»   » 'ರಾಜ್-ವಿಷ್ಣು' ಜೋಡಿ ಬಾಯಿಗೆ ಮತ್ತೆರಡು ಲಡ್ಡು ಬಂದು ಬಿತ್ತು.!

'ರಾಜ್-ವಿಷ್ಣು' ಜೋಡಿ ಬಾಯಿಗೆ ಮತ್ತೆರಡು ಲಡ್ಡು ಬಂದು ಬಿತ್ತು.!

Posted By:
Subscribe to Filmibeat Kannada

ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕ-ನಾಯಕಿಯ ಜೋಡಿ ಸೂಪರ್ ಹಿಟ್ ಆಗುತ್ತೆ. ಅಥವಾ ನಾಯಕ-ಖಳನಾಯಕ ಜೋಡಿಯೂ ಸಕ್ಸಸ್ ಆಗುತ್ತೆ. ಆದ್ರೆ, ಇಬ್ಬರ ನಟರ ಜುಗಲ್ ಬಂದಿ ವರ್ಕೌಟ್ ಆಗುವುದು ಬಹಳ ಅಪರೂಪ.

ಈಗ ಅಂತಹದ್ದೇ ಜೋಡಿಯೊಂದು ಸ್ಯಾಂಡಲ್ ವುಡ್ ನಲ್ಲಿ ಯಶಸ್ಸು ಕಂಡಿದೆ. ಹೌದು, ಸ್ಯಾಂಡಲ್ ವುಡ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದ ಶರಣ್ ಮತ್ತು ಚಿಕ್ಕಣ್ಣ ಜೋಡಿಗೆ ಬೇಡಿಕೆ ಹೆಚ್ಚಿದ್ದು, 'ರಾಜ್-ವಿಷ್ಣು' ಜೋಡಿ ಬಾಯಿಗೆ ಮತ್ತೆರೆಡು ಲಡ್ಡು ಬಂದು ಬಿದ್ದಿದೆ.

'ರಾಜ್-ವಿಷ್ಣು' ಜೊತೆ 'ಬಾಹುಬಲಿ-ಕಟ್ಟಪ್ಪ'ನ ಸರ್ಪ್ರೈಸ್ ಎಂಟ್ರಿ!

'ಅಧ್ಯಕ್ಷ' ಮತ್ತು 'ರಾಜ್-ವಿಷ್ಣು' ಚಿತ್ರದ ಮೂಲಕ ಮನೆ ಮನೆ ಮಾತಾಗಿರುವ ಈ ಜೋಡಿ, ಅಷ್ಟರಲ್ಲೇ ಮತ್ತೆರೆಡು ಹೊಸ ಸಿನಿಮಾಗಳಿಗೆ ಆಯ್ಕೆಯಾಗಿದ್ದಾರಂತೆ. ಯಾವುದು ಆ ಚಿತ್ರಗಳು ಎಂದು ಮುಂದೆ ಓದಿ...........

ಅಧ್ಯಕ್ಷ-ಉಪಾಧ್ಯಕ್ಷರ ಹವಾ

ಶರಣ್ ಮತ್ತು ಚಿಕ್ಕಣ್ಣ ಅವರ ಜೋಡಿಯನ್ನ ಮತ್ತೆ ಮತ್ತೆ ನೋಡಬೇಕೆನ್ನುವ ಅಭಿಮಾನಿಗಳಿಗಾಗಿ ಮತ್ತೆರೆಡು ಹೊಸ ಚಿತ್ರಗಳು ಬರ್ತಿದೆ. ಈ ಮೂಲಕ ನಾಲ್ಕನೇ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುವ ಮೂಲಕ ಹೊಸ ದಾಖಲೆ ಮಾಡುತ್ತಿದ್ದಾರೆ.

ಮೊದಲನೇಯದು ರೀಮೇಕ್ ಚಿತ್ರ

ಎರಡು ಹೊಸ ಚಿತ್ರಗಳ ಪೈಕಿ, ಒಂದು ತಮಿಳಿನ ರೀಮೇಕ್ ಚಿತ್ರವೆಂದು ಹೇಳಲಾಗ್ತಿದೆ. 'ಬಿರುಗಾಳಿ', 'ಭಜರಂಗಿ', 'ಚಿಂಗಾರಿ', 'ವಜ್ರಕಾಯ' ಅಂತಹ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಮುದ್ದಾನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಮತ್ತೊಂದು ರೀಮೇಕ್ ಚಿತ್ರಕ್ಕೆ ಶರಣ್ ನಾಯಕ.!

ಮತ್ತೊಂದು ಚಿತ್ರಕ್ಕೆ ಅನಿಲ್ ಸಾರಥ್ಯ

ಶರಣ್ ಮತ್ತು ಚಿಕ್ಕಣ್ಣ ಜೋಡಿಯ ಇನ್ನೊಂದು ಚಿತ್ರಕ್ಕೆ ಅನಿಲ್ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ. ಇಷ್ಟು ಹೊರತು ಪಡಿಸಿ ಈ ಚಿತ್ರದ ಬಗ್ಗೆ ಬೇರೆ ಯಾವ ಮಾಹಿತಿಯೂ ಹೊರ ಬಿದ್ದಿಲ್ಲ.

ಬಿಡುಗಡೆಗೆ ಸಿದ್ದವಾಗಿರುವ 'ರಾಜ್-ವಿಷ್ಣು'

ತಮಿಳಿನ 'ರಜನಿ-ಮುರುಗನ್' ಚಿತ್ರದ ರೀಮೇಕ್ 'ರಾಜ್-ವಿಷ್ಣು' ಬಿಡುಗಡೆಗೆ ಸಿದ್ದವಾಗಿದೆ. ಕೆ.ಮಾದೇಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಮು ನಿರ್ಮಾಣ ಮಾಡಿದ್ದಾರೆ. ಮುಂಬೈ ಮೂಲಕ ನಟಿ ವೈಭವಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

'ರಾಜ್ ವಿಷ್ಣು' ಆಗಿ ಬಂದಿದ್ದಾರೆ ಅಧ್ಯಕ್ಷ-ಉಪಾದ್ಯಕ್ಷರು!

'ಅಧ್ಯಕ್ಷ' ನಂತರ ಸ್ಟಾರ್ ಗಿರಿ

ನಂದಕಿಶೋರ್ ನಿರ್ದೇಶನ ಮಾಡಿದ್ದ 'ಅಧ್ಯಕ್ಷ' ಚಿತ್ರದ ನಂತರ ಶರಣ್ ಹಾಗೂ ಚಿಕ್ಕಣ್ಣ ಇಬ್ಬರಿಗೂ ಲಕ್ ಖುಲಾಯಿಸಿತ್ತು. ಅಲ್ಲಿಯವರೆಗೂ ಒಂದು ಹಂತದಲ್ಲಿದ್ದ ಈ ಜೋಡಿಗಳು ಈಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರು ಎನಿಸಿಕೊಂಡಿದ್ದಾರೆ.

English summary
Actors Sharan and Chikkanna Combination will be Seen on Screen in two More Films as well, which will be Directed by Anil and Yoganand Muddana

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada