For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್‌ಕುಮಾರ್ ಕುಟುಂಬವನ್ನು ಭೇಟಿ ಮಾಡಿದ ನಟ ನಿಖಿಲ್‌ ಕುಮಾರ್!

  |

  ಕನ್ನಡ ಸಿನಿಮಾರಂಗದಲ್ಲಿ ಬೆರಳೆಣಿಕೆಯಷ್ಟೇ ಸ್ಟಾರ್ ನಟರಿದ್ದಾರೆ. ಹಾಗಾಗಿ ಒಬ್ಬರನ್ನು ಒಬ್ಬರು ಭೇಟಿಯಾದಾಗ ಕುತೂಹಲ ಮೂಡುವುದು ಸಹಜ. ಈಗ ಇಂಥದ್ದೇ ಕುತೂಹಲವನ್ನು ನಟ ನಿಖಿಲ್ ಕುಮಾರ್ ಹುಟ್ಟು ಹಾಕಿದ್ದಾರೆ. ನಟ ನಿಖಿಲ್ ಕುಮಾರ್ ಸ್ಯಾಂಡಲ್‌ವುಡ್ ದೊಡ್ಡ ಮನೆಗೆ ಭೇಟಿ ನೀಡಿದ್ದಾರೆ. ನಿಖಿಲ್ ಈ ಅಚಾನಕ್ ಭೇಟಿ ಕುತೂಹಲ ಮೂಡಿಸಿದೆ. ನಟ ರಾಘವೇಂದ್ರ ರಾಜಕುಮಾರ್ ಕುಟುಂಬವನ್ನು ನಿಖಿಲ್ ಭೇಟಿ ಮಾಡಿ ಬಂದಿದ್ದಾರೆ.

  ರಾಘವೇಂದ್ರ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿರುವ ನಿಖಿಲ್ ಕುಮಾರ್ ಗಂಟೆಗಟ್ಟಲೆ ಕುಟುಂಬಸ್ಥರೊಂದಿಗೆ ಹರಟೆ ಹೊಡೆದಿದ್ದಾರೆ. ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅವರೊಂದಿಗೆ ಹೆಚ್ಚಿನ ಸಮಯ ಕಳೆದಿದ್ದಾರೆ. ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅವರ ಮಕ್ಕಳು ಯುವರಾಜ್, ವಿನಯ್ ರಾಜ್ ಅವರನ್ನೂ ನಿಖಿಲ್ ಭೇಟಿ ಮಾಡಿದ್ದಾರೆ. ಇಡೀ ಕುಟುಂಬದೊಂದಿಗೆ ನಿಖಿಲ್ ಕಾಲ ಕಳೆದಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಿಖಿಲ್ ಭೇಟಿ ಹಿಂದೆ ಸಿನಿಮಾ ಉದ್ದೇಶ ಇದೆ ಎನ್ನಲಾಗಿದೆ. ಮುಂದೆ ದೊಡ್ಮನೆ ಕುಡಿಗಳ ಜೊತೆಗೆ ನಿಖಿಲ್ ಸಿನಿಮಾ ಮಾಡುತ್ತಾರಾ ಅನ್ನೋ ಪ್ರಶ್ನೆಯೂ ಮೂಡಿದೆ. ಸದ್ಯ ರಾಘವೇಂದ್ರ ರಾಜಕುಮಾರ್ ಕೂಡ ಸಿನಿಮಾರಂಗದಲ್ಲಿ ಸಕ್ರಿಯ ಆಗಿದ್ದಾರೆ. ಹಾಗಾಗಿ ರಾಘವೇಂದ್ರ ರಾಜಕುಮಾರ್ ನಿಖಿಲ್ ಕುಮಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ.

  'ರೈಡರ್' ಸಿನಿಮಾಗಾಗಿ ಬೆಟ್ಟದ ತಾಯಿಗೆ ಶರಣೆಂದ ನಿಖಿಲ್ ಕುಮಾರಸ್ವಾಮಿ'ರೈಡರ್' ಸಿನಿಮಾಗಾಗಿ ಬೆಟ್ಟದ ತಾಯಿಗೆ ಶರಣೆಂದ ನಿಖಿಲ್ ಕುಮಾರಸ್ವಾಮಿ

  ಆದ್ರೆ ರಾಘಣ್ಣನ ಮನೆಗೆ ಭೇಟಿ ನೀಡ ಬೇಕು ಅನ್ನೋದು ನಿಖಿಲ್‌ರ ಹಲವು ದಿನಗಳ ಯೋಜನೆಯಂತೆ, ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಅಂತಿದೆ ನಿಖಿಲ್ ಬಳಗ. ಇನ್ನೂ ಈ ಭೇಟಿಯ ಹಿಂದಿನ ನಿಜವಾದ ರಹಸ್ಯ ತಿಳಿದು ಬಂದಿಲ್ಲ.

   Actor Nikhil kumar visited Dr. Rajkumar family!

  ರಾಘಣ್ಣನ ಮನೆಯಲ್ಲಿ ಜಗ್ಗೇಶ್: ಅಣ್ಣನ ಪ್ರೀತಿಯ ಆ ದಿನಗಳನ್ನು ನೆನಪಿಸಿತು ಎಂದ ನವರಸನಾಯಕರಾಘಣ್ಣನ ಮನೆಯಲ್ಲಿ ಜಗ್ಗೇಶ್: ಅಣ್ಣನ ಪ್ರೀತಿಯ ಆ ದಿನಗಳನ್ನು ನೆನಪಿಸಿತು ಎಂದ ನವರಸನಾಯಕ

  ರೈಡರ್ ಚಿತ್ರದ ರಿಲೀಸ್‌ಗಾಗಿ ನಿಖಿಲ್ ಕುಮಾರ್ ವೈಟಿಂಗ್!

  ನಟ ನಿಖಿಲ್ ಕುಮಾರ್ ಸದ್ಯ ರೈಡರ್ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದೆ. ಈಗಾಗಲೇ ಆ್ಯಕ್ಷನ್ ಟೀಸರ್ ಮತ್ತು ಹಾಡು ಚಿತ್ರದ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದೆ. ಚಿತ್ರದ ಲವ್ ಸಾಂಗ್ ಮತ್ತು ಟೀಸರ್ ಇದು ಪಕ್ಕಾ ಮಾಸ್ ಎಂಟರ್ಟೈನರ್ ಅನ್ನುವುದನ್ನು ಹೇಳುತ್ತಿದೆ. ಚಿತ್ರದಲ್ಲಿ ನಿಖಿಲ್‌ಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಅರ್‌ ಪೇಟೆ, ರಾಜೇಶ್‌ ನಟರಂಗ್, ದತ್ತಣ್ಣ, ಗರುಡ ರಾಮ್‌ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಚಿತ್ರದರಿಲೀಸ್‌ ಡೇಟ್ ಅನೌನ್ಸ್‌ ಮಾಡಲಿದೆ ಚಿತ್ರತಂಡ.

  English summary
  Actor Nikhil kumar today visited to Raghavendra rajkumar family!.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X