»   » ತಾರೆ ಐಂದ್ರಿತಾ ರೇಗೆ ಡೆಂಗ್ಯೂ ಜ್ವರ; ಆಸ್ಪತ್ರೆಗೆ ದಾಖಲು

ತಾರೆ ಐಂದ್ರಿತಾ ರೇಗೆ ಡೆಂಗ್ಯೂ ಜ್ವರ; ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada
ಕನ್ನಡ ಚಲನಚಿತ್ರಗಳ ಜನಪ್ರಿಯ ತಾರೆ ಐಂದ್ರಿತಾ ರೇ ಅವರು ಅತೀವ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ ಐಂದ್ರಿತಾ ರೇ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅವರು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯವರು ಇನ್ನೂ ಆಕೆಯ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಯಾವುದೇ ಮಾಹಿತಿಯನ್ನೂ ಬಿಡುಗಡೆ ಮಾಡಿಲ್ಲ ಎನ್ನುತ್ತವೆ ಮೂಲಗಳು.

ಕಳೆದ ಎರಡು ವಾರಗಳಿಂದ ಅತೀವ ಜ್ವರದಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರಂತೆ. ಆದರೆ ಜ್ವರ ಇಳಿಮುಖವಾಗದೆ ತೀವ್ರಗೊಂಡಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗಿ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಐಂದ್ರಿತಾ ರೇ ಅವರು ಶ್ರೀನಗರ ಕಿಟ್ಟಿ ಜೊತೆಗಿನ 'ಟೋನಿ' ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ. ಪ್ರಜ್ವಲ್ ದೇವರಾಜ್ ಜೊತೆಗಿನ 'ಜಿದ್ದಿ' ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ.

ಇದರ ಜೊತೆಗೆ 'ಕಡ್ಡಿಪುಡಿ' ಹಾಗೂ 'ಪ್ರೇಮ್ ಅಡ್ಡ' ಚಿತ್ರಗಳಲ್ಲೂ ವಿಶೇಷ ಪಾತ್ರವನ್ನು ಪೋಷಿಸುತ್ತಿದ್ದಾರೆ. ದುನಿಯಾ ವಿಜಯ್ ಜೊತೆಗಿನ 'ರಜನಿಕಾಂತ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಐಂದ್ರಿತಾ ರೇ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂಬುದು ಎಲ್ಲರ ಹಾರೈಕೆ. (ಏಜೆನ್ಸೀಸ್)

English summary
Sources claims that Kannada films actress Aindrita Ray suffers from Dengue fever and she has admitted to private hospital in Bangalore. The actress is down with high fever for two weeks and she was resting in her house. 
Please Wait while comments are loading...