For Quick Alerts
  ALLOW NOTIFICATIONS  
  For Daily Alerts

  ಸೊಹೈಲ್ ಪ್ರಪೋಸ್‌ಗೆ ಎಸ್ ಎಂದ 'ಬಿಂದಾಸ್ ನಟಿ'; ಹನ್ಸಿಕಾ ಕೈಹಿಡಿಯಲಿರುವ ಈ ಸೊಹೈಲ್ ಯಾರು?

  |

  ಹಿಂದಿಯ ಶಕ ಲಕ ಬೂಮ್ ಬೂಮ್ ಧಾರಾವಾಹಿಯ ಮೂಲಕ ತನ್ನ ನಟನಾ ಕೆರಿಯರ್ ಆರಂಭಿಸಿದ ನಟಿ ಹನ್ಸಿಕಾ ಮೊಟ್ವಾನಿ ತನ್ನ ಹದಿನೈದನೇ ವಯಸ್ಸಿನಲ್ಲಿ ಅಲ್ಲು ಅರ್ಜುನ್ ಅಭಿನಯದ, ಪೂರಿ ಜಗನ್ನಾಥ್ ನಿರ್ದೇಶನದ 'ದೇಶಮುದುರು' ಚಿತ್ರದಲ್ಲಿ ನಟಿಸಿ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು.

  ಹೀಗೆ ತೆಲುಗು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದ ಹನ್ಸಿಕಾ ಮೊಟ್ವಾನಿ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ನಟಿಸುವ ಅನುಭವ ಹೊಂದಿದ್ದಾರೆ. ಬಾಲನಟಿಯಾಗಿ ನಟಿಸಿದ್ದ ಚಿತ್ರಗಳೂ ಸೇರಿದಂತೆ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹನ್ಸಿಕಾ ಮೊಟ್ವಾನಿ ಕಳೆದೆರಡು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದು ಈ ವರ್ಷ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ.

  ಈ ವರ್ಷ ಮಹಾ ಎಂಬ ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ತನ್ನ ವೃತ್ತಿ ಜೀವನದ ಐವತ್ತು ಚಿತ್ರಗಳನ್ನು ಪೂರೈಸಿದ ಮೈಲಿಗಲ್ಲನ್ನು ನೆಟ್ಟ ನಟಿ ಹನ್ಸಿಕಾ ಮೊಟ್ವಾನಿ ಮದುವೆ ಕುರಿತು ಕಳೆದ ಕೆಲ ದಿನಗಳಿಂದ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಹನ್ಸಿಕಾ ಮೊಟ್ವಾನಿಗೆ ಬಾಯ್‌ಫ್ರೆಂಡ್ ಇದ್ದು ಈ ವರ್ಷವೇ ಈ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಹರದಾಡಿತ್ತು. ಈ ಎಲ್ಲಾ ಸುದ್ದಿಗಳೂ ಸಹ ಇದೀಗ ನಿಜವಾಗಿದ್ದು, ಹನ್ಸಿಕಾ ತಮ್ಮ ಎಂಗೇಜ್‌ಮೆಂಟ್ ಕುರಿತ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಸ್ಪಷ್ಟನೆ ನೀಡಿದ್ದಾರೆ.

  ಗೆಳೆಯನ ಕೈಹಿಡಿಯಲಿದ್ದಾರೆ ಹನ್ಸಿಕಾ

  ಗೆಳೆಯನ ಕೈಹಿಡಿಯಲಿದ್ದಾರೆ ಹನ್ಸಿಕಾ

  ನಟಿ ಹನ್ಸಿಕಾ ಜತೆ ಸಪ್ತಪದಿ ತುಳಿಯಲಿರುವುದು ಆಕೆಯ ಬಹುದಿನಗಳ ಗೆಳೆಯ ಹಾಗೂ ಬ್ಯುಸಿನೆಸ್ ಪಾರ್ಟ್ನರ್ ಸೋಹೈಲ್ ಕಥುರಿಯಾ ಜತೆ. ಹೌದು, ಬ್ಯುಸಿನೆನ್‌ಮನ್ ಆಗಿರುವ ಸೋಹೈಲ್ ಕಥುರಿಯಾ 'ಹನ್ಸಿಕಾ ಮೊಟ್ವಾನಿ ಈವೆಂಟ್ಸ್ ಲಿಮಿಟೆಡ್ ಲಯಬಲಿಟಿ ಪಾರ್ಟ್ನರ್ಸ್' ಕಂಪೆನಿಯಲ್ಲಿ ಪಾರ್ಟ್ನರ್ ಆಗಿದ್ದರು. ಜತೆಗೆ ಇತರೆ ಕೆಲ ಕಂಪೆನಿಗಳ ಪಾರ್ಟ್ನರ್‌ಶಿಪ್ ಅನ್ನೂ ಸಹ ಸೋಹೈಲ್ ಕಥುರಿಯಾ ಹೊಂದಿದ್ದಾರೆ.

  ಎಫೆಲ್ ಟವರ್ ಮುಂದೆ ಪ್ರಪೋಸ್

  ಎಫೆಲ್ ಟವರ್ ಮುಂದೆ ಪ್ರಪೋಸ್

  ಹೀಗೆ ಹನ್ಸಿಕಾ ಮೊಟ್ವಾನಿ ತಮ್ಮ ಹಲವು ದಿನಗಳ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಪ್ಯಾರಿಸ್‌ನ ಎಫೆಲ್ ಟವರ್ ಮುಂದೆ ಸೋಹೈಲ್ ಕಥುರಿಯಾ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇನ್ನು ನಟಿ ಹನ್ಸಿಕಾ ಈ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು 'ಈಗ ಮತ್ತು ಎಂದೆಂದಿಗೂ' ಎಂದು ಬರೆದುಕೊಂಡಿದ್ದಾರೆ.

  ವಿವಾಹ ಯಾವಾಗ?

  ವಿವಾಹ ಯಾವಾಗ?

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಿಂದಾಸ್ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ ಮೊಟ್ವಾನಿ ಸೋಹೈಲ್ ಕಥುರಿಯಾ ಜತೆ ಇದೇ ವರ್ಷದ ಡಿಸೆಂಬರ್ 2 ಅಥವಾ 4ರಂದು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ರಾಜಸ್ಥಾನದ ಜೈಪುರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿದೆ.

  English summary
  Actress Hansika Motwani to marry her business partner Sohail Kathuria
  Wednesday, November 2, 2022, 13:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X