»   » ದರ್ಶನ್-ಸುದೀಪ್ ಸ್ನೇಹ ಸಮರದ ಮಧ್ಯೆ ಶ್ರೀಮುರಳಿ 'ಉಗ್ರ'ಪ್ರತಾಪ!

ದರ್ಶನ್-ಸುದೀಪ್ ಸ್ನೇಹ ಸಮರದ ಮಧ್ಯೆ ಶ್ರೀಮುರಳಿ 'ಉಗ್ರ'ಪ್ರತಾಪ!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವಿನ ಸ್ನೇಹ ಸಮರ ಎಲ್ಲೆಡೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಹೀಗಿರುವಾಗ ಇವರಿಬ್ಬರ ಜಗಳದ ಮಧ್ಯೆ ನಟ ಶ್ರೀಮುರಳಿ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿಯವರೆಗೂ ದರ್ಶನ್-ಸುದೀಪ್ ಅವರ ಜಗಳಕ್ಕೆ ಸಂಬಂಧಪಟ್ಟಂತೆ ಬುಲೆಟ್ ಪ್ರಕಾಶ್, ಜಗ್ಗೇಶ್, ಆದಿತ್ಯ ಬಿಟ್ರೆ ಚಿತ್ರರಂಗದ ಬೇರೆ ಯಾರು ಪ್ರತಿಕ್ರಿಯಿಸಿರಲಿಲ್ಲ.[ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!]

ಆದ್ರೆ, ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಒಂದು ವಿಡಿಯೋ ಈಗ, ಕಿಚ್ಚ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಹುಬ್ಬಳ್ಳಿಯಲ್ಲಿ ಸುದೀಪ್ ನೀಡಿದ್ದ ಪ್ರತಿಕ್ರಿಯೆಗೆ ಟಾಂಗ್ ಕೊಡುವಂತಿರುವ ವಿಡಿಯೋವೊಂದನ್ನ ಶ್ರೀ ಮುರಳಿ ತಮ್ಮ ಇನ್ಸ್ಟಾಗ್ರ್ಯಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಈಗ ಹೊಸ ವಿವಾದ ಹುಟ್ಟುಹಾಕಿದೆ. ಮುಂದೆ ಓದಿ....

ಕಿಚ್ಚನಿಗೆ ಟಾಂಗ್ ಕೊಟ್ರಾ ಶ್ರೀಮುರಳಿ?

ನಿನ್ನೆ (ಮಾರ್ಚ್ 7) ಹುಬ್ಬಳ್ಳಿಯಲ್ಲಿ ದರ್ಶನ್ ಅವರ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ಪ್ರತಿಕ್ರಿಯೆಗೆ ಟಾಂಗ್ ಕೊಡುವಂತೆ ನಟ ಶ್ರೀಮುರಳಿ ಒಂದು ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಮೊದಲು ಸುದೀಪ್ ಕೊಟ್ಟಿದ್ದ ಪ್ರತಿಕ್ರಿಯೆ ನೋಡಿ!

ದರ್ಶನ್ ಕುರಿತಂತೆ ಮಾಧ್ಯಮದವರು ಕಿಚ್ಚನನ್ನ ಕೇಳಿದಾಗ, ''ಐ ವುಡ್ ರೆಸ್ಪೆಕ್ಟ್, ಇಫ್ ಯೂ ವುಡ್ ರೆಸ್ಪೆಕ್ಟ್ ಮಿ.....'' ಎಂದು ಒಂದೇ ವಾಕ್ಯದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದರು.[ದರ್ಶನ್ ಒಡಲೊಳಗಿಂದ ದಿಢೀರ್ ಅಂತ ಸಿಡಿದ ಐದು ಸಿಡಿಗುಂಡುಗಳಿವು.!]

ಶ್ರೀಮುರಳಿ ಪೋಸ್ಟ್ ಮಾಡಿರುವ ವಿಡಿಯೋ!

''ನಿನಗೆ ರೆಸ್ಪೆಕ್ಟ್ ಕೊಡೋಕೆ ಬರಲ್ಲ ಅಂದ್ಮೇಲೆ, ನಿನಗೆ ರೆಸ್ಪೆಕ್ಟ್ ಕೇಳೋ ಅರ್ಹತೆನೇ ಇಲ್ಲ'' ಎಂಬ ಡೈಲಾಗ್ ನ್ನ ಶ್ರೀಮುರಳಿ ತಮ್ಮ ಇನ್ಸ್ಟಾಗ್ರ್ಯಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ಕಿಚ್ಚನ ಅಭಿಮಾನಿಗಳು ಕೆಂಡಾಮಂಡಲ!

ಶ್ರೀಮುರಳಿ ಈ ವಿಡಿಯೋವನ್ನ ಯಾಕೆ ಹಾಕಿಕೊಂಡ್ರೋ ಗೊತ್ತಿಲ್ಲ. ಆದ್ರೆ, ಅವರು ಹೇಳಿದ್ದ ಡೈಲಾಗ್ ಮಾತ್ರ ನೇರವಾಗಿ ಸುದೀಪ್ ಗೆ ಟಾಂಗ್ ಕೊಡವ ರೀತಿಯಲ್ಲೇ ಇತ್ತು ಎಂಬುದು ಕಿಚ್ಚನ ಅಭಿಮಾನಿಗಳ ಕೋಪಕ್ಕೆ ಕಾರಣವಾಯಿತು.[ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.? ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ ಇದೇನಾ.? ]

ಶ್ರೀಮುರಳಿ ವಿರುದ್ದ ಸುದೀಪ್ ಫ್ಯಾನ್ಸ್ ವಾಕ್ ಸಮರ!

ಈ ವಿಡಿಯೋವನ್ನ ನೋಡಿದ ಸುದೀಪ್ ಅಭಿಮಾನಿ ಬಳಗ, ನಟ ಶ್ರೀಮುರಳಿ ಅವರ ವಿರುದ್ಧ ವಾಕ್ ಸಮರ ಶುರು ಮಾಡಿತು. ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರ್ಯಾಮ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಮುರುಳಿ ವಿರುದ್ಧವಾಗಿ ಕಾಮೆಂಟ್ ಗಳನ್ನ ಮಾಡಿದರು.[ದರ್ಶನ್ ವಿಚಾರದಲ್ಲಿ 'ಡೆಡ್ಲಿ ಆದಿತ್ಯ' ಟಾಂಗ್ ಕೊಟ್ಟಿದ್ದು ಯಾರಿಗೆ?]

ಕ್ಲಾರಿಟಿ ಕೊಟ್ಟ ರೋರಿಂಗ್ ಸ್ಟಾರ್!

''ಸಾರಿ, ನನ್ನ ಸ್ಟೇಟ್ ಮೆಂಟ್ ಬೇರೆಯವರಿಗೆ, ಬೇರೆ ರೀತಿ ಅನಿಸಿದ್ರೆ. ಇನ್ನೊಬ್ಬರನ್ನ ಗಮನದಲ್ಲಿಟ್ಟುಕೊಂಡು ಆ ವಿಡಿಯೋ ಹಾಕಿಕೊಂಡಿದ್ದಲ್ಲ. ಆ ತರ ನಾನು ಹಾಕಿಕೊಳ್ತಾನೆ ಇರ್ತಿನಿ. ನಾನು ಈ ಮಟ್ಟಕ್ಕೆ ಯೋಚನೆ ಮಾಡಲ್ಲ. ದರ್ಶನ್, ಸುದೀಪ್ ಅವರು ನಮಗೆ ಒಳ್ಳೆ ಸ್ನೇಹಿತರು. ನಾನು ಉದ್ದೇಶಪೂರ್ವಕವಾಗಿ ಇದನ್ನ ಮಾಡಿಲ್ಲ. ಎಲ್ಲರೂ ಚೆನ್ನಾಗಿರೋಣ. ಅರ್ಥ ಮಾಡ್ಕೊಳ್ಳಿ'' ಎಂದು ಶ್ರೀಮುರಳಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ರು. (ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ)

ಶ್ರೀಮುರಳಿ ಪರ ಬ್ಯಾಟ್ ಬೀಸಿದ ಸುದೀಪ್!

ಈ ಮಧ್ಯೆ ನಟ ಸುದೀಪ್ ಕೂಡ ಟ್ವಿಟ್ಟರ್ ನಲ್ಲಿ ನಟ ಶ್ರೀಮುರಳಿ ಪರವಾಗಿ ಟ್ವೀಟ್ ಮಾಡಿದ್ರು. ''ಶ್ರೀಮುರಳಿ ಅವರನ್ನ ನಾನು ಹಲವು ವರ್ಷಗಳಿಂದ ನೋಡಿದ್ದೀನಿ ಮತ್ತು ಒಳ್ಳೆ ಫ್ರೆಂಡ್. ದಯವಿಟ್ಟು ಅವರ ಆ ಹೇಳಿಕೆಯನ್ನ ಯಾರು ತಪ್ಪಾಗಿ ಅರ್ಥೈಸಬೇಡಿ'' ಎಂದು ಅವರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಿವಾದಕ್ಕೆ ಅಂತ್ಯವಾಡಿದ ಸ್ಟಾರ್ಸ್!

ಸುದೀಪ್ ಅವರ ಟ್ವೀಟ್ ಗೆ, ಶ್ರೀಮುರಳಿ ಕೂಡ ಪ್ರತಿಕ್ರಿಯೆ ಕೊಟ್ಟಿದ್ದು, ''ಕಿಚ್ಚ ಸುದೀಪ್ ಅವರಿಗೆ ಧನ್ಯವಾದಗಳು, ನನ್ನ ಅರ್ಥ ಮಾಡಿಕೊಂಡಿದಕ್ಕೆ, ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ'' ಎಂದು ಈ ವಿವಾದಕ್ಕೆ ತೆರೆ ಎಳೆದರು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

English summary
Actor SriMurali's Statements Create a New Controversy Between Sudeep Fans and Himself. here is the Complete Details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada