»   » 'ಹಾಪ್ ಕಾಮ್ಸ್' ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

'ಹಾಪ್ ಕಾಮ್ಸ್' ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

Posted By:
Subscribe to Filmibeat Kannada

ಜನರ ಕಾಳಜಿಯ ಕುರಿತಾದ ಸರ್ಕಾರದ ಅನೇಕ ಯೋಜನೆಗಳಿಗೆ ನಮ್ಮ ಚಿತ್ರರಂಗದ ತಾರೆಯರು ಪ್ರಚಾರ ರಾಯಭಾರಿಗಳಾಗಿ ಕಾಣಿಸಿಕೊಳ್ಳೋದು ಸರ್ವೆ ಸಾಮಾನ್ಯ ತಾನೇ.

ನಂದಿನಿ ಕೆ.ಎಂ.ಎಫ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಗಿಣಿ ದ್ವಿವೇದಿ ಮತ್ತು ನಟಿ ರಚಿತಾ ರಾಮ್ ಅವರು ರಾಯಭಾರಿಗಳಾಗಿ ಕಾಣಿಸಿಕೊಂಡರೆ, ಎಲ್ ಇಡಿ ಬಲ್ಬ್ ಗೆ ಪವರ್ ಸ್ಟಾರ್ ಪುನೀತ್ ಮತ್ತು ಲಕ್ಕಿ ಸ್ಟಾರ್ ರಮ್ಯಾ ಅವರು ರಾಯಭಾರಿಗಳಾಗಿದ್ದಾರೆ.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ]

ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು. ಹೌದು ಸುದೀಪ್ ಅವರು ಹಾಪ್ ಕಾಮ್ಸ್ ಗೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿದ್ದಾರೆ.

'ರೈತ ದೇಶದ ಬೆನ್ನೆಲುಬು, ಅಂತಹ ರೈತರಿಗೆ ಬೆನ್ನೆಲುಬಾಗಿರುವ ಹಾಪ್ ಕಾಮ್ಸ್ ಸಂಸ್ಥೆಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.[ಶಿವಣ್ಣ-ಸುದೀಪ್ 'ಕಲಿ' ಚಿತ್ರದ ಬಗ್ಗೆ ಹೊಸ ಗಾಸಿಪ್!]

ಇನ್ನು ಕಿಚ್ಚ ಸುದೀಪ್ ಅವರು ಇಲ್ಲಿಯವರೆಗೆ ಯಾವ ಯಾವ ಸಂಸ್ಥೆಗಳಿಗೆ ರಾಯಬಾರಿಯಾಗಿ ಆಗಿದ್ದಾರೆ ಎಂಬ ಎಲ್ಲಾ ಮಾಹಿತಿಗಳ ಡೀಟೈಲ್ಸ್ ನಾವು ಕೊಡ್ತೀವಿ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

ಹಾಪ್ ಕಾಮ್ಸ್ ಬಗ್ಗೆ ಕಿಚ್ಚನ ಉವಾಚ

'ಹಾಪ್ ಕಾಮ್ಸ್ ಸಂಸ್ಥೆಯ ಮುಂದಿನ ಎಲ್ಲಾ ಯೋಜನೆಗಳಿಗೂ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಮ್ಮ ರೈತರಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ನಾನು ಸದಾ ಸಿದ್ಧ. ತುಂಬು ಪ್ರೀತಿ ಮತ್ತು ಅಭಿಮಾನದಿಂದ ಹಾಪ್ ಕಾಮ್ಸ್ ಸಂಸ್ಥೆಗೆ ಬೆಂಬಲ ಸೂಚಿಸುತ್ತೇನೆ' ಎಂದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ.

ಇಂಟೆಕ್ಸ್ ಮೊಬೈಲ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂಟೆಕ್ಸ್ ಮೊಬೈಲ್ ಗೂ ರಾಯಭಾರಿಯಾಗಿದ್ದರು. ಈ ಜಾಹೀರಾತಿನಲ್ಲಿ ಸುದೀಪ್ ಅವರು ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದರು.

ಓ.ಎಲ್.ಎಕ್ಸ್ (OLX)

ಕಿಚ್ಚ ಸುದೀಪ್ ಅವರು OLX ಜಾಹೀರಾತಿಗೂ ರಾಯಭಾರಿಯಾಗಿದ್ದು, ಜಾಹೀರಾತಿನಲ್ಲಿ ಮೊದಲು ಕಾಮಿಡಿ ನಟ ಸಾಧುಕೋಕಿಲ ಅವರ ಜೊತೆ ಕಾಣಿಸಿಕೊಂಡಿದ್ದು, ತದನಂತರ ಹಿರಿಯ ನಟ ಅನಂತ್ ನಾಗ್ ಅವರ ಜೊತೆ ಮಿಂಚಿದ್ದರು.[ಕಿಚ್ಚ ಸುದೀಪ್ ಜೊತೆ ಅನಂತ್ ನಾಗ್, 'ಮಾರಿಬಿಡಿ' ಅಂದ್ರು!!]

ಪ್ಯಾರಾಗಾನ್ ಚಪ್ಪಲಿ

ನಟ ಸುದೀಪ್ ಅವರು ಪ್ಯಾರಾಗಾನ್ ಆಫೀಸ್ ಚಪ್ಪಲ್ಸ್, ಟಫ್ ಅಂಡ್ ಸ್ಟೈಲಿಷ್ ಎಂದು 'ಪ್ಯಾರಾಗಾನ್' ಚಪ್ಪಲಿಗಳ ಜಾಹೀರಾತಿನಲ್ಲಿ ರಾಯಾಭಾರಿಯಾಗಿ ಮಿಂಚಿದ್ದರು.

ಜೋಯ್ ಅಲುಕ್ಕಾಸ್

ಸುದೀಪ್ ಅವರು ಜೋಯ್ ಅಲುಕ್ಕಾಸ್ ನ ಒಡವೆಗಳಿಗೆ ಪ್ರಚಾರ ನೀಡಲು ಕರ್ನಾಟಕದಲ್ಲಿ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದರು.

ರಾಮ್ ರಾಜ್

ರಾಮ್ ರಾಜ್ ಬನಿಯನ್ಸ್, ಧೋತಿ, ಶರ್ಟ್, ಪಂಚೆಗಳ ಜಾಹೀರಾತಿಗೆ ನಟ ಸುದೀಪ್ ಅವರು ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದರು. ರಾಮ್ ರಾಜ್ ಗೆ ಸೆಲ್ಯೂಟ್ ಅಂದಿದ್ದರು ನಮ್ಮ ಕಿಚ್ಚ.(ಚಿತ್ರಕೃಪೆ: ಫೇಸ್ ಬುಕ್)

ನಾಕ್ ಔಟ್

ನಟ ಸುದೀಪ್ ಅವರು ಸ್ಟ್ರಾಂಗ್ ಸೋಡಾ ನಾಕ್ ಔಟ್ ಜಾಹೀರಾತಿನ ರಾಯಭಾರಿಯಾಗಿ ಕೂಡ ಕಾಣಿಸಿಕೊಂಡಿದ್ದರು. 'ಎದ್ದೇಳಿಸು ನಿನ್ನೊಳಗಿನ ಹೀರೋ, ತೋರಿಸು ಅಸಲಿ ಧಮ್' ಎಂಬ ಟ್ಯಾಗ್ ಲೈನ್ ನಾಕ್ ಔಟ್ ನಲ್ಲಿದೆ.

English summary
Kannada Actor Kichcha Sudeep signed as the new brand ambassador for 'HOPCOMS'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada