»   » ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ನಾಯಕಿ ಇವರೇ

ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ನಾಯಕಿ ಇವರೇ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಚಕ್ರವರ್ತಿ' ಎಂಬ ಹೊಸ ಸಿನಿಮಾದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಾವು ನಿಮಗೆ ಈ ಮೊದಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.

ಈಗಾಗಲೇ ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ಚಿತ್ರ ತಂಡದಿಂದ ಹೊರಬಿದ್ದಿರುವ ಹೊಸ ವಿಚಾರ ಏನಪ್ಪಾ ಅಂದ್ರೆ ಚಿತ್ರಕ್ಕೆ ನಾಯಕಿಯನ್ನು ತಂಡದವರು ಪತ್ತೆ ಮಾಡಿದ್ದಾರೆ.[ಹೊಸ ಅವತಾರ ಎತ್ತಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

ಭರ್ಜರಿ ಎರಡು ತಿಂಗಳುಗಳ ಕಾಲ ಹುಡುಕಾಟದಲ್ಲಿ ತೊಡಗಿದ್ದ 'ಚಕ್ರವರ್ತಿ' ಚಿತ್ರತಂಡ ಕೊನೆಗೂ ಬಾಕ್ಸಾಫೀಸ್ ಸುಲ್ತಾನನಿಗೆ ಸೂಕ್ತ ನಾಯಕಿಯನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯಕ್ಕೆ 'ಜಗ್ಗುದಾದ' ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿ ಇಟಲಿಯಿಂದ ವಾಪಸಾಗಿರುವ ದರ್ಶನ್ ಅವರು ಸ್ವಲ್ಪ ರಿಲ್ಯಾಕ್ಸ್ ಆಗುತ್ತಿದ್ದಾರೆ. 'ಜಗ್ಗುದಾದ' ಮುಗಿದ ತಕ್ಷಣ 'ಚಕ್ರವರ್ತಿ' ಚಿತ್ರದ ಶೂಟಿಂಗ್ ನಲ್ಲಿ ದರ್ಶನ್ ಅವರು ಪಾಲ್ಗೊಳ್ಳಲಿದ್ದಾರೆ.[ಪುನೀತ್ 'ರಣವಿಕ್ರಮ'ನಿಗೆ ಸಿಕ್ಕಿದಳು ಮಿಸ್ಸಿಂಗ್ ನಟಿ]

ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಡ್ಯುಯೆಟ್ ಹಾಡೋ ಆ ಚೆಂದದ ಬೆಡಗಿ ಯಾರು ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಇವಳೇ 'ಚಕ್ರವರ್ತಿ'ಯ ರಾಣಿ

ತಮಿಳು ಚಿತ್ರರಂಗದಲ್ಲಿ ಸರಿಯಾಗಿ ಶೂಟಿಂಗ್ ಗೆ ಹಾಜರಾಗದೇ, ನಿರ್ದೇಶಕರಿಗೆ ಕೈ ಕೊಡುವ ಮೂಲಕ ಸುದ್ದಿ ಮಾಡಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಅಂಜಲಿ ಅವರೇ ದರ್ಶನ್ 'ಚಕ್ರವರ್ತಿ' ಜೊತೆ ಪಟ್ಟ ಏರುತ್ತಿದ್ದಾರೆ.['ಮಿಸ್ಸಿಂಗ್ ನಟಿ' ಅಂಜಲಿ ಸುತ್ತ ಮತ್ತೊಂದು ವಿವಾದ]

ಮೊದಲ ಚಿತ್ರ 'ಹೊಂಗನಸು'

ಲವ್ಲಿ ಸ್ಟಾರ್ ಪ್ರೇಮ್ ಅವರ ಜೊತೆ 'ಹೊಂಗನಸು' ಚಿತ್ರದ ಮೂಲಕ ದಕ್ಷಿಣ ಭಾರತದ ಖ್ಯಾತ ನಟಿ ಅಂಜಲಿ ಅವರು ಸ್ಯಾಂಡಲ್ ವುಡ್ ಗೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದರು.

ಪುನೀತ್ ಜೊತೆ 'ರಣವಿಕ್ರಮ'

ಈ ಮೊದಲು ನಟಿ ಅಂಜಲಿ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ 'ರಣವಿಕ್ರಮ' ಚಿತ್ರದಲ್ಲಿ ಸಖತ್ತಾಗಿ ಮಿಂಚಿದ್ದು, ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು.

3ನೇ ಚಿತ್ರ 'ಚಕ್ರವರ್ತಿ'

ಇದೀಗ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಜೊತೆ 'ಚಕ್ರವರ್ತಿ' ಚಿತ್ರದಲ್ಲಿ ಡ್ಯುಯೆಟ್ ಹಾಡಲು ತಮಿಳು-ತೆಲುಗು ಚಿತ್ರದ ಖ್ಯಾತಿಯ ನಟಿ ಅಂಜಲಿ ಅವರು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

ಸಾಂಪ್ರದಾಯಿಕ ಪಾತ್ರದಲ್ಲಿ ಅಂಜಲಿ

'ಸಾಂಪ್ರದಾಯಿಕ ಮನೆ ಹುಡುಗಿ ಪಾತ್ರದಲ್ಲಿ ನಟಿಸಬಲ್ಲ ನಟಿಯ ಅವಶ್ಯಕತೆ ಇದ್ದ ಹಿನ್ನಲೆಯಲ್ಲಿ ಅಂಜಲಿ ಅವರನ್ನು ಆಯ್ಕೆ ಮಾಡಿದ್ದಾರೆ ನಿರ್ದೇಶಕ ಚಿಂತನ್ ಅವರು. ಈ ಮೊದಲು 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಎಂಬ ತೆಲುಗು ಚಿತ್ರದಲ್ಲಿ ಅಂಜಲಿ ಅವರು ಪಕ್ಕಾ ಸಾಂಪ್ರದಾಯಿಕ ಗೆಟಪ್ ನಲ್ಲಿ ಮಿಂಚಿದ್ದರು.

ಭೂಗತ ಲೋಕದ ಕಥೆ

ಈ ಸಿನಿಮಾ ಭೂಗತ ಲೋಕದ ಕಥೆಯನ್ನು ಸಾರುತ್ತಿದ್ದರೂ ಕೂಡ, ನಾಯಕ ಮತ್ತು ನಾಯಕಿಯ ನಡುವೆ ಉತ್ತಮ ಕೌಟುಂಬಿಕ ಸಂಬಂಧ ಇರುತ್ತದೆ. ಎನ್ನುತ್ತಾರೆ ನಿರ್ದೇಶಕರು.

ಯಾವಾಗ ಶೂಟಿಂಗ್

'ಜಗ್ಗುದಾದ' ಮುಗಿದ ನಂತರ 'ಚಕ್ರವರ್ತಿ' ಆರಂಭವಾಗುತ್ತಿದೆ. ಸದ್ಯಕ್ಕೆ ನಿಗದಿಪಡಿಸಿರುವಂತೆ ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಶೂಟಿಂಗ್ ಆರಂಭವಾಗಲಿದೆ. ಮಾತ್ರವಲ್ಲದೇ ಇನ್ನುಳಿದ ತಾರಾಗಣದ ಆಯ್ಕೆಯಲ್ಲಿಯೂ ಚಿತ್ರತಂಡ ಬ್ಯುಸಿಯಾಗಿದೆ.

ಪರಭಾಷಾ ನಟಿಯರ ದರ್ಬಾರ್

ಪರಭಾಷಾ ನಟಿಯರ ಜೊತೆ ನಟ ದರ್ಶನ್ ಅವರು ನಟಿಸುತ್ತಿರೋದು ಇದು ಮೊದಲನೇ ಬಾರಿ ಅಲ್ಲ. ಈ ಮೊದಲು 'ಐರಾವತ' ಚಿತ್ರದಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲ, 'ಜಗ್ಗುದಾದ' ಚಿತ್ರದಲ್ಲಿ ದಕ್ಷಿಣ ಭಾರತದ ನಟಿ ದೀಕ್ಷಾ ಸೇಠ್ ಈಗ ಮತ್ತೆ ದಕ್ಷಿಣ ಭಾರತದ ನಟಿ ಅಂಜಲಿ ಅವರ ಸರದಿ.[ಬರ್ತ್ ಡೇ ಸ್ಪೆಷಲ್: ದರ್ಶನ್ ಅವರ ಮುಂಬರುವ ಚಿತ್ರಗಳ ಲಿಸ್ಟ್]

English summary
According to the Reports, Actress Anjali to star in Darshan's 'Chakravarthy'. The movie is directed by Chintan A V.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada