»   » 'ಉತ್ತಮ ವಿಲನ್' ಪರ ನಿಂತ ಚಾಲೆಂಜಿಂಗ್ ಸ್ಟಾರ್

'ಉತ್ತಮ ವಿಲನ್' ಪರ ನಿಂತ ಚಾಲೆಂಜಿಂಗ್ ಸ್ಟಾರ್

Posted By: ಜೀವನರಸಿಕ
Subscribe to Filmibeat Kannada

ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಮೈಸೂರಿನಲ್ಲಿ ಈ ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಇಲ್ಲಿ 2013ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕಾರಗಳು ನಡೆದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ.

ತಮ್ಮ ಈ ಗೌರವವನ್ನ ಚಿತ್ರರಂಗದ ಖಳನಾಯಕರಿಗೆ ಅರ್ಪಿಸಿದ ದರ್ಶನ್ ಇದೇ ವೇದಿಕೆಯಲ್ಲಿ ಖಳನಾಯಕರಿಗೆ ರಾಜ್ಯ ಸರ್ಕಾರ ಅತ್ಯುತ್ತಮ ಖಳನಟ ರಾಜ್ಯಪ್ರಶಸ್ತಿ ನೀಡಿ ಗೌರವಿಸಬೇಕು ಅನ್ನೋ ಬೇಡಿಯನ್ನಿಟ್ಟಿದ್ದಾರೆ. [ಕನ್ನಡ ಚಲನಚಿತ್ರ ಪ್ರಶಸ್ತಿ, ಮೈಸೂರಿನ ಚಿತ್ರಗಳು]

Actor Darshan suggests best villain award

ಇದಕ್ಕೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದರ್ಶನ್ ಅವರ ಮನವಿಯನ್ನ ಪರಿಗಣಿಸುತ್ತೇವೆ ಮುಂದಿನ ವರ್ಷದಿಂದ ಅತ್ಯುತ್ತಮ ವಿಲನ್ ವಿಭಾಗಕ್ಕೆ ಬಹುಮಾನ ನೀಡುತ್ತೇವೆ ಅಂತ ಘೋಷಣೆ ಮಾಡಿದ್ದಾರೆ.

ಇದರಿಂದ ಚಿತ್ರರಂಗಕ್ಕೊಂದು ಹೊಸ ಆಶಾವಾದ ಸೃಷ್ಟಿಯಾಗಿದೆ. ಇಲ್ಲಿಯವರೆಗೂ ವಿಲನ್ ಪಾತ್ರ ಮಾಡಿದವರನ್ನೂ ವಿಲನ್ ತರಹ ನೋಡ್ತಿದ್ದ ಮನಸ್ಥಿತಿಗಳು ಬದ್ಲಾಗಿವೆ. ಚಿತ್ರರಂಗದಲ್ಲಿ ವಿಲನ್ ಪಾತ್ರ ಮಾಡೋರಿಗೆ ಉತ್ತೇಜನ ಸಿಕ್ಕಂತಾಗಿದೆ. ದರ್ಶನ್ ಕನ್ನಡದ ಖ್ಯಾತ ವಿಲನ್ ತೂಗುದೀಪ್ ಶ್ರೀನಿವಾಸ್ ರ ಪುತ್ರನಾಗಿ ಈ ಮೂಲಕ ತಂದೆಗೆ ಗೌರವ ಸಲ್ಲಿಸೋ ಕೆಲಸ ಮಾಡಿದ್ದಾರೆ.

English summary
Challenging Star Darshna gave suggestion to state government for 'Best Villain' award in Mysuru after he receives best actor award. Responding to Darshan’s suggestion, Chief Minister Siddaramaiah said an award for best villain would be considered from the next year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada