»   »  ಅನು ಪ್ರಭಾಕರ್ ಪರೀಕ್ಷೆಯಲ್ಲಿ ತಲ್ಲೀನ

ಅನು ಪ್ರಭಾಕರ್ ಪರೀಕ್ಷೆಯಲ್ಲಿ ತಲ್ಲೀನ

Subscribe to Filmibeat Kannada
Anu Prabhakar
ಅಮೂಲ್ಯ, ಅಂದ್ರಿತಾ ರೇರಂತೆ ಸ್ಕೂಲ್, ಕಾಲೇಜಿಗೆ ಚಕ್ಕರ್ ಹೊಡೆಯುವ ಅವಕಾಶ ಇಲ್ಲದ ನಟಿ ಅನು ಪ್ರಭಾಕರ್ , ಇತ್ತೀಚೆಗೆ ಪರೀಕ್ಷೆ ಬರೆದಿದ್ದಾರೆ. ಮದುವೆ, ಸಿನಿಮಾ ಅನ್ನುತ್ತಾ ಪದವಿ ಪರೀಕ್ಷೆ ಮುಂದೂಡಿದ್ದ ಅನು, ಕೊನೆಗೂ ಬಿಎ ಮುಗಿಸಲು ನಿರ್ಧರಿಸಿದ್ದಾರೆ.ಚಿತ್ರರಂಗದಿಂದ ಕೊಂಚ ವಿರಾಮ ತೆಗೆದುಕೊಂಡು, ಪರೀಕ್ಷೆಗೆ ತಯಾರಿ ನಡೆಸಿದ್ದಾಗಿ ಹೇಳಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪರೀಕ್ಷೆ ಕಟ್ಟಿ ಇರುವ, ವಿದ್ಯಾನಗರ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯಕ್ಕೆ ಶುಕ್ರವಾರ ಬೆಳಗ್ಗೆ 9 ಕ್ಕೆ ಬಿಎ ಭಾಗ-1ರ ಸಮಾಜಶಾಸ್ತ್ರ ಪರೀಕ್ಷೆ ಬರೆಯಲು ಅನು ಪ್ರಭಾಕರ ಅಗಮಿಸಿದ್ದರು. ಸೋಮವಾರ ಬೆಳಗ್ಗೆ 9 ರಿಂದ 12 ರವರೆಗೆ ಭೂಗೋಳಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲಿದ್ದಾರೆ.
(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada