»   » ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?

ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರಿಗೆ ಈ ಮುಂಚೆನೂ ಅದೆಷ್ಟೋ ಸಲ ಚಿತ್ರಗಳಲ್ಲಿ ನಟಿಸುವಂತೆ ಆಫರ್ ಮಾಡಲಾಗಿತ್ತು. ಆದ್ರೆ, ಇದುವರೆಗೂ ಯಾವುದೇ ಚಿತ್ರದಲ್ಲೂ ಅವರು ಅಭಿನಯಿಸಿಲ್ಲ.

ಬಂದ ಅವಕಾಶಗಳನ್ನ ಬೇಡವೆಂದಿದ್ದ ದಿನಕರ್, ದಿಢೀರ್ ಅಂತ 'ಚಕ್ರವರ್ತಿ'ಗಾಗಿ ಬಣ್ಣ ಹಚ್ಚಿದ್ದಾದರೂ ಯಾಕೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿತ್ತು. ಈ ಪ್ರಶ್ನೆಗೆ ಸ್ವತಃ ದಿನಕರ್ ಅವರೇ ಉತ್ತರ ಕೊಟ್ಟಿದ್ದಾರೆ.['ಚಕ್ರವರ್ತಿ' ದರ್ಶನ್ ದರ್ಬಾರ್ ನಲ್ಲಿ ಸಹೋದರ ದಿನಕರ್ ವಿಲನ್ ಗಿರಿ]

'ಚಕ್ರವರ್ತಿ' ಚಿತ್ರದಲ್ಲಿ ದಿನಕರ್ ಬಣ್ಣ ಹಚ್ಚಲು ಕಾರಣ ಆ ಒಬ್ಬ ವ್ಯಕ್ತಿಯಂತೆ. ಆ ವ್ಯಕ್ತಿಗಾಗಿ ದಿನಕರ್ ಏನೂ ಬೇಕಾದ್ರೂ ಮಾಡ್ತಾರಂತೆ. ಯಾರದು? ಮುಂದೆ ಓದಿ.....

'ಚಕ್ರವರ್ತಿ' ದಿನಕರ್ ಚೊಚ್ಚಲ ಸಿನಿಮಾ ಆಗಿದ್ಯಾಕೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ಮೂಲಕ ಇದೇ ಮೊದಲ ಭಾರಿಗೆ ಸ್ಯಾಂಡಲ್ ವುಡ್ ಬೆಳ್ಳಿತೆರೆಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಎಂಟ್ರಿ ಕೊಡುತ್ತಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಗಾಗಿ ಎಂಬುದು ವಿಶೇಷ.[ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']

ದಿನಕರ್ ಬಣ್ಣ ಹಚ್ಚಲು ಕಾರಣವಾದ 'ಆ' ವ್ಯಕ್ತಿ!

ದಿನಕರ್ ತೂಗುದೀಪ್ ಅವರಿಗೆ ಅವಕಾಶಗಳು ಬಂದಿದ್ದರೂ ಯಾವ ಸಿನಿಮಾದಲ್ಲೂ ಅಭಿನಯಿಸಿರಲಿಲ್ಲ. ಆದ್ರೆ, ಧಿಡೀರ್ ಅಂತ 'ಚಕ್ರವರ್ತಿ'ಯಲ್ಲಿ ಬಣ್ಣ ಹಚ್ಚಲ ಕಾರಣ ಚಿಂತನ್. [ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್]

ಯಾರು ಈ ಚಿಂತನ್?

ಚಿಂತನ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ನಿರ್ದೇಶಕ. ಇದಕ್ಕೆ ಮುಂಚೆ ಹಲವು ಚಿತ್ರಗಳಿಗೆ ಸಂಭಾಷಣೆಕಾರನಾಗಿ ಕೆಲಸ ಮಾಡಿದ್ದಾರೆ. ['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']

ಚಿಂತನ್ ಬೇಡಿಕೆಯಿಂದ 'ಚಕ್ರವರ್ತಿ'!

'ಚಕ್ರವರ್ತಿ' ಸಿನಿಮಾದಲ್ಲಿ ಒಂದು ವಿಶೇಷ ಪಾತ್ರವಿದೆ ಅದನ್ನ ನೀನು ಮಾಡು ಎಂದು ದಿನಕರ್ ಅವರಿಗೆ ಚಿಂತನ್ ಹೇಳಿದ್ದರಂತೆ. ಆದ್ರೆ, ದಿನಕರ್ ಅವರು ನಾನು ಮಾಡಲ್ಲ. ನನಗೆ ಭಯ ಅಂತ ಹೇಳಿ ನಿರಾಕರಿಸಿದ್ದರಂತೆ. ಆದ್ರೂ, ಛಲ ಬಿಡದ ಚಿಂತನ್ ಮಾಡಲೇಬೇಕು ಎಂದು ಒತ್ತಾಯಿಸಿ ದಿನಕರ್ ಅವರ ಬಳಿ ಈ ಸಿನಿಮಾ ಮಾಡಿಸಿದ್ದಾರಂತೆ. ['ಡಿ-ಬಾಸ್' ಅಭಿಮಾನಿಗಳಿಗೆ ಪಂಚಾಮೃತ ಸವಿದಷ್ಟೇ ಸಿಹಿ ಸುದ್ದಿ ಇದು!]

ದಿನಕರ್ ಮತ್ತು ಚಿಂತನ್ ಸಂಬಂಧ!

ಅಂದ್ಹಾಗೆ, ದಿನಕರ್ ತೂಗುದೀಪ ಮತ್ತು ಚಿಂತನ್ ಆಪ್ತ ಸ್ನೇಹಿತರು. ದಿನಕರ್ ನಿರ್ದೇಶನ ಮಾಡಿರುವ 'ಸಾರಥಿ', 'ನವಗ್ರಹ', 'ಜೊತೆ ಜೊತೆಯಲ್ಲಿ' ಚಿತ್ರಗಳಲ್ಲಿ ಚಿಂತನ್ ಕೆಲಸ ಮಾಡಿದ್ದಾರೆ. ದಿನಕರ್ ಅವರ ಎಲ್ಲ ಸಿನಿಮಾಗಳಲ್ಲಿ ಜೊತೆಯಾಗಿದ್ದು ಯಶಸ್ಸಿಗೆ ಕಾರಣವಾಗಿದ್ದಾರಂತೆ.

'ಚಕ್ರವರ್ತಿ' ಬಗ್ಗೆ ದಿನಕರ್ ಏನ್ ಹೇಳ್ತಾರೆ?

''ಇದು ರೆಗ್ಯೂಲರ್ ರೌಡಿಸಂ ಸಿನಿಮಾ ಅಲ್ಲ. ಕುಟುಂಬದ ಮೌಲ್ಯವಿದೆ. ಗಂಡ-ಹೆಂಡತಿ ಸಂಬಂಧವಿದೆ. ಸಮಾಜಕ್ಕೆ ತೊಂದರೆಯಾದಾಗ ಒಬ್ಬ ಹೀರೋ ಹೇಗೆ ಸಮಾಜದಪರ ನಿಲ್ತಾನೆ ಎಂಬ ಕಾನ್ಸೆಪ್ಟ್ ಇದೆ. ಮೊದಲಾರ್ಧದಲ್ಲಿ 80 ದಶಕದ ಕಥೆ ಇದೆ. ಸೆಕೆಂಡ್ ಹಾಫ್ ಇತ್ತೀಚಿನ ದಿನದ ಕಥೆ ಇದೆ ಎಂದು ಕಥೆಯ ಬಗ್ಗೆ ವಿವರಿಸಿದ್ದಾರೆ. ['ಚಕ್ರವರ್ತಿ' ನಂತರ ಮತ್ತೊಂದು ಚಿತ್ರದಲ್ಲಿ ದಿನಕರ್ ವಿಲನ್!]

ಏಪ್ರಿಲ್ 14 ರಂದು 'ಚಕ್ರವರ್ತಿ' ಅಬ್ಬರ

ಅಂದ್ಹಾಗೆ, 'ಚಕ್ರವರ್ತಿ' ಇದೇ ತಿಂಗಳು 14ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ಸಿದ್ದಾಂತ್ ನಿರ್ಮಾಣ ಮಾಡಿದ್ದಾರೆ. ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಚಾರುಲತಾ, ದೀಪಾ ಸನ್ನಿಧಿ, ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

English summary
Kannada Actor Dinakar thoogudeepa Talk About Chakravarthy Movie. Chakravarthy is Fisrt Film of Dinakar thoogudeepa. he palying villain Role in the Movie. Challenging star Darshan is The Lead Role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada