Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಜಿಎಫ್ ವಿಲನ್ ಯೋಗ ಕಲಿಕೆ: ಪರಭಾಷಾ ನಟನಿಗೆ ಡಾ.ರಾಜ್‌ಕುಮಾರ್ ಸ್ಪೂರ್ತಿ
ಡಾ.ರಾಜ್‌ಕುಮಾರ್ ಅವರು ಅಗಲಿ ಇಷ್ಟು ವರ್ಷಗಳಾದರೂ ಅವರು ಸಮಾಜದ ಮೇಲೆ ಬೀರುತ್ತಿರುವ ಪರಿಣಾಮ ಕಡಿಮೆ ಆಗುತ್ತಿಲ್ಲ.
Recommended Video
ರಾಜ್‌ಕುಮಾರ್ ಅವರನ್ನು ಆದರ್ಶವಾಗಿಟ್ಟುಕೊಂಡ ಲಕ್ಷಾಂತರ ಜನರಿದ್ದಾರೆ. ಹಲವಾರು ನಟರಿಗೆ ರಾಜ್‌ಕುಮಾರ್ ಅವರು ಸ್ಪೂರ್ತಿಯಾಗಿದ್ದಾರೆ. ಕೇವಲ ಕನ್ನಡದ ಮಾತ್ರವಲ್ಲದೇ ಪರಭಾಷೆಯ ನಟರಿಗೂ ರಾಜ್‌ಕುಮಾರ್ ಸ್ಪೂರ್ತಿಯಾಗಿದ್ದಾರೆ.
ಹಿಂದಿ, ತೆಲುಗು, ಮಲೆಯಾಳಂ, ತಮಿಳು, ಕನ್ನಡ ಸಿನಿಮಾಗಳಲ್ಲಿ ವಿಲನ್ ಆಗಿ ಹೆಸರು ಮಾಡಿರುವ ನಟರೊಬ್ಬರಿಗೆ ರಾಜ್‌ಕುಮಾರ್ ಸ್ಪೂರ್ತಿಯಾಗಿದ್ದಾರೆ. ಯಾರಾ ನಟ? ಹೇಗೆ ರಾಜ್‌ಕುಮಾರ್ ಅವರು ಹೇಗೆ ಸ್ಪೂರ್ತಿಯಾಗಿದ್ದಾರೆ ತಿಳಿಯಲು ಮುಂದೆ ಓದಿ..

ಜಾನ್ ಕೊಕೆನ್ ಗೆ ರಾಜ್‌ಕುಮಾರ್ ಸ್ಪೂರ್ತಿ
ಪೃಥ್ವಿ ಸಿನಿಮಾದಿಂದ ಹಲವು ಕನ್ನಡ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿರುವ ಜಾನ್ ಕೊಕೆನ್ ತಮ್ಮ ಹುರಿಗಟ್ಟಿದ ಮೈಕಟ್ಟಿನಿಂದ ಖ್ಯಾತರು. ಆದರೆ ಅವರು ಜಿಮ್ ಬಿಟ್ಟು ಯೋಗ ಪ್ರಾರಂಭ ಮಾಡಿದ್ದಾರೆ. ಯೋಗ ಮಾಡಲು ಸ್ಪೂರ್ತಿ ರಾಜ್‌ಕುಮಾರ್.

ಯೋಗ ಕಲಿಯಲು ಡಾ.ರಾಜ್‌ಕುಮಾರ್ ಸ್ಪೂರ್ತಿ
ಈ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಜಾನ್ ಕೊಕೆನ್, ನಾನು ನನ್ನ ಮಾಮೂಲಿ ವರ್ಕ್‌ಔಟ್ ಬಿಟ್ಟು ಯೋಗ ಪ್ರಾರಂಭಿಸಿದ್ದೇನೆ. ಇದು ನನಗೆ ಸವಾಲು ಆದರೆ ಯೋಗ ಪ್ರಾರಂಭಿಸಲು ನನಗೆ ಸ್ಪೂರ್ತಿ ಡಾ.ರಾಜ್‌ಕುಮಾರ್ ಎಲ್ಲರೂ ಕರೆಯುವ ಹಾಗೆ ಅಪ್ಪಾಜಿ' ಎಂದು ಬರೆದುಕೊಂಡಿದ್ದಾರೆ ಕೊಕೆನ್.

'ಪುನೀತ್ ಅವರು ಅಪ್ಪಾಜಿ ಬಗ್ಗೆ ಸಾಕಷ್ಟು ಹೇಳಿದ್ದಾರೆ'
ಪುನೀತ್ ರಾಜ್‌ಕುಮಾರ್ ಅವರು ರಾಜ್‌ಕುಮಾರ್ ಅವರ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತಾರೆ. ಅವರು ಹೇಗೆ ಯೋಗ ಮಾಡುತ್ತಿದ್ದರು ಎಂಬುದನ್ನೂ ಸಹ ಹೇಳಿದ್ದಾರೆ. ಅದೆಲ್ಲಾ ನನ್ನ ಸ್ಮೃತಿಪಟಲದಲ್ಲಿ ಅಚ್ಚೊತ್ತಿದೆ ಎಂದಿದ್ದಾರೆ ಕೊಕೆನ್.

'ಈಗಷ್ಟೆ ಯೋಗ ಪ್ರಾರಂಭಿಸಿದ್ದೇನೆ'
ಈಗಷ್ಟೆ ನಾನು ಯೋಗ ಪ್ರಾರಂಭಿಸಿದ್ದೇನೆ. ಯೋಗಾಸನಗಳನ್ನು ಪರಿಪೂರ್ಣವಾಗಿ ಮಾಡಲು ಇನ್ನಷ್ಟು ಸಮಯ ಹಿಡಿಯಬಹುದು, ಯೋಗವು ನನ್ನನ್ನು ನಾನು ಸ್ಥಿಮಿತದಲ್ಲಿಟ್ಟುಕೊಳ್ಳಲು, ಆರೋಗ್ಯವಾಗಿರಲು ಸಹಕಾರಿ ಆಗಲಿದೆ ಎಂದಿದ್ದಾರೆ ಅವರು.

ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ
ಜಾನ್ ಕೊಕೆನ್ ಪುನೀತ್ ಅವರು ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಯುವರತ್ನ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕೆಜಿಎಫ್ ಚಿತ್ರದಲ್ಲೂ ಅವರಿದ್ದಾರೆ. ತೆಲುಗಿನ ಬಾಹುಬಲಿ, ನೇನೊಕ್ಕಡಿನೆ, ಜನತಾ ಗ್ಯಾರೇಜ್ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.