For Quick Alerts
  ALLOW NOTIFICATIONS  
  For Daily Alerts

  ನಟ ರಕ್ಷಿತ್ ಶೆಟ್ಟಿ 'ವಾಂಟೆಡ್ ಡೆಡ್ ಆರ್ ಅಲೈವ್'

  By ಉದಯರವಿ
  |

  ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದವರು ಬಿಎಂ ಗಿರಿರಾಜ್. ಭಿನ್ನ ರೀತಿಯ ಚಿತ್ರಗಳ ಮೂಲಕ ಗಮನಸೆಳೆಯುತ್ತಿರುವ ಗಿರಿರಾಜ್ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಇದ್ದೇ ಇದೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗಿನ 'ಮೈತ್ರಿ' ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಅವರ ಮುಂದಿನ ಚಿತ್ರ ರಕ್ಷಿತ್ ಶೆಟ್ಟಿ ಜೊತೆಗೆ ಪಕ್ಕಾ ಆಗಿದೆ. ಸಾಮಾನ್ಯವಾಗಿ ಗಿರಿರಾಜ್ ಅವರ ಚಿತ್ರಗಳು ಸೈಲೆಂಟ್ ಆಗಿ ಸೆಟ್ಟೇರಿದರೂ ಬಿಡುಗಡೆ ಬಳಿಕ ಸದ್ದು ಮಾಡುವುದು ಗೊತ್ತೇ ಇದೆ. [ಮೈತ್ರಿ ಚಿತ್ರ ವಿಮರ್ಶೆ]

  'ವಾಂಟೆಡ್ - ಡೆಡ್ ಆರ್ ಅಲೈವ್' ಎಂದು ಮುಂದಿನ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಕೆ ಮಂಜು ನಿರ್ಮಿಸುತ್ತಿದ್ದು ಜೂನ್, ಜುಲೈ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. ಸದ್ಯಕ್ಕೆ ಗಿರಿರಾಜ್ ಹಾಗೂ ರಕ್ಷಿತ್ ಶೆಟ್ಟಿ ಅವರು ತಮ್ಮದೇ ಪ್ರಾಜೆಕ್ಟ್ ಗಳಲ್ಲಿ ಬಿಜಿಯಾಗಿದ್ದು, ಅವು ಮುಗಿದ ಮೇಲೆ 'ವಾಂಟೆಡ್' ಚಿತ್ರ ಆರಂಭವಾಗಲಿದೆ.

  ಈ ಹಿಂದೆಯೇ ರಕ್ಷಿತ್ ಶೆಟ್ಟಿ ಜೊತೆಗಿನ ಚಿತ್ರವನ್ನು ಮಂಜು ಪ್ರಕಟಿಸಿದ್ದರು. ಆ ಚಿತ್ರಕ್ಕೆ 'ಎಕ್ಕಾ ರಾಜ ರಾಣಿ' ಎಂದು ಹೆಸರಿಡಲಾಗಿತ್ತು. 'ಬಾಲ್ ಪೆನ್' ಚಿತ್ರಕ್ಕೆ ನಿರ್ದೇಶಿಸಿದ್ದ ಶಶಿಕಾಂತ್ ಅವರು ಆಕ್ಷನ್ ಕಟ್ ಹೇಳಬೇಕಾಗಿದ್ದ ಚಿತ್ರ. ಆದರೆ ಕಾರಣಾಂತರಗಳಿಂದ ಚಿತ್ರ ಸೆಟ್ಟೇರಲೇ ಇಲ್ಲ.

  English summary
  After 'Mythri' movie director BM Giriraj ready for his next project with Rakshit Shetty. The film has been tentatively titled as 'Wanted - Dead or Alive'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X