For Quick Alerts
  ALLOW NOTIFICATIONS  
  For Daily Alerts

  ಹಿರಿಯೂರು ರೈತನ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

  By ಚಿತ್ರದುರ್ಗ ಪ್ರತಿನಿಧಿ
  |

  ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಅವರು ಬೆಳೆದಿದ್ದ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ.

  ಮಾರಾಟವಾಗದ ಈರುಳ್ಳಿಗೆ ಒಳ್ಳೆಯ ಬೆಲೆ ಕೊಟ್ಟು ಖರೀದಿಸಿದ Upendra | Filmibeat Kannada

  ಲಾಕ್ ಡೌನ್ ಸಮಯದಲ್ಲಿ ಜನರ ಸಹಾಯಕ್ಕೆ ನಿಂತಿರುವ ಉಪೇಂದ್ರ, ರೈತರಿಂದ ನೇರವಾಗಿ ಬೆಳೆ ಖರೀದಿಸಿ ಅದನ್ನು ಅಗತ್ಯವಿರುವ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಬೆಳೆ ಬೆಳೆದು ಮಾರಲು ಆಗದೆ ಕಷ್ಟದಲ್ಲಿರುವ ರೈತರಿಗೂ ಆ ಮೂಲಕ ನೆರವಾಗುತ್ತಿದ್ದಾರೆ.

  ರೈತರ ಬೆಳೆದ ಬೆಳೆಯನ್ನು ತಮಗೆ ಹೇಗೆ ಮಾರಬೇಕು ಎಂಬ ಬಗ್ಗೆ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ವಿವರವಾದ ಮಾಹಿತಿ ಹಂಚಿಕೊಂಡಿದ್ದು ಈಗಾಗಲೇ ಹಲವು ಜಿಲ್ಲೆಗಳ ರೈತರು ತಮ್ಮ ಬೆಳೆಯನ್ನು ಉಪೇಂದ್ರ ಅವರಿಗೆ ಮಾರಿದ್ದಾರೆ.

  ಉಪೇಂದ್ರ ಪ್ರಕಟಿಸಿದ್ದ ಮಾಹಿತಿಯನ್ನು ಗಮನಿಸಿದ ಹಿರಿಯೂರು ತಾಲ್ಲೂಕು ಪಟ್ರೇನಹಳ್ಳಿ ಗ್ರಾಮದ ರೈತ ಮಹೇಶ್, ಉಪೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ಪಡೆದು ತಾವು ಬೆಳೆದ ಈರುಳ್ಳಿಯನ್ನು ಕೊಂಡೊಯ್ದು ಮಾರಾಟ ಮಾಡಿ ಬಂದಿದ್ದಾರೆ.

  ರೈತ ಮಹೇಶ್ ಒಟ್ಟು 60 ಚೀಲ, 3000 ಕೆಜಿ ಈರುಳ್ಳಿಯನ್ನು ಉಪೇಂದ್ರ ಅವರಿಗೆ ಮಾರಿದ್ದಾರೆ ಸಾಗಾಟ ವೆಚ್ಚ ಸೇರಿಸಿ 37 ಸಾವಿರ ಹಣ ಕೊಟ್ಟು ಈರುಳ್ಳಿ ಖರೀದಿಸಿರುವ ಉಪೇಂದ್ರ ಸಂಕಷ್ಟದಲ್ಲಿದ್ದ ರೈತನಿಗೆ ನೆರವಾಗಿದ್ದಾರೆ.

  ಈ ಬಗ್ಗೆ ಫಿಲ್ಮೀಬೀಟ್‌ ಜೊತೆ ಮಾತನಾಡಿರುವ ರೈತ ಮಹೇಶ್, 'ನಾನು ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. 70 ಚೀಲ ಈರುಳ್ಳಿ ದೊರೆಯಿತು. ಅದರಲ್ಲಿ 10 ಚೀಲ ಕೊಳೆತು ಹೋಗಿತ್ತು. ಬೆಳೆದ ಈರುಳ್ಳಿ ಮಾರಾಟ ಮಾಡಲು ಸೂಕ್ತ ವೇದಿಕೆ ಮತ್ತು ಬೆಲೆ ಸಿಗುತ್ತಿಲ್ಲ ಎಂದು ಹಾಗೆಯೇ ಶೇಖರಿಸಿದ್ದೆವು. ಉಪೇಂದ್ರ ಅವರು ಹಾಕಿದ್ದ ಫೇಸ್‌ಬುಕ್‌ ಪೋಸ್ಟ್ ನೋಡಿ ಕರೆ ಮಾಡಿದೆ. ಆಗ ಅವರು ತಂದುಕೊಡಿ ಎಂದರು. ಅಂತೆಯೇ ಮಾಡಿದೆ. ಉಪೇಂದ್ರ ಅವರು ನಮ್ಮ ಬೆಳೆಗೆ ಕೊಟ್ಟಿರುವ ಬೆಲೆಯಿಂದ ತೃಪ್ತಿಯಾಗಿದೆ. ತಡರಾತ್ರಿ ಈರುಳ್ಳಿ ತೆಗೆದುಕೊಂಡು ಹೋದೆವು. ಅದನ್ನು ಅವರು ಖರೀದಿಸಿ ಕಾರ್ಮಿಕರಿಗೆ ಹಂಚುತ್ತಿರುವುದು ತುಂಬಾ ಖುಷಿಯಾಯಿತು. ಇಂತಹ ಸಂದರ್ಭದಲ್ಲಿ ಅವರು ಮಾಡುವ ಸಾಮಾಜಿಕ ಕಾರ್ಯಕ್ಕೆ ನಮಗೆ ಲಾಭ ಬೇಡ ಅನ್ನಿಸಿತು. ರೈತರಿಗೆ ಅನುಕೂಲ ಆಗಲಿ ಎಂದು ಮುಂದೆ ಬಂದಿರುವ ಸಂತಸ. ಮಾರುಕಟ್ಟೆಯಲ್ಲಿ ಈ ಬೆಲೆ ಸಿಗುತ್ತಿರಲಿಲ್ಲ. ಉಪೇಂದ್ರ ಸರ್ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ' ಎಂದಿದ್ದಾರೆ ಮಹೇಶ್.

  ಉಪೇಂದ್ರ ಅವರು ಚಿಕ್ಕಬಳ್ಳಾಪುರ ರೈತನಿಗೆ ಟೊಮೆಟೊ, ಮತ್ತೊಬ್ಬರಿಂದ ನೀರಿನ ಬಾಟಲ್, ಮತ್ತೊಬ್ಬ ದಾನಿಯಿಂದ ಅಕ್ಕಿ ಇತರೆ ವಸ್ತುಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ವಿತರಣೆ ಮಾಡುತ್ತಿದ್ದಾರೆ. ಉಪೇಂದ್ರ ಅವರ ಸಾಮಾಜಿಕ ಕಳಕಳಿಯನ್ನು ಹಲವರು ಪ್ರಶಂಸಿಸಿದ್ದಾರೆ.

  English summary
  Actor Upendra purchased onion from Chitradurga's Patrenahalli village farmer Mahesh for 37,000. Upendra will distribute that onions to needy people for free.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X