TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕಿಸ್ ಕೊಡೋಕೆ ಹುಡುಗ ರೆಡಿ, ಆದ್ರೆ ಹುಡುಗಿನೇ ಸಿಕ್ಕಿಲ್ಲಾ.!
ದರ್ಶನ್ ಅವರ ಜೊತೆ 'Mr.ಐರಾವತ' ಮಾಡಿದ ನಂತರ ನಿರ್ದೇಶಕ ಎ.ಪಿ.ಅರ್ಜುನ್ ಅವರು ಮತ್ತೆ ಹೊಸ ಚಿತ್ರದೊಂದಿಗೆ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಯಾವಾಗಲೂ ತಮ್ಮ ಸಿನಿಮಾಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ನಿರ್ದೇಶಕ ಎ.ಪಿ.ಅರ್ಜುನ್ ಈಗ ತಮ್ಮ ನಿರ್ದೇಶನದ ಐದನೇ ಚಿತ್ರ 'ಕಿಸ್'ಗೂ ಹೊಸ ನಾಯಕನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ತಮ್ಮ ಚಿತ್ರಕ್ಕೆ ಹೊಸ ಹುಡುಗರನ್ನು ಹುಡುಕುತ್ತಿರುವುದಾಗಿ ಅರ್ಜುನ್ ಅವರು ಘೋಷಿಸಿದಾಗ ಅವರ ಮೇಲ್ ಬಾಕ್ಸ್ ಗೆ ಬಂದು ಬಿದ್ದಿದ್ದು ಬರೋಬ್ಬರಿ ನಾಲ್ಕು ಸಾವಿರದಷ್ಟು ಫೋಟೋಗಳು. ಅದರಲ್ಲಿ ನೂರಾ ಇಪ್ಪತ್ತು ಜನರನ್ನು ಆಯ್ಕೆ ಮಾಡಿಕೊಂಡು ಆಡಿಷನ್ ನಡೆಸಲಾಗಿತ್ತು. ಅದರಲ್ಲಿ ಎಂಟು ಜನ ಫೈನಲಿಸ್ಟ್ ಗಳಾಗಿದ್ದರು. ಆ ಅಂತಿಮ ಪಟ್ಟಿಯಲ್ಲಿ ಕಡೆಗೆ ಹೀರೋ ಆಗುವ ಅದೃಷ್ಟ ಒಲಿದಿದ್ದು ವಿರಾಟ್ ಎಂಬ ಯುವ ತರುಣನಿಗೆ.[ನಿರ್ದೇಶಕ ಎ.ಪಿ.ಅರ್ಜುನ್ ರನ್ನ ದೂರ ತಳ್ಳಿದ್ರಾ ದರ್ಶನ್.?]
ಈ ಯುವ ಪ್ರತಿಭೆ ವಿರಾಟ್ ಆಡಿಷನ್ ಮೂಲಕ ಆಯ್ಕೆಯಾಗಿರೋದೇನೋ ನಿಜ. ಆದರೆ ಅರ್ಜುನ್ ಅವರು ಈ ಹುಡುಗನನ್ನು ಆಯ್ಕೆ ಮಾಡುವುದಕ್ಕಿಂತ ಮೊದಲು ಆತನನ್ನು ಆಯ್ಕೆ ಮಾಡಿದ್ದು ಅರ್ಜುನ್ ಅವರ ತಾಯಿ.
ಎಪಿ ಅರ್ಜುನ್ ಅವರು ಮನೆಯಲ್ಲಿಲ್ಲದ ಅನೇಕ ಸಂದರ್ಭದಲ್ಲಿ ವಿರಾಟ್ ಅವರು 'ಅರ್ಜುನ್ ಸರ್ ಅವರನ್ನು ಮೀಟ್ ಮಾಡಬೇಕು. ಅವರ ಸಿನಿಮಾದಲ್ಲಿ ನಟಿಸಬೇಕು' ಎಂದು ಅವರ ತಾಯಿಯ ಬಳಿ ಅರ್ಜಿ ವಗಾಯಿಸಿ ಹೋಗುತ್ತಿದ್ರಂತೆ.[ಆ ಮೂವರು ನಿರ್ದೇಶಕರಲ್ಲಿ ಯಾರು ಉತ್ತಮರು?]
ಹಾಗೆಯೇ ಒಮ್ಮೆ ಅರ್ಜುನ್ ಅವರು ಮನೆಯಲ್ಲಿದ್ದ ಸಂದರ್ಭದಲ್ಲೂ ವಿರಾಟ್ ಅರ್ಜುನ್ ಅವರ ಮನೆಗೆ ಹೋಗಿದ್ದರಂತೆ. ಆವಾಗ ಖುದ್ದು ಭೇಟಿ ಮಾಡಿದ ನಿರ್ದೇಶಕರು "ನೀನು ನನ್ನ ಸಿನಿಮಾದಲ್ಲಿ ನಟಿಸುವ ಬಯಕೆ ಹೊಂದಿದ್ದರೆ, ಆಡಿಷನ್ ನಡೆಸುತ್ತಿದ್ದೇವೆ ಅಲ್ಲಿಗೆ ಬಾ'' ಎಂದಿದ್ದರಂತೆ. ಅರ್ಜುನ್ ಅವರ ಮಾತಿನಂತೆ ಆಡಿಷನ್ ನಲ್ಲೂ ಪಾಲ್ಗೊಂಡ ವಿರಾಟ್ ಕಡೆಯ ಆರು ಜನರಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ವಿರಾಟ್ ಮೂಲತಃ ಮೈಸೂರಿನ ಹುಡುಗ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಎನ್ನುವ ಸೂಪರ್ ಹಿಟ್ ಧಾರಾವಾಹಿಯ ಲೀಡ್ ರೋಲ್ ನಲ್ಲೂ ಕಾಣಿಸಿಕೊಂಡಿದ್ದರು. ಸಿನಿಮಾ ರಂಗದಲ್ಲಿ ವಿರಾಟ್ ಗೆ ಇದು ಮೊದಲ ಅನುಭವ. ಸಿನಿಮಾಗೆ ಎಂಟ್ರಿ ಕೊಡುತ್ತಿರುವುದರಿಂದ ಪೂರ್ವಭಾವಿಯಾಗಿ ಕಳೆದ ಮೂರು ತಿಂಗಳಿನಿಂದ ಡ್ಯಾನ್ಸ್, ಫೈಟ್ ಮತ್ತು ಜಿಮ್ ಅನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ.
ದುನಿಯಾ ವಿಜಿ, ಪ್ರೇಮ್, ಯಶ್ ಮುಂತಾದ ನಟರುಗಳಿಗೆ ಜಿಮ್ ಕೋಚ್ ಆಗಿರುವ ಪಾನಿಪುರಿ ಕಿಟ್ಟಿ ಅವರೇ ವಿರಾಟ್ ಅವರಿಗೂ ಜಿಮ್ ಗುರುಗಳಾಗಿದ್ದಾರೆ.['ಅವರು' ನನ್ನ ತಾಯಿಯ ಇನ್ನೊಬ್ಬ ಮಗನಿದ್ದಂತೆ: ಯಶ್ ಯಾರಿಗ್ಹೇಳಿದ್ದು]
ವಿರಾಟ್ ಎಂಬ ನವಯುವಕ ಹೀರೋ ಆಗಿ ಆಯ್ಕೆಯಾಗುವ ಮೂಲಕ 'ಕಿಸ್' ಕೊಡಲು ರೆಡಿಯಾಗಿದ್ದಾರೆ. ಆದರೆ ಇವರ ಕಿಸ್ ಪಡೆಯುವ ಹುಡುಗಿಯಂತೂ ಇನ್ನೂ ಆಯ್ಕೆಯಾಗಿಲ್ಲ. ಆ ಅದೃಷ್ಟ ಯಾರಿಗೆ ಒಲಿಯುತ್ತದೋ ಅನ್ನೋದು ಸದ್ಯಕ್ಕಂತೂ ಗೊತ್ತಾಗಿಲ್ಲ.
ಅಂದಹಾಗೆ 'ಕಿಸ್' ಚಿತ್ರವನ್ನು ವಿ. ರವಿಕುಮಾರ್ ಅವರು ತಮ್ಮ ರಾಷ್ಟ್ರಕೂಟ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಕೆ. ರವಿವರ್ಮ ಅವರ ಸಾಹಸ, ದೀಪು ಎಸ್. ಕುಮಾರ್ ಸಂಕಲನ ಮತ್ತು ಗಿರೀಶ್ ಗೌಡ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಆಗಸ್ಟ್ ತಿಂಗಳ ಮೊದಲ ವಾರದಿಂದ ಚಿತ್ರೀಕರಣ ಆರಂಭಗೊಳ್ಳಲಿದೆ.