For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ-ರಾಜೇಂದ್ರ ಬಾಬು ಚಿತ್ರಕ್ಕೆ ಪಕ್ಕಾ ಆಯ್ತು ಹೆಸರು

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಿ ರಾಜೇಂದ್ರ ಬಾಬು ನಿರ್ದೇಶಿಸಲಿರುವ ಹೊಸ ಚಿತ್ರವೊಂದಕ್ಕೆ ನಾಯಕರಾಗಿ ನಟಿಸಲಿರುವ ಸುದ್ದಿ ಈಗಾಗಲೇ ಬಹಿರಂಗವಾಗಿದೆ. ಆದರೆ ಆ ಚಿತ್ರದ ಹೆಸರೇನು ಎನ್ನುವುದು ನಿರ್ಧಾರವಾಗಿರಲಿಲ್ಲ. ಈಗ ಹೆಸರು ಪಕ್ಕಾ ಆಗಿದ್ದು, ಅದು 'ನಾ ನಿನ್ನ ಮರೆಯಲಾರೆ.

  1976 ರಲ್ಲಿ ಡಾ ರಾಜ್ ಹಾಗೂ ಲಕ್ಷ್ಮಿ ತಾರಾಗಣದಲ್ಲಿ ಈ ಹೆಸರಿನ ಚಿತ್ರ ಈಗಾಗಲೇ ತೆರೆಗೆ ಬಂದಿತ್ತು. ಈ ಹೆಸರನ್ನು ಮತ್ತೆ ಇಡಲಾಗುತ್ತಿದ್ದು ಇದರಲ್ಲಿ ಡಾ ರಾಜ್ ಕುಮಾರ್ ಮಗ ಶಿವರಾಜ್ ಕುಮಾರ್ ಅವರು ಅಭಿನಯಿಸುತ್ತಿರುವುದು ವಿಶೇಷ. ಈ ಚಿತ್ರಕ್ಕೆ 'ಪ್ರೇಮದ ಕಾಣಿಕೆ' ಎಂದು ಹೆಸರಿಡಲು ಯೋಚಿಸಲಾಗಿತ್ತಾದರೂ ಕೊನೆಯಲ್ಲಿ 'ನಾ ನಿನ್ನ ಮರೆಯಲಾರೆ' ಹೆಸರು ಪಕ್ಕಾ ಆಗಿದೆ.

  ಈ ಮೊದಲೂ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್, ಈ ಬಾರಿ ಅವರ ವೃತ್ತಿಜೀವನದಲ್ಲಿ ಯಾವತ್ತೂ ಮಾಡದಿರುವ ಕ್ರೀಡಾಪಟುವಿನ ಪಾತ್ರ ಮಾಡಲಿದ್ದಾರೆ. ಈ ಪಾತ್ರದಲ್ಲಿ ಶಿವಣ್ಣ ಅಭಿನಯ ಪ್ರೇಕ್ಷಕರಿಗೆ ಮೆಚ್ಚಿಗೆಯಾಗುವುದು ಖಂಡಿತ ಎಂಬುದು ನಿರ್ದೇಶಕ ಡಿ. ರಾಜೇಂದ್ರ ಬಾಬು ಅಭಿಪ್ರಾಯ.

  ಡಿ. ರಾಜೇಂದ್ರ ಬಾಬು ಜೊತೆ ಈ ಮೊದಲೂ ಶಿವಣ್ಣ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜೋಡಿ ಹಕ್ಕಿ, ಕುರುಬನ ರಾಣಿ ಮುಂತಾದ ಚಿತ್ರಗಳಲ್ಲಿ ಕೆಲಸಮಾಡಿರುವ ಈ ಜೋಡಿ 9 ವರ್ಷಗಳ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಬರಲಿರುವ ನಾ ನಿನ್ನ ಮರೆಯಲಾರೆ ಚಿತ್ರಕ್ಕೆ ಕಥೆ ಹೊಳೆದಿದ್ದು ಕೂಡ ಅವರಿಬ್ಬರೂ ಈ ಮೊದಲು ಕೆಲಸ ಮಾಡುವಾಗಲೇ ಎಂಬುದು ವಿಶೇಷ ಸಂಗತಿ.

  ಸೆಟ್ಟೇರಲಿರುವ ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಹಾಗೂ ಪಿ.ಎಚ್.ಕೆ. ದಾಸ್ ಛಾಯಾಗ್ರಹಣವಿದೆ. ನಾಯಕಿ ಹಾಗೂ ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯಬೇಕಾಗಿದೆ. ಶಿವಣ್ಣ ಕೈಯಲ್ಲಿ ಈಗಿರುವ ಚಿತ್ರಗಳ ಕೆಲಸ ಮುಗಿದ ತಕ್ಷಣ ಆ ಪ್ರಾಜೆಕ್ಟ್ ಶುರುವಾಗಲಿದೆ. ಶಿವಣ್ಣರ ಬಹುನಿರೀಕ್ಷೆಯ ಚಿತ್ರ 'ಶಿವ' ಡಬ್ಬಿಂಗ್ ಹಂತದಲ್ಲಿದೆ. ಬಿಡುಗಡೆ ಸದ್ಯದಲ್ಲೇ ಜರುಗಲಿದೆ.

  ಅಂದಹಾಗೆ, ಶಿವಣ್ಣ ಅಭಿನಯದ 'ಅಂದರ್ ಬಾಹರ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲೇ ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರ ಸೆಟ್ಟೇರಲಿದೆ. ಸ್ವಯಂವರ ಚಂದ್ರು ನಿರ್ಮಾಣದ ಕಡ್ಡಿಪುಡಿ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಶಿವಣ್ಣ ಚಿತ್ರಗಳು ಒಂದರ ನಂತರ ಮತ್ತೊಂದರಂತೆ ಸೆಟ್ಟೇರುತ್ತಿವೆ. (ಒನ್ ಇಂಡಿಯಾ ಕನ್ನಡ)

  English summary
  Actor Shivrajkumar's upcoming movie titled 'Naa Ninna Mareyalare'. This movie to direct by D Rajendra Babu. After 9 years, Shivrajkumar and D Rajendra Bubu working together again. Heroine not selected for this movie till now. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X