For Quick Alerts
  ALLOW NOTIFICATIONS  
  For Daily Alerts

  ಅನ್ನ ತಿನ್ನುವುದನ್ನು ಬಿಟ್ಟ ಜನಪ್ರಿಯ ನಟ ವಿಕ್ರಮ್

  By ಶಂಕರ್, ಚೆನ್ನೈ
  |

  ಈ ಚಿತ್ರ ನೋಡಿದರೆ ಅರ್ಥವಾಗುತ್ತದೆ. ಹೇಗಿದ್ದ ವಿಕ್ರಮ್ ಹೇಗಾಗಿದ್ದಾರಪ್ಪಾ ಎಂದು ಅನ್ನಿಸುತ್ತದೆ. ಇವರೇನು ಹೊಟ್ಟೆಗೆ ಅನ್ನ ತಿನ್ನುತ್ತಾರೋ ಇಲ್ಲವೋ ಎಂಬ ಅನುಮಾನವೂ ಬರುತ್ತದೆ. ಈಗ ತಮಿಳಿನ ಯಶಸ್ವಿ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ 'ಐ' ಚಿತ್ರದಲ್ಲಿ ವಿಕ್ರಮ್ ಅಭಿನಯಿಸುತ್ತಿದ್ದಾರೆ.

  ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವನ್ನೂ ತೆಗೆದುಕೊಂಡಿದ್ದಾರೆ ವಿಕ್ರಮ್. 'ಐ' ಚಿತ್ರಕ್ಕಾಗಿ ತಮ್ಮನ್ನು ತಾವು ಸಕಲ ರೀತಿಯಲ್ಲೂ ಹೊಂದುಕೊಂಡಿದ್ದಾರೆ. ಕಥೆಗೆ ತಕ್ಕಂತೆ ತಮ್ಮ ದೇಹದ ಆಕೃತಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಮೂರು ವಿಭಿನ್ನ ಕೋನಗಳಲ್ಲಿ ವಿಕ್ರಮ್ ಕಾಣಿಸಲಿದ್ದಾರೆ ಎನ್ನುತ್ತವೆ ಕೋಲಿವುಡ್ ಮೂಲಗಳು.

  ಐ ಚಿತ್ರದ ಎರಡು ಪಾತ್ರಗಳಲ್ಲಿ ವಿಕ್ರಮ್ ತುಂಬ ತೆಳ್ಳಗೆ ಕಾಣಿಸಬೇಕೆಂದು ನಿರ್ದೇಶಕ ಶಂಕರ್ ಹೇಳಿದರಂತೆ. ಈಗಾಗಲೆ ಒಂದು ಪಾತ್ರಕ್ಕೆ ಸಂಬಂಧಿಸಿದ ಫೋಟೋ ಬಿಡುಗಡೆಯಾಗಿದೆ. ಆ ಫೋಟೋದಲ್ಲಿ ಇನ್ನೂ ಹದಿನಾರರ ಯುವಕನಂತೆ ವಿಕ್ರಮ್ ಕಾಣಿಸಿದ್ದಾರೆ.

  ಚಿತ್ರದ ಮೊದಲರ್ಧದಲ್ಲಿ ಸಾಮಾನ್ಯವಾಗಿ ಕಾಣಿಸುವ ವಿಕ್ರಮ್ ದ್ವಿತೀಯಾರ್ಧದಲ್ಲಿನ ಪಾತ್ರಕ್ಕಾಗಿ ಈ ರೀತಿ ತಯಾರಾಗಿದ್ದಾರೆ. ಸುಮಾರು 84 ಕೆಜಿ ಇದ್ದ ವಿಕ್ರಮ್ ತಮ್ಮ ಪಾತ್ರಕ್ಕಾಗಿ 14 ಕೆ.ಜಿಗಳಷ್ಟು ತೂಕವನ್ನು ಇಳಿಸಿಕೊಂಡಿದ್ದಾರೆ.

  ಇಷ್ಟೆಲ್ಲಾ ತೂಕ ಇಳಿಸಿಕೊಳ್ಳಬೇಕೆಂದರೆ ವಿಕ್ರಮ್ ಏನು ಮಾಡಿದರು? ಅನ್ನ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರಂತೆ. ಸೊಪ್ಪು, ಹಣ್ಣಿನ ರಸವನ್ನಷ್ಟೇ ಸೇವಿಸುತ್ತಿದ್ದರಂತೆ. ಚಿತ್ರದಲ್ಲಿ ಅವರು ರಾಜ್ಯಮಟ್ಟದ ಬಾಕ್ಸರ್ ಪಾತ್ರ ಎನ್ನಲಾಗಿದೆ.

  ಸ್ಟೇಟ್ ಲೆವೆಲ್ ಕ್ರೀಡಾಪಟುವೊಬ್ಬ ಹೇಗೆ ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆಲ್ಲುತ್ತಾನೆ ಎಂಬುದೇ 'ಐ' ಚಿತ್ರದ ಕಥೆ. ಆಸ್ಕರ್ ರವಿಚಂದ್ರನ್ ಸುಮಾರು ರು.145 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ, ಪಿಸಿ ಶ್ರೀರಾಮ್ ಛಾಯಾಗ್ರಹಣ ಇದೆ.

  ಸಾಮಾನ್ಯವಾಗಿ ಶಂಕರ್ ನಿರ್ದೇಶನದ ಚಿತ್ರಗಳೆಂದರೆ ಭಾರಿ ಬಜೆಟ್, ದೇಶಪ್ರೇಮ ಸಾರುವಂತಹ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿಯೂ ಅಂತಹದ್ದೇ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಅಮಿ ಜಾಕ್ಸನ್ ಚಿತ್ರದ ನಾಯಕಿ.

  English summary
  Shocking new avatar of the versatile hero Vikram for his multi-lingual project 'Ai', which is currently under production. Earlier, director Shankar has informed that the film's making is taking more than a year as Vikram's look is taking time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X