For Quick Alerts
  ALLOW NOTIFICATIONS  
  For Daily Alerts

  ಅಮೂಲ್ಯ ಹುಟ್ಟುಹಬ್ಬವನ್ನು ಆಚರಿಸಿದ ದರ್ಶನ್ ದಂಪತಿ

  |

  ಸಪ್ಟೆಂಬರ್ ತಿಂಗಳಿನಲ್ಲಿ ಅನೇಕ ಸ್ಟಾರ್ ಗಳು ಹುಟ್ಟಿದ್ದಾರೆ. ಈ ತಿಂಗಳಿನಲ್ಲಿ ಎರಡ್ಮೂರು ದಿನಕ್ಕೊಮ್ಮೆ ಒಬ್ಬೊಬ್ಬ ಸ್ಟಾರ್ ಗಳ ಹುಟ್ಟುಹಬ್ಬ ಬರುತ್ತಿದೆ. ಈ ದಿನ ಚಂದನವನದ ಚಂದದ ನಟಿ ಅಮೂಲ್ಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

  ವಿಶೇಷ ಅಂದರೆ, ಈ ಬಾರಿಯ ಅಮೂಲ್ಯ ಅವರ ಹುಟ್ಟುಹಬ್ಬದಲ್ಲಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದಾರೆ. ದರ್ಶನ್ ಅವರ ಈ ಫೋಟೋಗಳು 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿವೆ.

  ಪ್ಯಾರಿಸ್ ನಲ್ಲಿ ನಟಿ ಅಮೂಲ್ಯ ಏನ್ ಮಾಡ್ತಿದ್ದಾರೆ? ಪ್ಯಾರಿಸ್ ನಲ್ಲಿ ನಟಿ ಅಮೂಲ್ಯ ಏನ್ ಮಾಡ್ತಿದ್ದಾರೆ?

  ಹುಟ್ಟುಹಬ್ಬದಲ್ಲಿ ಅಮೂಲ್ಯ ಪತಿ ಜಗದೀಶ್ ಸಹ ಭಾಗಿಯಾಗಿದ್ದು, ಮದುವೆ ಬಳಿಕ ನಡೆಯುತ್ತಿರುವ ಎರಡನೇ ಬರ್ತ್ ಡೇ ಇದಾಗಿದೆ. ಅಂದಹಾಗೆ, ಅಮೂಲ್ಯ ಅವರ ಹುಟ್ಟುಹಬ್ಬ ಸಂಭ್ರಮಾಚರಣೆಯ ಕೆಲ ಫೋಟೋಗಳು ಮುಂದಿವೆ ನೋಡಿ....

  ನಟ ದರ್ಶನ್ ದಂಪತಿ ಭಾಗಿ

  ನಟ ದರ್ಶನ್ ದಂಪತಿ ಭಾಗಿ

  ನಟಿ ಅಮೂಲ್ಯ ಅವರ ಹುಟ್ಟುಹಬ್ಬದ ಪ್ರಮುಖ ಆಕರ್ಷಣೆ ನಟ ದರ್ಶನ್ ದಂಪತಿ. ಇತ್ತೀಚಿಗಷ್ಟೆ 'ಯಜಮಾನ' ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಬಹು ದಿನಗಳ ನಂತರ ಡಿ ಬಾಸ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ದಂಪತಿ ಸಮೇತವಾಗಿ ಅಮೂಲ್ಯ ಹುಟ್ಟುಹಬ್ಬದಲ್ಲಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದಾರೆ.

  ಸೆಲ್ಫಿ ತೆಗೆದುಕೊಂಡ ದರ್ಶನ್

  ಸೆಲ್ಫಿ ತೆಗೆದುಕೊಂಡ ದರ್ಶನ್

  ಅಮೂಲ್ಯ ಹುಟ್ಟುಹಬ್ಬದ ಸಂಭ್ರಮದ ಕ್ಷಣವನ್ನು ಸ್ವತಃ ದರ್ಶನ್ ಸೆಲ್ಫಿ ಕ್ಲಿಕ್ ಮಾಡುವ ಮೂಲಕ ಸೆರೆ ಹಿಡಿದರು. ಒಂದು ಕಡೆ ಅಮೂಲ್ಯ - ಜಗದೀಶ್ ದಂಪತಿ ,ಇನ್ನೊಂದು ಕಡೆ ದರ್ಶನ್ - ವಿಜಯಲಕ್ಷ್ಮಿ ದಂಪತಿ ಫೋಟೋದಲ್ಲಿ ಪೋಸ್ ನೀಡಿದೆ.

  'ರೈತ' ಗಣಪತಿಯನ್ನ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಅಮೂಲ್ಯ ದಂಪತಿ 'ರೈತ' ಗಣಪತಿಯನ್ನ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಅಮೂಲ್ಯ ದಂಪತಿ

  ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ ವಿಜಯಲಕ್ಷ್ಮಿ

  ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ ವಿಜಯಲಕ್ಷ್ಮಿ

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಟಿ ಅಮೂಲ್ಯಯ ಶುಭಾಶಯ ತಿಳಿಸಿದ್ದಾರೆ. ಅಮೂಲ್ಯ ಜೊತೆಗೆ ತೆಗೆದುಕೊಂಡ ಚೆಂದದ ಸೆಲ್ಫಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಜೊತೆಗೆ ದರ್ಶನ್ ಅಭಿಮಾನಿಗಳು ಸಹ ಅಮೂಲ್ಯಗೆ ಶುಭ ಹಾರೈಸುತ್ತಿದ್ದಾರೆ.

  ಮತ್ತೆ ದರ್ಶನ್ ಜೊತೆಗೆ ಅಮೂಲ್ಯ ನಟನೆ

  ಮತ್ತೆ ದರ್ಶನ್ ಜೊತೆಗೆ ಅಮೂಲ್ಯ ನಟನೆ

  ಈ ಹಿಂದೆ ಬಾಲನಟಿಯಾಗಿ ದರ್ಶನ್ ಅವರ 'ಲಾಲಿಹಾಡು' ಸಿನಿಮಾದಲ್ಲಿ ಅಮೂಲ್ಯ ನಟಿಸಿದ್ದರು. ಅದರ ಬಳಿಕ ಇದೀಗ ಮತ್ತೆ ದರ್ಶನ್ ಚಿತ್ರದಲ್ಲಿ ಅಮೂಲ್ಯ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇದೆ. ದರ್ಶನ್ ತಮಿಳಿನ 'ವೇದಾಲಂ' ಸಿನಿಮಾ ರಿಮೇಕ್ ಮಾಡುತ್ತಿದ್ದು, ಈ ಚಿತ್ರದಲ್ಲಿ ದರ್ಶನ್ ಅವರ ತಂಗಿಯ ರೋಲ್ ನಲ್ಲಿ ಅಮೂಲ್ಯ ನಟಿಸುತ್ತಿದ್ದಾರೆ ಎಂಬ ಟಾಕ್ ಇದೆ.

  ತವರು ಮನೆಯಲ್ಲಿಯೂ ಸಂಭ್ರಮ

  ತವರು ಮನೆಯಲ್ಲಿಯೂ ಸಂಭ್ರಮ

  ಮತ್ತೊಂದು ಕಡೆ ಅಮೂಲ್ಯ ಅವರ ತವರು ಮನೆಯಲ್ಲಿಯೂ ಬರ್ತ್ ಡೇ ಆಚರಣೆ ಜೋರಾಗಿದೆ. ಅಮೂಲ್ಯ ತಾಯಿ ಸೇರಿದಂತೆ ಇಡೀ ಕುಟುಂಬ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದೆ. ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ಅಮೂಲ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  English summary
  Actor Darshan celebrated kannada actress Amulya's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X