'ವಿ'ಭಿನ್ನ ಚಿತ್ರ ಕೈಗೆತ್ತಿಕೊಂಡ ಹಾಸ್ಯನಟ ಶರಣ್
ವಿಚಿತ್ರ, ವಿಭಿನ್ನ, ವಿಸ್ಮಯ ಸಿಂಬಲ್ ಗಳೊಂದಿಗೆ ಚಿತ್ರಗಳನ್ನು ತೆಗೆದು ಯಶಸ್ವಿಯಾದವರು ರಿಯಲ್ ಸ್ಟಾರ್ ಉಪೇಂದ್ರ. ಈಗ ಇದೇ ಹಾದಿಯಲ್ಲಿ ಹೆಜ್ಜೆ ಹಾಕಲು ಹೊರಟಿದ್ದಾರೆ ಹಾಸ್ಯನಟ ಶರಣ್. ತಮ್ಮ ನೂತನ ಚಿತ್ರಕ್ಕೆ ವಿಕ್ಟರಿ ಸಿಂಬಲ್ ಇಟ್ಟುಕೊಂಡಿದ್ದಾರೆ.
'ರ್‍ಯಾಂಬೊ' ಚಿತ್ರದ ಯಶಸ್ಸಿನ ನಂತರ ಶರಣ್ ನೂತನ ಚಿತ್ರವೊಂದರಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಈ ಹೊಸ ಚಿತ್ರಕ್ಕೆ ವಿಜಯದ ಸಂಕೇತ ಸೂಚಿಸುವ ಚಿಹ್ನೆಯನ್ನು ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ.

ಎಸ್.ಆರ್.ಎಸ್ ಮೀಡಿಯಾ ವಿಷನ್ ಎಂಬ ಲಾಂಛನದಲ್ಲಿ ಆನಂದ್ ಆಡಿಯೋ ಮೋಹನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀನಾಥ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ.
ಶರಣ್, ತಬಲನಾಣಿ, ಅವಿನಾಶ್, ರಮೇಶ್‍ಭಟ್, ಸಾಧುಕೋಕಿಲಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ. ಇದೇ ಜನವರಿ 2013ರ ಅಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











