ಅವಕಾಶ ಕೊಡಿಸುವುದಾಗಿ 'ವಠಾರ' ಧಾರಾವಾಹಿ ನಟಿಗೆ ವಂಚನೆ
Recommended Video

'ವಠಾರ', 'ಬದುಕು', 'ರಂಗೋಲಿ' ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ನಟಿ ಮಂಜುಳಮ್ಮ ಅವರಿಗೆ ಪಾತ್ರ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನವೀನ್ ರೈ ಎನ್ನುವ ಧಾರಾವಾಹಿ ನಿರ್ದೇಶಕನಿಂದ ಹಿರಿಯ ನಟಿ ಮೋಸ ಹೋಗಿದ್ದಾರೆ.
ನವೀನ್ ರೈ ಹಿಂದಿನಿಂದಲೂ ಧಾರಾವಾಹಿಗಳಲ್ಲಿ ಮಂಜುಳಮ್ಮ ಅವರಿಗೆ ಸಣ್ಣ ಪುಟ್ಟ ಪಾತ್ರಗಳನ್ನು ಕೊಡಿಸುತ್ತಾ ಬಂದಿದ್ದ. ನಂತರ 'ಸಣ್ಣಮ್ಮನ ಅಜ್ಜಿ' ಎನ್ನುವ ಹೆಸರಿನಲ್ಲಿ ಕಿರುಚಿತ್ರ ಮಾಡಲು ಮುಂದಾಗಿದ್ದ.

ಇದೇ ವೇಳೆಯಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಹಣ ಬೇಕಿದ್ದ ಕಾರಣ ಮಂಜುಳಮ್ಮ ಅವರ ಬಳಿ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ 15 ಲಕ್ಷ ಹಣ ಪಡೆದಿದ್ದ. ಹಣ ಪಡೆದು ಎಷ್ಟು ದಿನವಾದರೂ ಪತ್ತೆ ಇಲ್ಲದ ನವೀನ್ ರೈ ಅವರನ್ನು ಹುಡುಕಿಕೊಂಡು ಮಂಜುಳಮ್ಮ, ನವೀನ್ ಮನೆಯ ಬಳಿ ಹೋಗಿದ್ದಾರೆ.

ನವೀನ್ ರೈ ಯಾರಿಗೂ ಗೊತ್ತಾಗದಂತೆ ಮನೆ ಖಾಲಿ ಮಾಡಿಕೊಂಡು ಪರಾರಿ ಆಗಿರುವ ವಿಚಾರ ತಿಳಿದ ನಂತರ ಕೂಡಲೇ ಈ ಕುರಿತು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ನವೀನ್ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.


Click it and Unblock the Notifications











