ಕನ್ನಡದಲ್ಲಿಯೇ ಶುಭಾಶಯ ಕೋರಿ ಮತ್ತೆ ಮನಗೆದ್ದ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ, ತೆಲುಗಿನ ಚಿತ್ರರಂಗದಲ್ಲಿ ಮಿಂಚಿ ಹೆಸರು ಮಾಡಿದರೂ ಅಪ್ಪಟ ಕನ್ನಡತಿಯಾಗಿಯೇ ಉಳಿದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿಲ್ಲ. ತೆಲುಗಿನಲ್ಲಿಯೇ ನೆಲೆಯೂರಿದ್ದಾರೆ. ಹಾಗೆಂದು ಅವರು ಹುಟ್ಟಿ ಬೆಳೆದ ನಾಡನ್ನು ಮರೆತಿಲ್ಲ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ.

Recommended Video

ನಾನು ಪ್ರಭಾಸ್ ರನ್ನು ಬಿಡಲ್ಲ ಎಂದ ಅನುಷ್ಕಾ ಶೆಟ್ಟಿ | Anushka Shetty & Prabhas | Filmibeat Kannada

ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿಯೂ ಅನುಷ್ಕಾ, ಕನ್ನಡದಲ್ಲಿ ಶುಭ ಹಾರೈಸುತ್ತಿದ್ದಾರೆ. ಅವರ ತಾಯಿಯ ಜನ್ಮದಿನಕ್ಕೆ ಅವರು ಕನ್ನಡದಲ್ಲಿಯೇ ಶುಭಾಶಯ ಕೋರಿದ್ದನ್ನು ಮರೆಯುವಂತಿಲ್ಲ. ಹಾಗೆಯೇ ಕನ್ನಡ ರಾಜ್ಯೋತ್ಸವ, ಮಕರ ಸಂಕ್ರಾಂತಿ ಹಬ್ಬದ ಸಂದರ್ಭಗಳಲ್ಲಿ ಕೂಡ ಅನುಷ್ಕಾ ಕನ್ನಡದಲ್ಲಿ ಸಂದೇಶ ನೀಡುವ ಮೂಲಕ ಮನಗೆದ್ದಿದ್ದರು. ಈಗ ಯುಗಾದಿ ಹಬ್ಬಕ್ಕೂ ಅವರು ಕನ್ನಡದಲ್ಲಿಯೇ ಶುಭಾಶಯ ನೀಡಿದ್ದಾರೆ.

ಕುಟುಂಬದೊಂದಿಗೆ ಆನಂದಿಸೋಣ

ಕುಟುಂಬದೊಂದಿಗೆ ಆನಂದಿಸೋಣ

ಯುಗಾದಿ ಶುಭಾಶಯಗಳು. ನಿಮಗೂ ಹಾಗು ನಿಮ್ಮ ಕುಟುಂಬದ ಎಲ್ಲರಿಗೂ ಈ ಯುಗಾದಿಯು ಸಂತೋಷ ಹಾಗು ಸಮೃದ್ಧತೆಯನ್ನು ತರಲಿ. ನಾವೆಲ್ಲರೂ ಈ ಸಮಯವನ್ನು ಕುಟುಂಬದೊಂದಿಗೆ ಆನಂದಿಸೋಣ ಎಂದು ಅನುಷ್ಕಾ ಇನ್‌ಸ್ಟಾಗ್ರಾಂಲ್ಲಿ ಬರೆದಿದ್ದಾರೆ.

ಮನೆಯಲ್ಲಿಯೇ ಸುರಕ್ಷಿತರಾಗಿರಿ

ಮನೆಯಲ್ಲಿಯೇ ಸುರಕ್ಷಿತರಾಗಿರಿ

ಹಬ್ಬದ ಶುಭಾಶಯದ ಕೋರುವುದರ ಜತೆಗೆ ಅವರು ಜನರಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಂದೇಶವನ್ನೂ ನೀಡಿದ್ದಾರೆ. 'ಸರಕಾರದ ಆದೇಶದಂತೆ ಎಲ್ಲರೂ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದು ವಿನಂತಿಸುತ್ತೇನೆ' ಎಂಬುದಾಗಿ ಹೇಳಿದ್ದಾರೆ. ಈ ಸಂದೇಶವನ್ನು ಇಂಗ್ಲಿಷ್‌ನಲ್ಲಿ ಕೂಡ ಅವರು ಬರೆದಿದ್ದಾರೆ.

ಕನ್ನಡಿಗರಿಗೆ ಖುಷಿ ನೀಡಿದ ಪೋಸ್ಟ್

ಕನ್ನಡಿಗರಿಗೆ ಖುಷಿ ನೀಡಿದ ಪೋಸ್ಟ್

ಇನ್‌ಸ್ಟಾಗ್ರಾಂನ ಪೋಸ್ಟ್‌ನಲ್ಲಿ ಹಾಕಿಕೊಂಡಿರುವ ಫೋಟೊದಲ್ಲಿಯೂ ಕನ್ನಡದಲ್ಲಿಯೇ ಯುಗಾದಿ ಹಬ್ಬದ ಶುಭಾಶಯಗಳು ಎಂದಿದೆ. ಇದು ಕನ್ನಡಿಗರಲ್ಲಿ ಖುಷಿ ಮೂಡಿಸಿದೆ. 50 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್ಅನ್ನು ಮೆಚ್ಚಿಕೊಂಡಿದ್ದಾರೆ.

ಪ್ರತಿಬಾರಿಯೂ ಕನ್ನಡದಲ್ಲಿ ಹಾರೈಕೆ

ಪ್ರತಿಬಾರಿಯೂ ಕನ್ನಡದಲ್ಲಿ ಹಾರೈಕೆ

ಸಾಮಾನ್ಯವಾಗಿ ರಾಜ್ಯದಲ್ಲಿ ಹುಟ್ಟಿ ಬೆಳೆದ, ಕನ್ನಡ ಸಿನಿಮಾಗಳಲ್ಲಿ ನಟಿಸುವ ಅನೇಕ ನಟ-ನಟಿಯರು ಕನ್ನಡದಲ್ಲಿ ಶುಭ ಹಾರೈಸಿದರೆ ಅಥವಾ ಸಂದೇಶ ಹಂಚಿಕೊಂಡರೆ ತಮ್ಮ ಘನತೆಗೆ ಕುಂದುಂಟಾಗುವುದೇನೋ ಎಂಬಂತೆ ಇಂಗ್ಲಿಷ್‌ನಲ್ಲಿಯೇ ಪೋಸ್ಟ್‌ಗಳನ್ನು ಹಾಕುತ್ತಾರೆ. ಅವರ ನಡುವೆ ಅನುಷ್ಕಾ, ಪ್ರತಿ ಬಾರಿಯೂ ಕನ್ನಡದಲ್ಲಿಯೇ ಸಂದೇಶ ಹಾಕುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿ ನೀಡುತ್ತಿದೆ.

ಕನ್ನಡತಿಯ ಪಾತ್ರದಲ್ಲಿ

ಕನ್ನಡತಿಯ ಪಾತ್ರದಲ್ಲಿ

ಮೈಸೂರು ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದ ಖ್ಯಾತ ಸಂಗೀತಗಾರ್ತಿ ಮೈಸೂರು ನಾಗರತ್ನಮ್ಮ ಅವರ ಬದುಕನ್ನು ಆಧರಿಸಿದ ಪಾತ್ರದಲ್ಲಿ ಅನುಷ್ಕಾ ನಟಿಸಲಿದ್ದಾರೆ. ಸಿಂಗೀತಂ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದ ಮೂಲಕ ಅನುಷ್ಕಾ, ಕನ್ನಡತಿಯ ಪೋಷಾಕು ಧರಿಸುತ್ತಿದ್ದಾರೆ.

ಕಮಲ್ ಹಾಸನ್ ಜತೆ ಅನುಷ್ಕಾ

ಕಮಲ್ ಹಾಸನ್ ಜತೆ ಅನುಷ್ಕಾ

ಇದರ ಜತೆಗೆ ಅನುಷ್ಕಾ, ಕಮಲ್ ಹಾಸನ್ ಅವರೊಂದಿಗೂ ನಟಿಸಲಿದ್ದಾರೆ ಎಂದು ಹೇಳಲಾಗಿದೆ. 'ಇಂಡಿಯನ್ 2' ಚಿತ್ರದ ಬಳಿಕ ಕಮಲ್ ಹಾಸನ್ ಸಂಪೂರ್ಣವಾಗಿ ರಾಜಕೀಯಕ್ಕೆ ಕಾಲಿರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಗೌತಮ್ ವಾಸುದೇವ್ ಮೆನನ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. 'ವೆಟ್ಟಿಯಾಡು ವಿಲೈಯಾಡು' ಚಿತ್ರದ ಸೀಕ್ವೆಲ್‌ನಲ್ಲಿ ಕಮಲ್ ಜತೆಗೆ ಅನುಷ್ಕಾ ಶೆಟ್ಟಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ.

More from Filmibeat

English summary
Karnataka born actress Anushka Shetty wished people for Ugadi in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X