For Quick Alerts
  ALLOW NOTIFICATIONS  
  For Daily Alerts

  ಚುನಾವಣಾ ಪ್ರಚಾರದ ಬಗ್ಗೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

  By Pavithra
  |
  ಶ್ರೀರಾಮುಲು ಬಗ್ಗೆ ಸುದೀಪ್ ಬಿಚ್ಚಿಟ್ಟ ಸೀಕ್ರೆಟ್ | Filmibeat Kannada

  ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳಷ್ಟೇ ರಾಜಕೀಯ ಅಭ್ಯರ್ಥಿಗಳು ತಮ್ಮ ಸಂಪರ್ಕದಲ್ಲಿರುವ ಸ್ಟಾರ್ ಗಳನ್ನ ಕರೆಸಿ ತಮ್ಮ ಪರವಾಗಿ ಪ್ರಚಾರ ಮಾಡಿಸಲು ಮುಂದಾಗಿದ್ದಾರೆ. ಕೆಲ ಸ್ಟಾರ್ ಗಳು ಚುನಾವಣೆಗೂ ಮುಂಚೆಯೇ ಕೆಲ ಪಕ್ಷಗಳ ಪರವಾಗಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ.

  ಸುದೀಪ್ ಚುನಾವಣಾ ಪ್ರಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರು ಯಾರು ?ಸುದೀಪ್ ಚುನಾವಣಾ ಪ್ರಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರು ಯಾರು ?

  ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಸಿನಿಮಾ ಕಲಾವಿದರು ಕೂಡ ಸ್ಪರ್ಧೆಯಲ್ಲಿದ್ದಾರೆ. ಅವರರು ಕೂಡ ಬೀದಿಗಿಳಿದು ಮನೆ ಮನೆ ತಿರುಗಿ ಮತಯಾಚನೆ ಮಾಡುತ್ತಿದ್ದಾರೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಿರಿಯನ್ನ ಪಡೆದುಕೊಂಡಿರುವ ಕಲಾವಿದರು ಕಳೆದ ಮೂರು ದಿನಗಳಿಂದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

  ಸ್ಯಾಂಡಲ್ ವುಡ್ ನ ಹ್ಯಾಂಡ್ ಸಮ್ ಹೀರೋ ಕಿಚ್ಚ ಸುದೀಪ್ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡುತ್ತಾರೆ. ಶ್ರೀ ರಾಮುಲು ವಿರುದ್ದ ಪ್ರಚಾರ ಮಾಡುತ್ತಾರೆ. ಇಲ್ಲ ಸುದೀಪ್ ಪ್ರಚಾರ ಮಾಡುವುದು ಸುಳ್ಳು ಹೀಗೆ ಅಂತೆ ಕಂತೆ ಸುದ್ದಿ ಜೋರಾಗಿ ಹರಡಿತ್ತು. ಆದರೆ ಈ ಎಲ್ಲಾ ವಿಚಾರಕ್ಕೂ ಸುದೀಪ್ ಫುಲ್ ಸ್ಟಾಪ್ ಇಟ್ಟು ಪ್ರಚಾರ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾದರೆ ಕಿಚ್ಚ ಹೇಳಿದ್ದು ಏನು? ಮುಂದೆ ಓದಿ

  ಪ್ರಚಾರದ ಬಗ್ಗೆ ಕಿಚ್ಚ ಸ್ಪಷ್ಟನೆ

  ಪ್ರಚಾರದ ಬಗ್ಗೆ ಕಿಚ್ಚ ಸ್ಪಷ್ಟನೆ

  ಕಿಚ್ಚ ಸುದೀಪ್ ರಾಜಕೀಯ ಪ್ರಚಾರದ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾನು ರಾಜಕೀಯ ಪ್ರಚಾರದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡುವುದು ಸುಳ್ಳು. ಶ್ರೀ ರಾಮುಲು ಅವರಿಗೆ ಒಳ್ಳೆದಾಗಲಿ. ಮಾಧ್ಯಮದವರು ಸುದ್ದಿ ಮಾಡುವ ಮುನ್ನ ವಿಚಾರಣೆ ಮಾಡಿಕೊಂಡರೆ ಉತ್ತಮ ಎಂದಿದ್ದಾರೆ.

  ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಒಪ್ಪಿಗೆ ನೀಡಿಲ್ಲ

  ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಒಪ್ಪಿಗೆ ನೀಡಿಲ್ಲ

  ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡುತ್ತಾರೆ ಎನ್ನುವ ಸುದ್ದಿ ಬಗ್ಗೆ ಮಾಧ್ಯಮದವರ ಬಳಿ ಮಾತನಾಡಿರುವ ಕಿಚ್ಚ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಪ್ರಚಾರಕ್ಕೆ ಕರೆದಿರುವುದು ಸತ್ಯ. ಆದರೆ ನಾನಿನ್ನು ಕನ್ಫರ್ಮ್ ಮಾಡಿಲ್ಲ ಎಂದಿದ್ದಾರೆ.

  ಸ್ನೇಹಿತನಿಗಾಗಿ ಪ್ರಚಾರ

  ಸ್ನೇಹಿತನಿಗಾಗಿ ಪ್ರಚಾರ

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ತಮ್ಮ ಆತ್ಮೀಯ ಸ್ನೇಹಿತರಾದ ರಾಜು ಗೌಡರ ಪರ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಸುರಪುರದಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.

  ಯಾರ ಪರವಾಗಿ ಪ್ರಚಾರ

  ಯಾರ ಪರವಾಗಿ ಪ್ರಚಾರ

  ರಾಜು ಗೌಡ ಹಾಗೂ ಸಿದ್ದರಾಮಯ್ಯ ಇವರಿಬ್ಬರ ನಂತರ ಸುದೀಪ್ ಇನ್ನು ಯಾವ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಾರೆ ಎನ್ನುವುದು ಗುಟ್ಟಾಗಿಯೇ ಉಳಿದಿದೆ. ಕುಮಾರಸ್ವಾಮಿ ಅವರ ಪರವಾಗಿಯೂ ಮತಯಾಚನೆ ಮಾಡುವ ಸಾಧ್ಯತೆಗಳಿವೆ ಎನ್ನುವ ಮಾತು ಕೇಳಿ ಬರುತ್ತಿದೆ.

  English summary
  Kannada actor Sudeep has clarified his election campaign.I am not campaigning against Sriramulu. Today Sudeep is campaigning in Surpura.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X