For Quick Alerts
  ALLOW NOTIFICATIONS  
  For Daily Alerts

  ವಂಚನೆ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ನಟ ನೀನಾಸಂ ಅಶ್ವತ್

  |

  ನಟ ನೀನಾಸಂ ಅಶ್ವತ್ ವಿರುದ್ಧ ವಂಚನೆ ಪ್ರಕರಣದ ಆರೋಪ ಕೇಳಿ ಬಂದಿತ್ತು. 18 ಲಕ್ಷ ರೂಪಾಯಿ ಪಡೆದು ಅದನ್ನು ಹಿಂತಿರುಗಿಸಿಲ್ಲ ಎಂದು ಅವರ ಸ್ನೇಹಿತ ರಜತ್ ಆರೋಪ ಮಾಡಿದ್ದರು. ಆದರೆ, ಈ ಘಟನೆಯ ಬಗ್ಗೆ ಈಗ ನೀನಾಸಂ ಅಶ್ವತ್ ಸುದ್ದಿ ವಾಹಿನಿಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

  ''ನಾನು 15 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ನನ್ನ ಬಗ್ಗೆ ಎಲ್ಲರಿಗೆ ತಿಳಿದಿದೆ. ನಾನು ರಜತ್ ಎನ್ನುವವರಿಂದ ಹಣ ಪಡೆದಿದ್ದು ನಿಜ. ಆದರೆ, ಅದನ್ನು ಮರು ಪಾವತಿ ಮಾಡಿದ್ದೇನೆ.'' ಎಂದು ತಮ್ಮ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ.

  18 ಲಕ್ಷ ವಂಚನೆ : ನಟ ನೀನಾಸಂ ಅಶ್ವತ್ ವಿರುದ್ಧ ಸ್ನೇಹಿತನ ಆರೋಪ!

  ''ರಜತ್ ಬಗ್ಗೆ ನಾನೂ ಕೂಡ ದೂರು ನೀಡಿದ್ದೇನೆ. ಇವರು ನಾಟಕ ಮಾಡುತ್ತಿದ್ದಾರೆ. ಹಂತ ಹಂತವಾಗಿ ಅವರ ದುಡ್ಡು ವಾಪಸ್ಸು ಮಾಡಿದ್ದೇನೆ. ಅದಕ್ಕೆ ನನ್ನ ಬಳಿ ಸಾಕ್ಷಿ ಇವೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ಘಟನೆಯ ಹಿನ್ನೆಲೆ

  ಕಳೆದ 11 ವರ್ಷಗಳಿಂದ ರಜತ್ ಹಾಗೂ ನೀನಾಸಂ ಅಶ್ವತ್ ಪರಿಚಯ ಇದೆಯಂತೆ. ಮೂರು ವರ್ಷಗಳ ಹಿಂದೆ ಹಸುವಿನ ಫಾರ್ಮ್ ಹೌಸ್ ಮಾಡುವ ಸಲುವಾಗಿ 18 ಲಕ್ಷ ಹಣವನ್ನು ರಜತ್ ಕಡೆಯಿಂದ ಅಶ್ವತ್ ಪಡೆದಿದ್ದರಂತೆ. ಆದರೆ, ಮೂರು ವರ್ಷವಾದರೂ, ಇತ್ತ ಫಾರ್ಮ್ ಹೌಸ್ ಬಿಜಿನೆಸ್ ನಲ್ಲಿ ಪಾಲು ನೀಡದೆ, ಅತ್ತ ತಮ್ಮ ದುಡ್ಡನ್ನು ವಾಪಸ್ಸು ನೀಡದೆ ಆಟ ಆಡುಸುತ್ತಿದ್ದಾರಂತೆ.

  English summary
  Kannada actor Ninasam Ashwath gave clarification about cheating case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X