For Quick Alerts
  ALLOW NOTIFICATIONS  
  For Daily Alerts

  ನಟ, ದರ್ಶನ್ ಅಭಿಮಾನಿ ಸತೀಶ್ ವಜ್ರ ಬರ್ಬರ ಹತ್ಯೆ

  |

  ಸಹ ನಟ ಸತೀಶ್ ವಜ್ರ ಅವರನ್ನು ನಿನ್ನೆ ರಾತ್ರಿ ಬೆಂಗಳೂರಿನ ಆರ್‌ಆರ್ ನಗರದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇವರು ನಟ ದರ್ಶನ್‌ ಹಾಗೂ ಪ್ರಜ್ವಲ್ ದೇವರಾಜ್‌ರ ಅಭಿಮಾನಿಯೂ ಆಗಿದ್ದರು.

  ನಟನಾಗಿ ಚಂದನವನದಲ್ಲಿ ಮಿಂಚಬೇಕು ಎಂಬ ಆಸೆ ಹೊಂದಿದ್ದ ಸತೀಶ್ ವಜ್ರ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದರು. ಇವರು ನಟಿಸಿದ್ದ 'ಲಗೋರಿ' ಹೆಸರಿನ ಕಿರು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  ಒಂದಾಗ್ತಿದ್ದಾರೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್!ಒಂದಾಗ್ತಿದ್ದಾರೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್!

  ಇದೀಗ ಮಂಡ್ಯ ಮೂಲದ ಸತೀಶ್ ವಜ್ರನ ಬರ್ಬರ ಕೊಲೆ ಆಗಿದ್ದು, ಆತನ ಭಾಮೈದನೇ ಸತೀಶ್ ಅನ್ನು ಕೊಂದಿರುವುದಾಗಿ ಹೇಳಲಾಗುತ್ತಿದೆ. ಸತೀಶ್ ವಜ್ರನ ಪತ್ನಿ ಕೆಲವೇ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ಈಗ ಪತ್ನಿಯ ಸಹೋದರನೇ ಸತೀಶ್‌ನ ಕೊಲೆ ಮಾಡಿದ್ದು, ಇದಕ್ಕೆ ಬಲವಾದ ಕಾರಣ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

  ಆರ್‌ಆರ್‌ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್‌ನ ಭಾಮೈದನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  ಸತೀಶ್ ವಜ್ರ, ದರ್ಶನ್ ಹಾಗೂ ಪ್ರಜ್ವಲ್ ರ ಅಭಿಮಾನಿ ಆಗಿದ್ದರು. ಕೈ ಮೇಲೆ ಡಿ-ಪ್ರಿನ್ಸ್ ಎಂದು ಹಚ್ಚೆ ಹಾಕಿಸಿದ್ದು, ಮೆಚ್ಚಿನ ನಟರ ಹುಟ್ಟುಹಬ್ಬಕ್ಕೆ ತಪ್ಪದೆ ತೆರಳಿ ಶುಭಾಶಯ ಕೋರುತ್ತಿದ್ದರು. ದರ್ಶನ್‌ಗೆ ಅವರ ತಂದೆ ದಿನಕರ್ ತೂಗುದೀಪ್ ಅವರ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಿದ್ದರು ಸೀಶ್.

  ಸತೀಶ್ ನಟಿಸಿದ್ದ 'ಲಗೋರಿ' ಕಿರು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಟಿ ನಿವೇದಿಕಾ, ಶಿವು ಕೆಆರ್ ಪೇಟೆ ಇನ್ನಿತರರು ಈ ಕಿರುಚಿತ್ರವನ್ನು ನೋಡಿ ಮೆಚ್ಚುಗೆ ಮಾತುಗಳನ್ನಾಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕು ಎಂಬ ಕನಸು ಕಂಡಿದ್ದ ಸತೀಶ್ ವಜ್ರ ದುರಂತ ಅಂತ್ಯವನ್ನು ಕಂಡಿದ್ದಾರೆ.

  English summary
  Actor Sathish Vajra murdered in RR Nagar on June 17 night. His wife died few days back. Now police suspecting Sathish's brother in law may did this.
  Saturday, June 18, 2022, 16:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X