಮನೆಯಲ್ಲಿ ಇರುವ ಹಾಗೆ, ನಮ್ಮ ಇಡೀ ಕುಟುಂಬ ಕೂಡ ಈ ಸಮಯದಲ್ಲಿ ಸಂತಸದಲ್ಲಿದೆ.'' - ಚಿರಂಜೀವಿ ಸರ್ಜಾ, ನಟ

  'ಬಹದ್ದೂರ್' ಗಂಡು ಧ್ರುವ ಸರ್ಜಾಗೆ ಕೂಡಿ ಬಂತು ಕಂಕಣ ಭಾಗ್ಯ

  ನಮ್ಮ ಮನೆತನಕ್ಕೆ ಹೇಳಿ ಮಾಡಿಸಿದ ಹುಡುಗಿ

  ನಮ್ಮ ಮನೆತನಕ್ಕೆ ಹೇಳಿ ಮಾಡಿಸಿದ ಹುಡುಗಿ

  ''ಇಂತಹ ಒಳ್ಳೆಯ ಹುಡುಗಿ ನಮ್ಮ ಮನೆ ಸೊಸೆ ಆಗುತ್ತಿದ್ದಾರೆ ಎಂದು ಖುಷಿ ಆಗುತ್ತಿದೆ. ನಮ್ಮ ಮನೆತನಕ್ಕೆ ಹೇಳಿ ಮಾಡಿಸಿದ ಹುಡುಗಿ. ತುಂಬ ಜವಾಬ್ದಾರಿ ಇರುವ ಹೆಣ್ಣು. ಖುಷಿಯಾಗಿ ಎಲ್ಲರೂ ಅಭಿಮಾನಿಗಳು ಆರಸಬೇಕು.'' - ಚಿರಂಜೀವಿ ಸರ್ಜಾ, ನಟ

  ಧ್ರುವಗೆ ಒಳ್ಳೆಯದಾಗಲಿ

  ಧ್ರುವಗೆ ಒಳ್ಳೆಯದಾಗಲಿ

  ''ನಮ್ಮ ಅಂಕಲ್ ಊರಿನಲ್ಲಿ ಇಲ್ಲ. ಅವರು ಬಂದ ಮೇಲೆ ನಿಶ್ಚಿತಾರ್ಥದ ಬಗ್ಗೆ ಒಂದು ಪ್ರೆಸ್ ಮೀಟ್ ಮಾಡಿ ಉಳಿದ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಧ್ರುವಗೆ ಒಳ್ಳೆಯದಾಗಲಿ. ಲೈವ್ ಈಸ್ ಬ್ಯೂಟಿಫುಲ್ ಅಂತ ಅವನಿಗೆ ಹೇಳುತ್ತಾನೆ.'' - ಚಿರಂಜೀವಿ ಸರ್ಜಾ, ನಟ

  ಡಿಸೆಂಬರ್ 9 ರಂದು ನಿಶ್ಚಿತಾರ್ಥ

  ಡಿಸೆಂಬರ್ 9 ರಂದು ನಿಶ್ಚಿತಾರ್ಥ

  ಧ್ರುವ ಸರ್ಜಾ ಅವರ ನಿಶ್ಚಿತಾರ್ಥ ಡಿಸೆಂಬರ್ 9 ರಂದು ನಡೆಯಲಿದೆ. ಬೆಂಗಳೂರಿನ ಬನಶಂಕರಿಯಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ಸರಳವಾಗಿ ನಡೆಯಲಿದೆಯಂತೆ. ಎರಡು ಕುಟುಂಬದ ಸದಸ್ಯರು ಹಾಗೂ ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ಪ್ರೇರಣಾ ಬಗ್ಗೆ

  ಪ್ರೇರಣಾ ಬಗ್ಗೆ

  ನಟ ಧ್ರುವ ಸರ್ಜಾ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಪ್ರೇರಣಾ. ಇವರು ಶಂಕರ್ ಮತ್ತು ಸರಿತಾ ಎಂಬ ದಂಪತಿಯ ಪುತ್ರಿ. ಸದ್ಯ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೇರಣಾ, ಧ್ರುವ ಅವರ ಎದುರು ಮನೆಯ ಹುಡುಗಿ. ಕಳೆದ 14 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ.

  English summary
  Kannada Actor Chiranjeevi Sarja spoke about his brother Dhruva Sarja's engagement. Dhruva Sarja to get engaged with his girl friend Prerana on December 9th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X