For Quick Alerts
  ALLOW NOTIFICATIONS  
  For Daily Alerts

  ದರ್ಶನ್- ಸುದೀಪ್‌ಗಾಗಿ ಅಭಿಮಾನಿಗಳ ಅಭಿಯಾನ!

  |

  ಸಿನಿಮಾರಂಗ ಅಂತ ಬಂದಾಗ ಅಲ್ಲಿ ಸ್ಪರ್ಧೆ ಸರ್ವೇ ಸಾಮಾನ್ಯ. ಸ್ಟಾರ್ ವಾರ್, ದೊಡ್ಡ ದೊಡ್ಡ ಸಿನಿಮಾಗಳು, ಕಲಾವಿದರು ಹೀಗೆ ಪ್ರತಿ ಹಂತದಲ್ಲೂ ಬಣ್ಣದ ಲೋಕದಲ್ಲಿ ಸ್ಪರ್ಧೆ ಇದ್ದೇ ಇರುತ್ತದೆ. ಯಾಕೆಂದರೆ ಈ ಬಣ್ಣದ ಲೋಕಕ್ಕೆ ಕಡಿಮೆ ಸಮಯದಲ್ಲೇ ಬದುಕು ಬದಲಿಸುವ ದೊಡ್ಡ ಶಕ್ತಿ ಇದೆ. ಏನೇ ಸ್ಪರ್ಧೆ ಇದ್ದರೂ ನಮ್ಮ ಕನ್ನಡದ ಸ್ಟಾರ್‌ ನಟರು ಹಲವು ವಿಚಾರಗಳಲ್ಲಿ ಮಾದರಿ ನಾಯಕವಾಗಿದ್ದಾರೆ, ಸ್ಪೂರ್ತಿ ದಾಯಕವಾಗಿದ್ದಾರೆ. ಆದ್ರೆ ಹಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಡುತ್ತಿರೋ ಬೇಸರದ ವಿಚಾರ ಅಂದರೆ ಅದು ದರ್ಶನ್‌ ಮತ್ತು ಸುದೀಪ್ ಮುನಿಸು.

  ಸ್ಯಾಂಡಲ್‌ವುಡ್‌ನಲ್ಲಿ ಆಗಾಗ ಅತಿ ಹೆಚ್ಚಾಗಿ ದಚ್ಚು-ಕಿಚ್ಚನ ಸ್ನೇಹದ ವಿಚಾರ ಸದ್ದು ಮಾಡುತ್ತಾ ಇರುತ್ತೆ. ದರ್ಶನ್‌ ಮತ್ತು ಸುದೀಪ್‌ ಇಬ್ಬರ ಸ್ನೇಹಿ ಉರಿದು ಬಿದ್ದ ಬಳಿಕ ಈ ವಿಚಾರಕ್ಕೆ ಒಂದಾದಲ್ಲಾ ಒಂದು ವಿಚಾರ ಸುತ್ತಿಕೊಳ್ಳುತ್ತಲೇ ಇದೆ. ಇವರ ಸ್ನೇಹದ ಸುದ್ದಿ ಸದಾ ಚಾಲ್ತಿಯಲ್ಲಿ ಇರುತ್ತೆ. ಇದಕ್ಕೆ ಕಾರಣ ದರ್ಶನ್ ಮತ್ತು ಸುದೀಪ್ ಅಷ್ಟು ಒಳ್ಳೆಯ ಸ್ನೇಹಿತರಾಗಿ ಇದ್ದದ್ದು. ಕನ್ನಡದ ಈ ಇಬ್ಬರು ಸೂಪರ್‌ ಸ್ಟಾರ್‌ಗಳು ತಮ್ಮ ಸ್ನೇಹ ಮುರಿದು ಕೊಂಡು ವರ್ಷಗಳೇ ಕಳೆದು ಹೋಗಿವೆ. ಆದರೆ ಇವರಿಬ್ಬರನ್ನು ಬೇರೆ ಬೇರೆ ಆಗಿ ನೋಡಲು ಅವರ ಅಭಿಮಾನಿಗಳಿಗೆ ಇಷ್ಟ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.

  'ಈ ಸ್ನೇಹ ಯಾವಾಗಲು ಸ್ನೇಹವಾಗಿಯೆ ಉಳಿಯಲಿದೆ'- ನಟ ಸುದೀಪ್

  ಈಗ ಮತ್ತೆ ದರ್ಶನ್, ಸುದೀಪ್‌ ಸ್ನೇಹದ ವಿಚಾರ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ದರ್ಶನ್ ಜೊತೆಗಿನ ಕಿಚ್ಚನ ಸ್ನೇಹ ಪೂರ್ವಕ, ಪ್ರೀತಿ ಪೂರ್ವಕ ಮಾತು. ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಸುದೀಪ್, ದರ್ಶನ್ ಜೊತೆಗಿನ ತನ್ನ ಸ್ನೇಹದ ಕುರಿತು ಮಾತನಾಡಿದ್ದಾರೆ. 'ನಾವು ಸ್ನೇಹಿತರು ಎಂದಿಗೂ ಸ್ನೇಹಿತರೆ, ಸ್ನೇಹ ಎಂದಿಗೂ ಜೀವಂತ. ಕೇವಲ ಮಾತನಾಡುತ್ತಿಲ್ಲ, ಜೊತೆಯಲ್ಲಿ ಇಲ್ಲ ಎಂದಾಕ್ಷಣ ಒಬ್ಬರಿಗೆ ಒಬ್ಬರು ಇಲ್ಲ ಎಂದಲ್ಲ. ನಾವು ಯಾವತ್ತು ಒಬ್ಬರಿಗೆ ಒಬ್ಬರು ಕೇಡು ಬಯಸಿಲ್ಲ. ಕೇಡು ಬಯಸುವುದೂ ಇಲ್ಲ' ಎಂದಿದ್ದಾರೆ ಸುದೀಪ್. ಸುದೀಪ್‌ ಮಾತುನಿಂದ ಇವರ ನಡುವೆ ತೀರದ ದ್ವೇಷವಿದೆ ಎನ್ನುವ ಅನಿಸಿಕೆಯನ್ನು ಸುಳ್ಳು ಮಾಡಿದೆ. ಸುದೀಪ್ ದರ್ಶನ್‌ ಸ್ನೇಹದ ಬಗ್ಗೆ ಆಡಿರುವ ಮಾತುಗಳು ಮೆಚ್ಚುಗೆಗೆ ಪಾತ್ರವಾಗಿವೆ. ಸುದೀಪ್ ಅಭಿಮಾನಿಗಳು ಮಾತ್ರವಲ್ಲ ದರ್ಶನ್ ಅಭಿಮಾನಿಗಳು ಕೂಡ ಕಿಚ್ಚನ ಮಾತಿಗೆ ಫಿದಾ ಆಗಿದ್ದಾರೆ. ಇಬ್ಬರೂ ಆದಷ್ಟು ಬೇಗ ಒಂದಾಗಿ ಬಿಡಿ ಎಂದು ಅಭಿಯಾನಿಗಳು ಅಭಿಯಾನ ಶುರು ಮಾಡಿದ್ದಾರೆ.

  ಟ್ರೋಲ್ ಬಿಟ್ಟು, ದಚ್ಚು-ಕಿಚ್ಚನ ಅಭಿಮಾನಿಗಳಿಂದ ವಿಶೇಷ ಅಭಿಯಾನ!

  ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಿಗೆ ಇವರಿಬ್ಬರನ್ನು ಬೇರೆ ಬೇರೆಯಾಗಿ ನೋಡುವುದಕ್ಕಿಂತ, ಜೊತೆಯಾಗಿ ನೋಡುವುದೇ ಹೆಚ್ಚು ಖುಷಿ. ಈ ವಿಚಾರ ಈಗ ಮತ್ತೆ ಸಾಬೀತಾಗಿದೆ. ಇಬ್ಬರನ್ನು ಒಂದು ಮಾಡುವ ನಿಟ್ಟಿನಲ್ಲಿ ಸುದೀಪ್, ದರ್ಶನ್‌ ಅವರ ಅಭಿಮಾನಿಗಳು ಸಕಾರಾತ್ಮಕವಾದ ಅಭಿಯಾನ ಶುರು ಮಾಡಿದ್ದಾರೆ. ಸಾಮಾನ್ಯವಾಗಿ ತಮ್ಮ ನಟರ ವಿಚಾರ ಬಂದಾಗ ಅಭಿಮಾನಿಗಳು ಒಬ್ಬರ ವಿರುದ್ಧ ಒಬ್ಬರು ಟ್ರೋಲ್ ಮಾಡುವುದು, ಕಾಲು ಕೆರೆದು ಜಗಕ್ಕಿಳಿಯುವುದು ಆಗಾಗ ಕಂಡು ಬರುತ್ತಿತ್ತು. ಆದರೀಗ ಟ್ರೋಲ್‌ ವಿಚಾರವನ್ನು ಮತ್ತು ಮುನಿಸನ್ನು ಅಭಿಮಾನಿಗಳು ಪಕ್ಕಕ್ಕಿಟ್ಟಿದ್ದಾರೆ. ಇದು ಕೂಡ ಉತ್ತಮ ಬೆಳವಣಿಗೆ ಅಂತಲೇ ಹೇಳಬಹುದು. ದಚ್ಚು ಮತ್ತು ಕಿಚ್ಚನ ಅಭಿಮಾನಿಗಳು ಇಬ್ಬರನ್ನು ಒಂದು ಮಾಡುವ ಒಂದೇ ಆಶಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

  ದರ್ಶನ್ ಮತ್ತು ಸುದೀಪ್ ವಿಚಾರ ಬಂದಾಗಲೆಲ್ಲ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ವಿರುದ್ಧವಾಗಿ ಒಬ್ಬರು ಟ್ರೋಲ್ ಮಾಡುತ್ತಿರುತ್ತಾರೆ. ಈಗ ಅವರ ಯೋಚನಾ ಕ್ರಮ ಬದಲಾಗಿದೆ. ಸುದೀಪ್ ಮತ್ತು ದರ್ಶನ್ ಒಂದಾಗಲಿ ಎಂದು ಸಾಕಷ್ಟು ಜನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ಶುರು ಮಾಡಿಬಿಟ್ಟಿದ್ದಾರೆ. ಎಲ್ಲು ಕೂಡ ದರ್ಶನ್ ಅಭಿಮಾನಿಗಳು ಸುದೀಪ್ ಅಭಿಮಾನಿಗಳಿಗೆ ಅಥವಾ ಸುದೀಪ್ ಅಭಿಮಾನಿಗಳು ದರ್ಶನ್ ಅಭಿಮಾನಿಗಳಿಗೆ ಕಾಲೆಳೆಯುವ ಕೆಲಸವನ್ನು ಮಾಡುತ್ತಿಲ್ಲ. ಬದಲಿಗೆ ಅಣ್ಣ ನೀವು ಆದಷ್ಟು ಬೇಗ ಒಂದಾಗಿ ಎಂದು ಕೇಳಿ ಕೊಳ್ಳುತ್ತಿದ್ದಾರೆ. ನಿಮ್ಮಿಬ್ಬರನ್ನು ಬೇರೆಯಾಗಿ ನೋಡುವುದಕ್ಕಿಂತ, ಒಂದಾಗಿ ನೋಡುವುದೇ ನಮಗೆ ಖುಷಿಯ ವಿಚಾರ ಅನ್ನುವುದನ್ನು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

  Actor Sudeep And Darshan Fans Started New Campaign

  ದರ್ಶನ್, ಸುದೀಪ್ ಮುನಿಸಿಗೆ ಸಾವಿರ ಇರಬಹುದು. ಆದರೆ ಇಬ್ಬರೂ ಒಂದಾಗ ಬೇಕು ಅನ್ನುವ ಒಳ್ಳೆ ಆಶಯದ ಮುಂದೆ ಅವರ ಮುನಿಸು ಮರೆಯಾದರೆ ಅಷ್ಟೇ ಸಾಕು ಎನ್ನುತ್ತಿದೆ ಅಭಿಮಾನಿ ಬಳಗ. ಅಭಿಮಾನಿಗಳ ಜೊತೆಗೆ ಇಡೀ ಚಿತ್ರರಂಗವೂ ಇವರು ಒಂದಾಗುವುದನ್ನು ನೋಡಲು ಕಾಯುತ್ತಿದೆ. ಇಷ್ಟೆಲ್ಲಾ ನಡೀತಾ ಇದ್ದರೂ ಈ ಬಗ್ಗೆ ದರ್ಶನ್ ಸದ್ಯಕ್ಕೆ ಏನನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಮುಂದೊಂದು ದಿನ ತಮ್ಮನ್ನು ಪ್ರೀತಿಸುವವರಿಗಾಗಿ ಈ ಇಬ್ಬರು ಸ್ಟಾರ್ ನಟರು ಒಂದಾಗಿಯೇ ಆಗುತ್ತಾರೆ ಎನ್ನುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

  English summary
  Fans Started New Campaign For Darshan And Sudeep,
  Thursday, October 28, 2021, 13:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X