'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ
Recommended Video

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಸಂಭ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ಮುಳುಗಿಹೋಗಿದೆ. ಈ ಮಧ್ಯೆ ಕನ್ನಡದ ಮತ್ತೊಂದು ತಾರಾ ದಂಪತಿ ಸಿಹಿ ಸುದ್ದಿ ನೀಡಿದೆ.
ಚಂದನವನದ ಅಂದದ ಚೆಲುವೆ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೌದು, ಅನು ಪ್ರಭಾಕರ್ ನಿಜ ಜೀವನದಲ್ಲಿ ತಾಯಿಯಾಗ್ತಿದ್ದಾರೆ. ಈ ವಿಷ್ಯವನ್ನ ಖುದ್ದು ರಘು ಮುಖರ್ಜಿ ಅವರೇ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಖಚಿತ ಪಡಿಸಿದ್ದಾರೆ.
ಈ ಮೂಲಕ ಅನು ಮತ್ತು ರಘು ಅವರ ಪ್ರೀತಿಯ ಮನೆಗೆ ಮೂರನೇ ವ್ಯಕ್ತಿಯ ಆಗಮನವಾಗುತ್ತಿದೆ. ಚೊಚ್ಚಲ ಮಗುವನ್ನ ಬರಮಾಡಿಕೊಳ್ಳಲು ತಾರಾ ದಂಪತಿ ಸಿದ್ಧವಾಗುತ್ತಿದ್ದಾರೆ. ಮುಂದೆ ಓದಿ....
ಚೊಚ್ಚಲ ಮಗುವಿಗೆ ತಾಯಿಯಾದ ಅನು-ರಾಗ
''ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಹಲವು ಪಾತ್ರಗಳನ್ನ ನಿಭಾಯಿಸಿರುತ್ತಾರೆ. ಅನು ಪ್ರಭಾಕರ್ ಮುಖರ್ಜಿ ಕೂಡ ಕೆಲವು ಪಾತ್ರಗಳನ್ನ ನಿರ್ವಹಿಸಿ ಈಗ ಮತ್ತೊಂದು ಹಂತಕ್ಕೆ ಕಾಲಿಡುತ್ತಿದ್ದು, ಓರ್ವ ಅದ್ಭುತ ತಾಯಿಯಾಗಲು ಸಿದ್ಧವಾಗುತ್ತಿದ್ದಾರೆ'' ಎಂದು ನಟ ರಘು ಮುಖರ್ಜಿ ಟ್ವೀಟ್ ಮಾಡಿದ್ದಾರೆ.

2016ರಲ್ಲಿ ವಿವಾಹವಾಗಿದ್ದರು
ನಟಿ ಅನು ಪ್ರಭಾಕರ್ ಮತ್ತು ನಟ ಕಮ್ ಮಾಡೆಲ್ ರಘು ಮುಖರ್ಜಿ 2016ರಲ್ಲಿ ಹಸೆಮಣೆ ಏರಿದ್ದರು. ಕುಟುಂಬದವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಇವರ ಮದುವೆ ಏಪ್ರಿಲ್ 25, 2016 ರಂದು ನೆರವೇರಿತ್ತು.

ಅನು-ರಘು ಲವ್ ಸ್ಟೋರಿ
''ಸೂಪರ್' ಕಾರ್ಯಕ್ರಮದಲ್ಲಿ ನಾವೆಲ್ಲ ಜಡ್ಜ್ ಆಗಿದ್ವಿ. ಅದಾದ್ಮೇಲೆ ಫ್ರೆಂಡ್ಸ್ ಆದ್ವಿ. ಮೀಟ್ ಮಾಡ್ತಿದ್ವಿ. ಕಷ್ಟದಲ್ಲಿ ಇರುವಾಗ ಸ್ನೇಹ ಗಟ್ಟಿ ಆಯ್ತು. ಕುಟುಂಬಗಳು ಒಂದಾದಾಗ ಮದುವೆ ಆಯ್ತು. ಮದುವೆ ಆಗುವ ಯೋಚನೆ ಖಂಡಿತ ನನಗೆ ಇರಲಿಲ್ಲ. ವಿದ್ಯಾಭ್ಯಾಸ, ಸಿನಿಮಾ ಅಂತ ಇದ್ದೆ. ಆದ್ರೆ, ಕುಟುಂಬದವರೇ ಮುಂದೆ ಬಂದಾಗ ತುಂಬಾ ಟೈಮ್ ತೆಗೆದುಕೊಂಡು ಒಪ್ಪಿಕೊಂಡ್ವಿ'' ಎಂದು ಅನು ಪ್ರಭಾಕರ್ ತಮ್ಮ ಲವ್ ಸ್ಟೋರಿ ಹೇಳಿಕೊಂಡಿದ್ದರು.

ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಿದ್ದ ಜೋಡಿ
ಕಳೆದ ವಾರವಷ್ಟೇ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನ ಈ ಜೋಡಿ ಸಂಭ್ರಮಿಸಿತ್ತು. ಈ ವರ್ಷ ಈ ಸಂಭ್ರಮದ ಜೊತೆ ಇನ್ನೊಂದು ಖುಷಿಯೂ ಸೇರಿರುವುದು ಡಬಲ್ ಧಮಾಕವೇ ಸರಿ.


Click it and Unblock the Notifications











