»   » 'ರಾಟೆ' ರಾಜನ ರಗಡ್ ಲುಕ್ ಬೋ ಪಸಂದ್ ಆಗೈತಿ...

'ರಾಟೆ' ರಾಜನ ರಗಡ್ ಲುಕ್ ಬೋ ಪಸಂದ್ ಆಗೈತಿ...

Posted By:
Subscribe to Filmibeat Kannada

ಸ್ಪೆಷಲ್ ಹೀರೋ ಧನಂಜಯ್ ಅವರು ಹೀರೋ ಪಾತ್ರದಲ್ಲಿ ಮುದ್ದು-ಮುದ್ದಾಗಿ ಹೀರೋಯಿನ್ ಜೊತೆ ರೋಮ್ಯಾನ್ಸ್ ಮಾಡ್ಕೊಂಡು, ಹಾಡು ಹಾಡ್ಕೊಂಡು, ಡ್ಯಾನ್ಸ್ ಮಾಡ್ಕೊಂಡು, ಇದ್ದದ್ದನ್ನು ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ನೋಡಿದ್ದೀರಾ ತಾನೆ.

ಆದರೆ ಅದೇ ಸ್ಪೆಷಲ್ ಸ್ಟಾರ್ ಧನಂಜಯ್ ಅವರು ವಿಲನ್ ಆಗಿ ಗುರ್ರ್...ಅಂತ ಗುಟುರ್ ಹಾಕಿದ್ರೆ ಹೇಗಿರಬಹುದು.?. ಇದು ಸದ್ಯಕ್ಕೆ ಅಭಿಮಾನಿಗಳಲ್ಲಿ ಇರೋ ಭಾರಿ ಕುತೂಹಲ.


'ಡೈರೆಕ್ಟರ್ ಸ್ಪೆಷಲ್' ಎಂಬ ಅದ್ಭುತ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಗೊಂಡ ನಟ ಧನಂಜಯ್ ಅವರಿಗೆ, ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತಿವೆ.[ಎಕ್ಸ್ ಕ್ಲ್ಯೂಸಿವ್: ಗುಮ್ಮೋ 'ಟಗರಿಗೆ' ಎದುರಾಗಿ ನಿಂತ ಧನಂಜಯ್]


ಸದಾ ವಿಭಿನ್ನ ಪಾತ್ರಗಳಿಗೆ ಮಣೆ ಹಾಕುವ ಧನಂಜಯ್ ಅವರು ಇಲ್ಲಿಯವರೆಗೆ ನಟಿಸಿದ್ದು ಕೂಡ ಡಿಫರೆಂಟ್ ಪಾತ್ರಗಳಲ್ಲಿ. 'ರಾಟೆ' ಚಿತ್ರದಲ್ಲಿ ಮೋಡಿ ಮಾಡಿದ ಧನಂಜಯ್ ಅವರು 'ಬಾಕ್ಸರ್' ಚಿತ್ರದಲ್ಲಿ ಬಾಡಿ ಬೆಳೆಸಿಕೊಂಡು ಅಭಿಮಾನಿಗಳಿಗೆ ಕಮಾಲ್ ಮಾಡಿದರು. ಜೊತೆಗೆ 'ಜೆಸ್ಸಿ' ಚಿತ್ರದಲ್ಲಿ ದೆವ್ವವಾಗಿ ಕಾಡಿದರು.


ಇದೀಗ ಗುಮ್ಮಲು ತಯಾರಾಗಿ ನಿಂತ ಶಿವಣ್ಣ ಎಂಬ 'ಪೊಗರು ತುಂಬಿದ ಟಗರಿಗೆ' ಎದೆಯೊಡ್ಡಿ ನಿಲ್ಲಲು, ಧನಂಜಯ್ ಅವರು ಭರ್ಜರಿ ತಯಾರಿ ನಡೆಸಿದ್ದಾರೆ. ಇದರ ಫಲಿತಾಂಶವೇ ಫಸ್ಟ್ ಲುಕ್ ಫೋಟೋಗಳು. ಧನಂಜಯ್ ಅವರ ವಿಲನ್ ಲುಕ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....


ಹೇಗಿದೆ ವಿಲನ್ ಗೆಟಪ್.?

ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರದಲ್ಲಿ ಧನಂಜಯ್ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಧನಂಜಯ್ ಅವರ ಅಜಾನುಬಾಹು ದೇಹ, ಸಖತ್ ಆಗಿ ಜಿಮ್ ನಲ್ಲಿ ವರ್ಕೌಟ್ ಮಾಡಿರುವ ಬಾಡಿ, ವಿಲನ್ ಪಾತ್ರಕ್ಕೆ ಸರಿಯಾಗಿ ಸೂಟ್ ಆಗುತ್ತದೆ.[ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ]


ಕೂದಲಿಗೆ ಕತ್ತರಿ

ಇಷ್ಟು ದಿನ ಎಲ್ಲಾ ಸಿನಿಮಾಗಳಲ್ಲಿ ಉದ್ದ ಕೂದಲು ಬಿಟ್ಟುಕೊಂಡು ಸ್ಟೈಲಿಷ್ ಆಗಿ ಕಾಣಿಸುತ್ತಿದ್ದ ನಟ ಧನಂಜಯ್ ಅವರು ಈ ಚಿತ್ರದಲ್ಲಿ, ತಕ್ಷಣಕ್ಕೆ ಗುರುತು ಸಿಗದಂತೆ ಬದಲಾಗಿದ್ದಾರೆ. ಸುದೀಪ್ ಅವರಂತೆ ಉದ್ದ ಕೂದಲು ಬಿಟ್ಟುಕೊಂಡಿದ್ದ ಸ್ಪೆಷಲ್ ಸ್ಟಾರ್, ಇದೀಗ 'ಟಗರು' ಚಿತ್ರಕ್ಕಾಗಿ ಕೂದಲಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ಒಟ್ನಲ್ಲಿ ಧನಂಜಯ್ ಅವರ ನ್ಯೂ ಲುಕ್ ಎಲ್ಲರಿಗೂ ಹಿಡಿಸಿದೆ.


ಕಣ್ಣಿಗೆ ಲೆನ್ಸ್

ಕೂದಲನ್ನು ತುಂಬಾ ಚಿಕ್ಕದಾಗಿ ಕತ್ತರಿಸಿ, ಕಣ್ಣಿಗೆ ನೀಲಿ ಬಣ್ಣದ ಲೆನ್ಸ್ ಹಾಕಿಕೊಂಡು, ಪೂರ್ತಿ ವಿಲನ್ ಗೆಟಪ್ ನಲ್ಲಿ ಧನಂಜಯ್ ತಯಾರಾಗಿದ್ದಾರೆ. 'ಟಗರು' ಚಿತ್ರದಲ್ಲಿ ಹಾಗೂ ಶಿವಣ್ಣ ಅವರ ಜೊತೆ ನಟಿಸಲು ಅವಕಾಶ ಕೊಟ್ಟಿದ್ದಕ್ಕಾಗಿ, ಧನಂಜಯ್ ಅವರು ದುನಿಯಾ ಸೂರಿ ಅವರಿಗೆ ಧನ್ಯವಾದಗಳ ಸುರಿಮಳೆ ಸುರಿಸಿದ್ದಾರೆ.


ಅಭಿಮಾನಿಗಳಿಗೆ ಕುತೂಹಲ

ಮೊಟ್ಟ ಮೊದಲ ಬಾರಿಗೆ ಶಿವರಾಜ್ ಕುಮಾರ್ ಅವರ ಜೊತೆ ಧನಂಜಯ್ ಅವರು ತೆರೆ ಹಂಚಿಕೊಂಡಿದ್ದಾರೆ. ಅದರಲ್ಲೂ ವಿಲನ್ ಪಾತ್ರ ವಹಿಸಿದ್ದಾರೆ ಅಂದ ಮೇಲೆ ಅಭಿಮಾನಿಗಳಿಗೆ ಭಾರಿ ಕುತೂಹಲ ಇದೆ. ಇನ್ನು ಅದ್ಭುತ ಪ್ರತಿಭೆ ವಸಿಷ್ಠ ಅವರು ಕೂಡ ಈ ಚಿತ್ರದಲ್ಲಿ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


'ಬದ್ಮಾಶ್' ರೆಡಿ ಆಗಿದೆ

ನಟಿ ಸಂಚಿತಾ ಮತ್ತು ಧನಂಜಯ್ ಒಂದಾಗಿ ಕಾಣಿಸಿಕೊಂಡಿರುವ 'ಬದ್ಮಾಶ್' ತೆರೆಗೆ ಬರಲು ಸಜ್ಜಾಗಿದ್ದು, ಇನ್ನೇನು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಟ್ರೈಲರ್ ಮತ್ತು ಧನಂಜಯ್ ನಟನೆಗೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರೇ ಫಿದಾ ಆಗಿದ್ದರು ಅನ್ನೋದು ಖುಷಿಯ ವಿಚಾರ.


'ಅಲ್ಲಮ' ಮುಗಿದಿದೆ

'ಅಲ್ಲಮ' ಚಿತ್ರದಲ್ಲಿ ಇನ್ನೂ ಡಿಫರೆಂಟ್ ಆಗಿ ಕಾಣಿಸಿಕೊಂಡಿರುವ ನಟ ಧನಂಜಯ್ ಅವರು, ವಿಶೇಷವಾಗಿ ಈ ಚಿತ್ರಕ್ಕೆ ಮದ್ದಳೆ ಬಾರಿಸೋದನ್ನ ಅಭ್ಯಾಸ ಮಾಡಿದ್ದಾರೆ. ಜೊತೆಗೆ ಮದ್ದಳೆ ಬಾರಿಸುತ್ತಾ ಜಬರ್ದಸ್ತ್ ಆಗಿ ಕುಣಿದಿದ್ದಾರೆ. ಟಿ.ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರದಲ್ಲಿ ಧನಂಜಯ್ ಅವರಿಗೆ ಜೋಡಿಯಾಗಿ ನಟಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ.[ಚಿತ್ರಗಳು: 'ಅಲ್ಲಮ'ನಿಗೆ ಪರಕಾಯ ಪ್ರವೇಶ ಮಾಡಿದ ಧನಂಜಯ್]


English summary
Kannada Actor Dhananjaya has been given a new look in the film Tagaru. He has had to cut his hair short after having long locks in his almost all his films including the recent Jessie and Boxer and Raathe. Suri said it was necessary for the character to have that look and despite Dhananjay's trademark long hair style he made him get the new look.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada