For Quick Alerts
  ALLOW NOTIFICATIONS  
  For Daily Alerts

  ಪತ್ನಿಗಾಗಿ ಹೊಸ ಮನೆ ಕಟ್ಟಿಸಿದ ನಟ ಪ್ರಜ್ವಲ್ ದೇವರಾಜ್!

  |

  ಕನ್ನಡ ಚಿತ್ರ ರಂಗದ ಡೈನಾಮಿಕ್ ಪ್ರಿನ್ಸ್, ನಟ ಪ್ರಜ್ವಲ ದೇವರಾಜ್ ಅವರು ಇತ್ತೀಚೆಗೆ ಹೆಚ್ಚಾಗಿ ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆದರೆ ಈಗ ವಿಶೇಷ ಸಂಗತಿಯೊಂದಿಗೆ ಸುದ್ದಿ ಆಗಿದ್ದಾರೆ. ಅವರ ಪತ್ನಿ ರಾಗಿಣಿ ವಿಚಾರವಾಗಿ ಪ್ರಜ್ವಲ್‌ ದೇವರಾಜ್‌ ಅವರು ಗಮನ ಸೆಳೆದಿದ್ದಾರೆ

  ಹೌದು ನಟ ಪ್ರಜ್ವಲ್‌ ದೇವರಾಜ್‌ ತಮ್ಮ ಪತ್ನಿಗೆ ಹೊಸ ವರ್ಷಕ್ಕೆ ಹೊಸ ಗಿಫ್ಟ್‌ ನೀಡಿದ್ದಾರೆ. ಇಲ್ಲೇ ಇರೋದು ವಿಶೇಷ. ಯಾಕೆಂದರೆ ಅವರು ನೀಡಿರುವ ಉಡುಗೊರೆಯೇ ಅಂತದ್ದು. ಹೌದು ನಟ ಪ್ರಜ್ವಲ್‌ ದೇವರಾಜ್ ಮತ್ತು ರಾಗಿಣಿ ಇಬ್ಬರೂ ಕೂಡ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

  ಪ್ರಜ್ವಲ್ ದೇವರಾಜ್ ದಂಪತಿ ಇಷ್ಟು ದಿನಗಳ ಕಾಲ ಪೋಷಕರು ಮತ್ತು ಸಹೋದರನ ಜೊತೆಗೆ ಒಂದೇ ಮನೆಯಲ್ಲಿ ವಾಸ ಇದ್ದರು. ಆದರೆ ಈಗ ರಾಗಿಣಿ ಮತ್ತು ಪ್ರಜ್ವಲ್ ಇಬ್ಬರೂ ಹೊಸ ಮನೆ ಕಟ್ಟಿಸಿದ್ದಾರೆ. ದಂಪತಿಗಳು ಇಬ್ಬರು ಕೂಡ ಹೊಸ ಮನೆಗೆ, ಹೊಸ ವರ್ಷದ ಪ್ರಯುಕ್ತ ಎಂಟ್ರಿ ಕೊಟ್ಟಿದ್ದಾರೆ.

  ರಾಗಿಣಿ ಪ್ರಜ್ವಲ್ ಅವರು ಆಗಾಗ ನೃತ್ಯ ಮಾಡುವ ಮೂಲಕ, ವರ್ಕೌಟ್ ಮಾಡುವ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೊಸ ಮನೆಯ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ರಾಗಿಣಿ. ಈ ಮನೆಯನ್ನು ಪ್ರಜ್ವಲ್ ರಾಗಿಣಿ ಅವರಿಗಾಗಿಯೇ ಕಟ್ಟಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಜ್ವಲ್ ಹಾಗೂ ರಾಗಿಣಿ ಪ್ರಜ್ವಲ್ ಅವರ ಈ ಹೊಸ ಮನೆ ಒಳಗಿನ ವೈಭವವನ್ನು ವಿಡಿಯೋದಲ್ಲಿ ರಾಗಿಣಿ ಸೆರೆ ಹಿಡಿದ್ದಾರೆ.

  ಸತಿಪತಿ ಇಬ್ಬರೂ ಸಿನಿಮಾದಲ್ಲಿ ಸಕ್ರಿಯ. ನಟ ಪ್ರಜ್ವಲ್ ಹಲವು ವರ್ಷಗಳಿಂದ ಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದಾರೆ. ರಾಗಿಣಿ ಅವರು ಕೂಡ 'ಲಾ ' ಚಿತ್ರದಲ್ಲಿ ಅಭಿನಯಿಸಿದ್ದು, ಕಿರು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್‌ ದೇವರಾಜ್‌ ಅಭಿನಯದ 'ಅರ್ಜುನ ಗೌಡ' ಚಿತ್ರದ ರಿಲೀಸ್‌ ಆಗಿ ಉತ್ತಮ ರೆಸ್ಪಾನ್ಸ್ ಪಡೆದಿದೆ. ಇನ್ನು ಮಾಫಿಯಾ, ವೀರಂ ಸೇರಿದಂತೆ ಹಲವು ಚಿತ್ರಗಳು ಪ್ರಜ್ವಲ್‌ ದೇವರಾಜ್‌ ಅವರ ಕೈಯಲ್ಲಿ ಇವೆ. ರಾಗಿಣಿ ಅವರ ಮುಂದಿನ ಸಿನಿಮಾ ಯಾವುದು ಇನ್ನೂ ಪ್ರಕಟ ಆಗಿಲ್ಲ.

  English summary
  Actor Prajwal Devraj Buys New House For Wife Ragini Prajwal, She Share Nwe Home Video,
  Tuesday, January 18, 2022, 13:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X