»   » 'ಕ್ರ್ಯಾಕ್' ನಂತರ 'ಮರಿ ಟೈಗರ್'ಗೆ ಅದೃಷ್ಟ ಖುಲಾಯಿಸಿತು.!

'ಕ್ರ್ಯಾಕ್' ನಂತರ 'ಮರಿ ಟೈಗರ್'ಗೆ ಅದೃಷ್ಟ ಖುಲಾಯಿಸಿತು.!

Posted By:
Subscribe to Filmibeat Kannada

ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ಮಧ್ಯೆ ವಿನೋದ್ ಪ್ರಭಾಕರ್ ಗೆ ಅದೃಷ್ಟ ಖುಲಾಯಿಸಿದ್ದು, ಮತ್ತೆರಡು ಹೊಸ ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ. ಈ ಬಾರಿ ಸ್ಟಾರ್ ನಿರ್ದೇಶಕರ ಜೊತೆ ವಿನೋದ್ ಕೆಲಸ ಮಾಡಲಿದ್ದಾರೆ ಎನ್ನುವುದು ವಿಶೇಷ.

ಹಾಗಿದ್ರೆ, ಮರಿಟೈಗರ್ ಅಭಿನಯಿಸಲಿರುವ ಆ ಎರಡು ಚಿತ್ರಗಳು ಯಾವುದು? ಯಾರು ಡೈರೆಕ್ಟ್ ಮಾಡಲಿದ್ದಾರೆ? ಮುಂದೆ ಓದಿ...

'ಕ್ರ್ಯಾಕ್' ನಂತರ 'ರಗಡ್'

'ಕ್ರ್ಯಾಕ್' ಚಿತ್ರದ ನಂತರ 'ರಗಡ್' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅಭಿನಯಿಸುತ್ತಿದ್ದಾರೆ. ಇದೊಂದು ಆಕ್ಷನ್ ಕಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪಕ್ಕಾ ಎಂಟರ್ ಟೈನ್ ಮೆಂಟ್ ಸಿನಿಮಾ ಅಂತೆ.

ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

'ರಗಡ್'ಗೆ ಡೈರೆಕ್ಟರ್ ಯಾರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಗೌಡ 'ರಗಡ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಆಪ್ತಮಿತ್ರನ ಸಿನಿಮಾ ನೋಡಿ ವಿಡಿಯೋ ಕಳುಹಿಸಿದ 'ಡಿ-ಬಾಸ್'.! ಏನಂದ್ರು.?

ಓಂ ಪ್ರಕಾಶ್ ರಾವ್ ಚಿತ್ರದಲ್ಲಿ 'ಟೈಗರ್'

'ರಗಡ್' ಚಿತ್ರದ ಜೊತೆ ಮತ್ತೊಂದು ಚಿತ್ರವನ್ನ ಒಪ್ಪಿಕೊಂಡಿದ್ದು, ಈ ಚಿತ್ರವನ್ನ ನಿರ್ದೇಶಕ 'ಓಂ ಪ್ರಕಾಶ್ ರಾವ್' ನಿರ್ದೇಶನ ಮಾಡುತ್ತಿದ್ದಾರೆ.

ಸೈನಿಕನ ಪಾತ್ರದಲ್ಲಿ ವಿನೋದ್

ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಲಿರುವ ಚಿತ್ರಕ್ಕೆ '786' ಎಂದು ಟೈಟಲ್ ಇಟ್ಟಿದ್ದು, 'ಹಿಂದೂಸ್ಥಾನ್ ಮೇರಾ ಜಾನ್' ಎಂಬ ಅಡಿಬರಹ ಇರಿಸಲಾಗಿದೆ. ಇದೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರುವ ಚಿತ್ರವಾಗಿದ್ದು, ಆ ಚಿತ್ರದಲ್ಲಿ ವಿನೋದ್ ಪ್ರಭಾಕರ್, ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
Actor Vinod Prabhakar's has silently signed a new film which is tentatively titled as 'Rugged'. Apart from that, Vinod will be acting in '786 - Hindustan Meri Jaan' to be directed by Omprakash Rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada