For Quick Alerts
  ALLOW NOTIFICATIONS  
  For Daily Alerts

  ಅಯ್ಯಪ್ಪ ಮಾಲೆ ಧರಿಸಿದ ನಟ ಶಿವರಾಜ್ ಕುಮಾರ್, ನಿರ್ದೇಶಕ ರಘುರಾಮ್

  |

  ನಟ ಶಿವರಾಜ್ ಕುಮಾರ್ ಪ್ರತಿವರ್ಷವೂ ಅಯ್ಯಪ್ಪ ಮಾಲೆ ಧರಿಸುತ್ತಾರೆ. ಈ ವರ್ಷವೂ ಅದನ್ನು ಶಿವರಾಜ್ ಕುಮಾರ್ ಮುಂದುವರೆಸಿಕೊಂಡು ಹೋಗಿದ್ದಾರೆ. ಇಂದು (ಫೆಬ್ರವರಿ 22) ಶಿವರಾಜ್ ಕುಮಾರ್, ನಿರ್ದೇಶಕ ರಘುರಾಮ್ ಸೇರಿದಂತೆ ಗೆಳೆಯರ ಜೊತೆಗೆ ಮಾಲೆ ಹಾಕಿಕೊಂಡಿದ್ದಾರೆ.

  ರಾಬರ್ಟ್ ಗೆ ಅಡ್ವಾನ್ಸ್ ಕೊಟ್ಟಿದ್ದು 2016 ರಲ್ಲಿ ಸ್ಟಾರ್ಟ್ ಆಗಿದ್ದು 2019 ರಲ್ಲಿ | Madagaja | Umapathy

  ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿ ಇಂದು ಪೂಜೆ ಸಲ್ಲಿಸಿ, ಮಾಲೆ ಧರಿಸಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಜೊತೆಗಿದ್ದರು. ಇಂದು ಮಾಲೆ ಧರಿಸಿದ್ದು, ಮಾರ್ಚ್ 14 ರಂದು ಬೆಂಗಳೂರಿನಿಂದ ಶಬರಿಮಲೆಗೆ ಹೊರಡಲಿದ್ದಾರೆ.

  ಸೆಂಚುರಿ ಸ್ಟಾರ್ 'RDX' ಸಿನಿಮಾ ಶುಭಾರಂಭ: ಭಾಸ್ಕರ್ ರಾವ್, ಪುನೀತ್ ಭಾಗಿಸೆಂಚುರಿ ಸ್ಟಾರ್ 'RDX' ಸಿನಿಮಾ ಶುಭಾರಂಭ: ಭಾಸ್ಕರ್ ರಾವ್, ಪುನೀತ್ ಭಾಗಿ

  ಇಂದಿನ ಪೂಜೆಯ ಫೋಟೋಗಳನ್ನು ನಿರ್ದೇಶಕ ರಘುರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ದೂರದ ಶಬರಿಮಲೆಗೆ ಹೊರಡಲು ಮಾಲೆ ಅನ್ನೋ ಪವಿತ್ರತೆಯನ್ನು ಧರಿಸಲು, 18 ಶ್ರೇಷ್ಠ ಮೆಟ್ಟಲುಗಳನ್ನು ಹತ್ತಲು, ಅಯ್ಯಪ್ಪನ ದರ್ಶನಕ್ಕೆ ಕರುನಾಡ ದೊರೆಯೊಂದಿಗೆ ಇದೆ (14/03/20) ಹೊರಟಿರುವೆವು ಸ್ವಾಮಿಯೇ ನಿನ್ನೆ ನೋಡಲು'' ಎಂದು ಬರೆದುಕೊಂಡಿದ್ದಾರೆ.

  ಸದ್ಯ, ಶಿವರಾಜ್ ಕುಮಾರ್ 'ಭಜರಂಗಿ 2' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. 'ದ್ರೋಣ' ಚಿತ್ರದ ಟ್ರೇಲರ್ ಹಾಗೂ ಹಾಡುಗಳು ನಾಳೆ (ಫೆಬ್ರವರಿ 23) ಬಿಡುಗಡೆ ಆಗಲಿದೆ. ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  Actor Shiva Rajkumar Wearing Ayyappa Mala

  ಶಿವರಾಜ್ ಕುಮಾರ್ ನಟನೆಯ 'ಆರ್ ಡಿ ಎಕ್ಸ್' ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ನಡೆದಿದೆ. ತಮಿಳು ನಿರ್ದೇಶಕ ರವಿ ಅರಸು ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

  English summary
  Kannada actor Shiva Rajkumar wearing Ayyappa Mala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X