»   » ಒನ್ಇಂಡಿಯಾ ಜೊತೆ ಮನಬಿಚ್ಚಿ ಮಾತನಾಡಿದ ಕಿಚ್ಚ ಸುದೀಪ್

ಒನ್ಇಂಡಿಯಾ ಜೊತೆ ಮನಬಿಚ್ಚಿ ಮಾತನಾಡಿದ ಕಿಚ್ಚ ಸುದೀಪ್

Posted By:
Subscribe to Filmibeat Kannada
<ul id="pagination-digg"><li class="next"><a href="/news/sudeep-working-with-ss-rajamouli-film-again-073251.html">Next »</a></li></ul>

ನಟ 'ಕಿಚ್ಚ' ಸುದೀಪ್ ಜೊತೆ ಮಾತುಕತೆ ಎಂದರೆ ನೇರಾನೇರವಾಗಿರುತ್ತದೆ. ಅವರು ಯಾವುದನ್ನೂ ಸುತ್ತಿ ಬಳಸಿ ಹೇಳುವುದಿಲ್ಲ. ಹೊಗಳಿಕೆ, ತೆಗಳಿಕೆಗೆ ಹಿಗ್ಗಲ್ಲ, ಕುಗ್ಗಲ್ಲ. ಅವರ ಮಾತು ಕಡ್ಡಿ ತುಂಡು ಮಾಡಿದಂತೆಯೇ ಇರುತ್ತದೆ. 'ಬಚ್ಚನ್' ಚಿತ್ರಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸುದೀಪ್ ಅವರೇ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆಯಲ್ಲಾ?
ಪ್ರತಿ ಹೀರೋ ಒಂದಲ್ಲಾ ಒಂದು ದಿನ ಎಲ್ಲರಿಗೂ ಬೋರು ಆಗುತ್ತಾನೆ. ಸಕ್ಸಸ್ ಎಂಬುದು ಜೀವನದ ಒಂದು ಭಾಗ. ಎಲ್ಲರೂ ಸಕ್ಸಸ್ ಸಿಗಬೇಕು ಎಂದೇ ಕೆಲಸ ಮಾಡ್ತಾರೆ. ಸದ್ಯಕ್ಕೆ ಈ ಗೆಲುವನ್ನು ಆಸ್ವಾದಿಸುತ್ತಿದ್ದೇನೆ. ಮುಂದೇನಾಗುತ್ತದೋ ಗೊತ್ತಿಲ್ಲ. ಗೆಲುವು ಎನ್ನುವುದನ್ನು ಸದಾ ಜೊತೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲವಲ್ಲ.

Kichcha Sudeep Interview

ಹೌದು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಆದರೆ ಇದಕ್ಕಾಗಿ ಬಹಳಷ್ಟು ಬೆವರರಿಸಿದ್ದೇವೆ. ಸಾಕಷ್ಟು ಅಡೆತಡೆಗಳನ್ನು ದಾಟಿ ಬಂದಿದ್ದೇವೆ. ಸಿಸಿಎಲ್ ತಗೊಳ್ಳಿ. ಸಾಕಷ್ಟು ಶ್ರಮಿಸಿದ್ದೇವೆ. ತಯಾರಿ ಮಾಡಿಕೊಂಡೆವು. ಅಧ್ಯಯನ ಮಾಡಿದೆವು. ಟೈಟಲ್ ಹೊಡೆಯಲು ಎರಡು ವರ್ಷ ಪ್ರಯತ್ನಿಸಿ ವಿಫಲರಾದೆವು. ಎರಡು ಸಲ ಫೈನಲ್ ತಲುಪಿ ಬರಿಗೈಲಿ ಹಿಂತಿರುಗಿದ್ದೇವೆ.

ಆದರೆ ಲಕ್ ಇರಲಿಲ್ಲ. ಮೂರನೇ ಬಾರಿ ಲಕ್ ಗೆ ಚಾಲೆಂಜ್ ಹಾಕಿದೆ. ಈ ಬಾರಿ ಗೆಲ್ಲಲೇಬೇಕು ಎಂದುಕೊಂಡೆವು. ಮೂರನೇ ವರ್ಷ ಕಪ್ ನಮ್ಮ ಕೈವಶವಾಯಿತು. ಕೇವಲ ಅದೃಷ್ಟದಿಂದ ಈ ಮ್ಯಾಚನ್ನು ಗೆಲ್ಲಲಿಲ್ಲ. ಸಾಕಷ್ಟು ಬೆವರು ಹರಿಸಿದೆವೆವು. ಪ್ಲಾನ್ ಮಾಡಿದೆವು. ನಮ್ಮನ್ನು ವಿಶ್ವಾಸದ್ರೋಹಿಗಳಂತೆ ಕಂಡರು. ಆದರು ನಾವು ವಿಚಲಿತರಾಗಿರಲಿಲ್ಲ.

ಬಹಳಷ್ಟು ಜನ ನಮ್ಮೊಂದಿಗೆ ಆಡಲಿಲ್ಲ. ಕೆಲವು ಅಹಿತಕರ ಬೆಳವಣಿಗೆಗಳು ನಡೆದವು. ಕೆಲವರು ಟೀಂನಲ್ಲಿ ಆಡಲಿಲ್ಲ ಎಂಬ ಮಾತ್ರಕ್ಕೆ ಕನ್ನಡ ಚಿತ್ರೋದ್ಯಮವೇ ಬರಲಿಲ್ಲ ಎಂದಲ್ಲ. ಕೆಲವರನ್ನು ಮನೆಗೂ ಹೋಗಿ ಕರೆದೆ. ಆದರೆ ನನಗೂ ಆತ್ಮಗೌರವ ಅನ್ನುವುದಿದೆಯಲ್ಲಾ. ಓವರ್ ಆಲ್ ಗೆಲುವೇ ಮುಖ್ಯ.


ಬಚ್ಚನ್ ಟೈಟಲ್ ಸೆಲೆಕ್ಟ್ ಮಾಡಿದ್ದು ಯಾರು?
ಇದನ್ನು ಮಾಡಿದ್ದು ನಮ್ಮ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಅವರು. ಕತೆ, ಚಿತ್ರಕಥೆ ಎಲ್ಲವೂ ಮುಗಿದಿತ್ತು. ಕಡೆಗೆ ಶೀರ್ಷಿಕೆಯನ್ನು ಸೂಚಿಸಿದ್ದೇ ಅವರು. ನಾವೆಲ್ಲಾ ಕೂತು ಸ್ವಲ್ಪ ಯೋಚಿಸಿದೆವು. ಕಡೆಗೆ ಕನ್ವಿಸ್ ಆದೆವು. ಕಡೆಗೆ 'ಬಚ್ಚನ್' ಶೀರ್ಷಿಕೆಯನ್ನೇ ಅಂತಿಮ ಮಾಡಿದೆವು.

ಬಚ್ಚನ್ ಚಿತ್ರ ಇತರೆ ಭಾಷೆಗಳಿಗೆ ರೀಮೇಕ್ ಆಗುತ್ತಿದೆಯೇ?
ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಆಗುತ್ತಿದೆ. ಹಿಂದಿ ರೀಮೇಕ್ ರೈಟ್ಸ್ ಬಗ್ಗೆಯೂ ಕೇಳುತ್ತಿದ್ದಾರೆ.

ಬಚ್ಚನ್ ಡಬ್ಬಿಂಗ್ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ?
ನೂರು ಕೋಟಿ! (ಅಚ್ಚರಿ ಮಿಶ್ರಿತ ನಗು). ನಗ್ತೀರಾ ಅಂದ್ರೆ ನಿಮಗೆ ಗೊತ್ತಿರುತ್ತದೆ. (ಎರಡೂವರೆ ಕೋಟಿ ಇರಬಹುದೇ). ಹೌದು ಹೆಚ್ಚೂ ಕಡಿಮೆ ಅಷ್ಟೇ. ಸುಮಾರು ನಾಲ್ಕುವರೆ ಕೋಟಿ.

ಬಿಗ್ ಬಾಸ್ ತೆಲುಗಿನಲ್ಲಿ ಮಾಡಲು ಅವಕಾಶ ಬಂದರೆ ಮಾಡ್ತೀರಾ?
ಕನ್ನಡದಲ್ಲಿ ಮಾತನಾಡುವಷ್ಟು ಸುಲಭವಾಗಿ ತೆಲುಗಿನಲ್ಲಿ ಮಾತನಾಡಲು ನನಗೆ ಸಾಧ್ಯವಿಲ್ಲ. ಇಲ್ಲಿ ಸಹಜವಾಗಿ ಮಾತನಾಡುತ್ತೇನೆ. ಯಾವುದೇ ಸ್ಕ್ರಿಪ್ಟ್ ಬೇಕಾಗಿಲ್ಲ. ವೇದಿಕೆ ಮೇಲೆ ಆ ಕ್ಷಣಕ್ಕೆ ನನಗನ್ನಿಸಿದ್ದನ್ನು ಸಹಜವಾಗಿ ಮಾತನಾಡುತ್ತೇನೆ. ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಕಾರ್ಯಕ್ರಮ ನಿರ್ವಹಿಸುವುದು ಕಷ್ಟ.

<ul id="pagination-digg"><li class="next"><a href="/news/sudeep-working-with-ss-rajamouli-film-again-073251.html">Next »</a></li></ul>
English summary
Kiccha Sudeep is on cloud nine with his latest film Bachchan getting positive response from various quarters. The superstar, visited Oneindia and talked about the film, his experience, CCL and more. Here are the excerpts.
Please Wait while comments are loading...