For Quick Alerts
  ALLOW NOTIFICATIONS  
  For Daily Alerts

  Breaking: ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಇನ್ನಿಲ್ಲ

  |

  ಕೊರೊನಾ ವೈರಸ್ ಲಾಕ್‌ಡೌನ್ ಸಂಕಷ್ಟದಲ್ಲಿರುವ ಜನರಿಗೆ ಒಂದರ ಹಿಂದೊಂದು ನೋವಿನ ಸುದ್ದಿಗಳು ಕೇಳುವಂತಾಗಿದೆ. ಬುಧವಾರವಷ್ಟೇ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖದಲ್ಲಿರುವ ಭಾರತೀಯ ಚಿತ್ರರಂಗ, ಮತ್ತೊಬ್ಬ ಹಿರಿ ದಿಗ್ಗಜನನ್ನು ಕಳೆದುಕೊಂಡು ಮತ್ತಷ್ಟು ಆಘಾತಕ್ಕೆ ಒಳಗಾಗಿದೆ.

  ಬಾಲಿವುಡ್ ದಂತಕಥೆ ರಿಷಿ ಕಪೂರ್ ಇನ್ನಿಲ್ಲ | Rishi Kapoor

  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ (67) ಗುರುವಾರ ಬೆಳಿಗ್ಗೆ ನಿಧನರಾದರು.

  ಅಮೆರಿಕದಲ್ಲಿ ಕಳೆದ ವರ್ಷ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ರಿಷಿ ಕಪೂರ್ ಆಗಾಗ್ಗೆ ಅನಾರೋಗ್ಯದ ಸಮಸ್ಯೆಗೆ ಒಳಗಾಗುತ್ತಿದ್ದರು. ಬುಧವಾರ ಬೆಳಿಗ್ಗೆ ಅವರನ್ನು ಮುಂಬೈನ ಎಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಮುಂದೆ ಓದಿ...

  2018ರಲ್ಲಿ ಕ್ಯಾನ್ಸರ್ ಪತ್ತೆ

  2018ರಲ್ಲಿ ಕ್ಯಾನ್ಸರ್ ಪತ್ತೆ

  ರಿಷಿ ಕಪೂರ್ ಅವರು ಕ್ಯಾನ್ಸರ್‌ಗೆ ತುತ್ತಾಗಿರುವುದು 2018ರಲ್ಲಿ ಪತ್ತೆಯಾಗಿತ್ತು. ಬಳಿಕ ಅಮೆರಿಕಕ್ಕೆ ತೆರಳಿ ಸುಮಾರು ಒಂದು ವರ್ಷ ಚಿಕಿತ್ಸೆ ಪಡೆದುಕೊಂಡ ನಂತರ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದರು. ಫೆಬ್ರವರಿಯಲ್ಲಿ ಅನಾರೋಗ್ಯದಿಂದ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

  ಎರಡು ಬಾರಿ ಆಸ್ಪತ್ರೆಗೆ ದಾಖಲು

  ಎರಡು ಬಾರಿ ಆಸ್ಪತ್ರೆಗೆ ದಾಖಲು

  ಇತ್ತೀಚೆಗೆ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ದೆಹಲಿಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಅವರು ಸೋಂಕೊಂದರಿಂದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದವು. ಮುಂಬೈಗೆ ಮರಳಿದ ಕೂಡಲೇ ಮತ್ತೆ ಜ್ವರದ ಕಾರಣ ಆಸ್ಪತ್ರೆ ಸೇರಿದ್ದರು. ಆದರೆ ಬೇಗನೆ ಬಿಡುಗಡೆಯಾಗಿದ್ದರು.

  ರಾಜ್ ಕಪೂರ್‌ಗೆ ಎರಡನೆಯ ಮಗ

  ರಾಜ್ ಕಪೂರ್‌ಗೆ ಎರಡನೆಯ ಮಗ

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಅವರು ಏಪ್ರಿಲ್ 2ರಂದು ಕೊನೆಯ ಬಾರಿ ಟ್ವೀಟ್ ಮಾಡಿದ್ದರು. 1952ರ ಸೆ. 4ರಂದು ಖ್ಯಾತ ನಟ, ನಿರ್ದೇಶಕ ರಾಜ್ ಕಪೂರ್ ಹಾಗೂ ಕೃಷ್ಣಾ ರಾಜ್ ಕಪೂರ್ ಅವರ ಎರಡನೆಯ ಮಗನಾಗಿ ಜನಿಸಿದ ಅವರು ಶ್ರೀ 420 ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.

  ಇಬ್ಬರು ಮಕ್ಕಳು

  ಇಬ್ಬರು ಮಕ್ಕಳು

  ತಮ್ಮ ಸಹನಟಿಯಾಗಿದ್ದ ನೀತು ಸಿಂಗ್ ಅವರೊಂದಿಗೆ 1980ರ ಜನವರಿ 22ರಂದು ವೈವಾಹಿಕ ಬದುಕಿಗೆ ಕಾಲಿರಿಸಿದ ಅವರು ರಿಧಿಮಾ ಕಪೂರ್ ಮತ್ತು ಪ್ರಸಿದ್ಧ ನಟ ರಣಬೀರ್ ಕಪೂರ್ ಅವರನ್ನು ಅಗಲಿದ್ದಾರೆ. ಬಾಲಿವುಡ್‌ನ ಹಿರಿಯ ಮತ್ತು ಕಿರಿಯ ತಲೆಮಾರಿನ ಕಲಾವಿದರಿಗೆ ಆತ್ಮೀಯರಾಗಿದ್ದ ಅವರ ಅಗಲುವಿಕೆ ಚಿತ್ರರಂಗದ ದುಃಖವನ್ನು ಇಮ್ಮಡಿಗೊಳಿಸಿದೆ.

  English summary
  Veteran Bollywood actor Rishi Kapoor passed away on Thursday in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X