»   » ಸಪ್ತಪದಿ ತುಳಿದ ಚಂದನವನದ ಅಂದದ ನಟಿ

ಸಪ್ತಪದಿ ತುಳಿದ ಚಂದನವನದ ಅಂದದ ನಟಿ

Posted By:
Subscribe to Filmibeat Kannada

ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ನಂತರ ಲಾಸ್ಟ್ ಬಸ್ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ನಟಿ ದೀಪಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಸ್ಟ್ ಬಸ್ ಸಿನಿಮಾ ನಂತ್ರ ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನಟಿ ದೀಪಾ ಅವರ ಮದುವೆ ಇಂದು (ಫೆ 18) ನಡೆದಿದೆ.

ಹಾಸನದಲ್ಲಿ ದೀಪಾ ಗೌಡ ಮದುವೆ ನಡೆದಿದ್ದು ಗುರು ಹಿರಿಯರು ನಿಶ್ಚಯಿಸಿದಂತೆ ಸಂಪ್ರದಾಯಬದ್ದವಾಗಿ ನಡೆದಿದೆ. ಉದ್ಯಮಿ ಅರುಣ್ ಅವರ ಕೈ ಹಿಡಿದಿರುವ ದೀಪಾ ಇನ್ನು ಮುಂದೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಕಡಿಮೆ.

actress Deepa Gowda and Arun married today(feb. 18),

ದೀಪಾ ಮದುವೆ ಸಮಾರಂಭದಲ್ಲಿ ನಿರ್ದೇಶಕ ಹರಿ ಸಂತೋಷ್ ನಟ ವಿಕ್ಕಿ ವರುಣ್ ಹಾಗೂ ನಟ ರಾಜವರ್ಧನ್ ಡಿಂಗ್ರಿ ನಾಗರಾಜ್ ಕುಟುಂಬಸ್ಥರು ಕೂಡ ಭಾಗಿ ಆಗಿದ್ದರು.

actress Deepa Gowda and Arun married today(feb. 18),

ದೀಪಾ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರು. ಶ್ರೀ ಸಾಯಿ, ಜ್ವಲತಂ, ಕೊಳ್ಳೆಗಾಲ, ಸೆಲ್ಫಿಯಲ್ಲಿ ಕ್ಲಿಕ್ ,ಕ ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ದೀಪಾಗೌಡ ಕಾಣಿಸಿಕೊಂಡಿದ್ದರು.

English summary
Kannada cinema actress Deepa Gowda and Arun married today, The wedding ceremony took place at Hassan Deepa Gowda acted in several kannada movies, deepa starred in the last bus, Kollegal, Shri Sai movies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada