»   » ಕ್ಯಾಮರಾ ಕಂಡರೆ ಗಡಗಡ ನಡುಗುವ ನಟಿ ಜಯಮಾಲಾ

ಕ್ಯಾಮರಾ ಕಂಡರೆ ಗಡಗಡ ನಡುಗುವ ನಟಿ ಜಯಮಾಲಾ

Posted By: ಹರಾ
Subscribe to Filmibeat Kannada

ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಹಿರಿಯ ನಟಿ ಜಯಮಾಲಾ, ಸ್ಯಾಂಡಲ್ ವುಡ್ ನ 'ಸ್ಟ್ರಾಂಗ್ ಲೇಡಿ' ಅಂತಲೇ ಜನಪ್ರಿಯ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಅನೇಕ ವಿವಾದಗಳಿಗೆ ಶುಭಂ ಹಾಡಿದ ಜಯಮಾಲಾ ಯಾವುದಕ್ಕೂ ಜಗ್ಗದ ಗಟ್ಟಿಗಿತ್ತಿ.

ಇಂಥ ಜಯಮಾಲಾ ತಮ್ಮ ಜೀವನದಲ್ಲಿ ಭಯಪಡುವ ಏಕೈಕ ವಸ್ತು ಅಂದರೆ ಅದು 'ಕ್ಯಾಮರಾ'. ನಿಮ್ಮ ಕಣ್ಣನ್ನ ನೀವು ನಂಬುವುದಕ್ಕೆ ಅಸಾಧ್ಯವಾದರೂ, ಇದು ನೂರಕ್ಕೆ ನೂರರಷ್ಟು ಸತ್ಯ. ಜಯಮಾಲಾ ಮೇಡಂ 'ಕ್ಯಾಮರಾ' ಕಂಡ್ರೆ ಗಡಗಡ ನಡುಗುತ್ತಾರೆ!

Actress Jayamala1

ಇದೇನಪ್ಪಾ, ಚಿತ್ರ ನಟಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಜಯಮಾಲಾಗೆ ಕ್ಯಾಮರಾ ಫಿಯರ್ ಇದೆ ಅಂದ್ರೆ ನಂಬೋಕಾಗುತ್ತಾ ಅಂತ ಬಾಯಮೇಲೆ ಬೆರಳಿಡುವ ಮುನ್ನ ಪೂರಾ ಮ್ಯಾಟರ್ ಕೇಳಿ. [ಚಿತ್ರರಂಗಕ್ಕೆ ಸೌಂದರ್ಯಾ ಜಯಮಾಲಾ ಗುಡ್ ಬೈ!?]

ಹಾಗೆ ಜಯಮಾಲಾ ಹೆದರಿಕೊಳ್ಳುತ್ತಿರುವುದು ಟಿವಿ-ಮಾಧ್ಯಮಗಳ ಕ್ಯಾಮರಾಗಳಿಗೆ! ಸ್ಟಾರ್ ಗಳ ಮತ್ತು ರಾಜಕಾರಣಿಗಳ ಹಗರಣಗಳನ್ನು ಬಯಲು ಮಾಡುವ ಟಿವಿ ಕ್ಯಾಮರಾಗಳನ್ನ ನೋಡಿದ್ರೆ ಸಾಕು, ಜಯಮಾಲಾ ಎದೆಯಲ್ಲಿ ಢವಢವ ಶುರುವಾಗುತ್ತಂತೆ. ಹಾಗಂತ ಖುದ್ದು ಜಯಮಾಲಾ ಇಂದು ಬಾಯ್ಬಿಟ್ಟಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Actress Jayamala2

ಎಂ.ಎಲ್.ಸಿ ಆಗಿ ವಿಧಾನ ಪರಿಷತ್ ಮೆಟ್ಟಿಲೇರಿರುವ ನಟಿ ಜಯಮಾಲಾ ಬೆಳಗಾವಿಯಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಪ್ರತಿದಿನವೂ ತಪ್ಪದೆ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವ ಸದ್ದು-ಗದ್ದಲ, ಮೊಬೈಲ್ ಮ್ಯಾಟರ್, ಝೂಮ್..ಎಲ್ಲವನ್ನೂ ಕಣ್ಣಾರೆ ಕಂಡಿರುವ ಜಯಮಾಲಾ, ''ಯಾವಾಗ ಎಲ್ಲಿ ಕ್ಯಾಮರಾ ಇರುತ್ತೋ? ಒಮ್ಮೆ ಸುತ್ತ ನೋಡಿಕೊಂಡು ಕೂತ್ಕೋಬೇಕು. ಇಲ್ಲದೇ ಹೋದರೆ ಏನು ಮಾಡಿದರೂ ಮಾನ ಹರಾಜು ಹಾಕಿಬಿಡುತ್ತವೆ ಈ ಕ್ಯಾಮರಾಗಳು'' ಅಂತ ಚಟಾಕಿ ಹಾರಿಸಿದ್ದಾರೆ.

''ನನ್ನ ದುರಂತ ಅಂದ್ರೆ, ಇಲ್ಲಿವರೆಗೂ ನನ್ನ ಜೀವನದಲ್ಲಿ ಬೇಕಾದಷ್ಟು ಕ್ಯಾಮರಾಗಳನ್ನು ನೋಡಿಬಿಟ್ಟಿದ್ದೀನಿ. ಆದ್ರೆ ಈ ಪುಟಾಣಿ ಕ್ಯಾಮರಾಗಳನ್ನ ನೋಡಿದ್ರೆ ಸಾಕು ಹೆದರಿಕೆ ಶುರುವಾಗುತ್ತೆ.''

Actress Jayamala3

''ರಾಜಕೀಯಕ್ಕೆ ಬಂದ ಮೇಲಂತೂ ಮೈಯೆಲ್ಲಾ ಕಣ್ಣಾಗಿರಬೇಕು. ಕ್ಯಾಮರಾ ಎಲ್ಲಿರುತ್ತೆ ಅನ್ನುವುದೇ ಗೊತ್ತಾಗುವುದಿಲ್ಲ. ಹುಷಾರಾಗಿರಬೇಕು. ಒಂದು ಮಾತ್ರೆ ತೆಗೆದುಕೊಂಡರೂ, ಅದು ಬ್ರೇಕಿಂಗ್ ನ್ಯೂಸ್ ಆಗಿಬಿಡುತ್ತೆ. ಅದ್ರಿಂದ ಲೈಫೇ ಡ್ಯಾಮೇಜ್ ಆಗುತ್ತೆ.''

''ನನ್ನ ಮುಖ ಕ್ಯಾಮರಾ ಫ್ರೆಂಡ್ಲಿ. ಕ್ಯಾಮರಾ ಮುಂದೆಯೇ ಬೆಳೆದಿರುವ ನಾನು, ಈಗ ಅದೇ ಕ್ಯಾಮರಾ ನೋಡಿ ಬೆವರುವ ಹಾಗಾಗಿದೆ. ಈಗಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಮನೆಯಲ್ಲಿ ಕೂತರೂ ಸುತ್ತ ಕ್ಯಾಮರಾ ಇದ್ಯಾ, ಇಲ್ವಾ ಅಂತ ಚೆಕ್ ಮಾಡಿಕೊಳ್ಳಬೇಕು. ಅಷ್ಟು ಕಾನ್ಷಿಯಸ್ ಆಗಿದ್ದೀನಿ.'' ಅಂತ ನಟಿ ಜಯಮಾಲಾ ,ಬೆಳಗಾವಿಯಲ್ಲಿ ಆಪ್ತರ ಜೊತೆ ಹರಟುತ್ತಾ ಮಾಧ್ಯಮದವರ ಕ್ಯಾಮರಾಗಳನ್ನು ಬೆಟ್ಟು ಮಾಡಿ ತೋರಿಸಿ ಹೇಳಿದ್ದಾರೆ.

Actress Jayamala4

ತಮ್ಮ ಹೆದರಿಕೆಯ ಸತ್ಯವನ್ನ ನಗುನಗುತ್ತಲೇ ಹೊರಹಾಕಿರುವ ಜಯಮಾಲಾ ಮಾತುಗಳು ಕೇಳುವುದಕ್ಕೆ ಮಜವಾಗಿದ್ದರೂ, ಪಾಪ...ಅವರ ಕಷ್ಟ ಅವರಿಗೇ ಗೊತ್ತು! ಎಷ್ಟೇ ಆಗಲಿ ಕ್ಯಾಮರಾ ಕೈಚಳಕದಿಂದ ಎಷ್ಟು ಜನರ ಜಾತಕ ಬಯಲಾಗಿಲ್ಲ ಹೇಳಿ...(ಫಿಲ್ಮಿಬೀಟ್ ಕನ್ನಡ)

English summary
Veteran Actress Jayamala is scared of Camera! Not, Film making Camera but the Media wale Camera. After becoming M.L.C, Jayamala says that she has become too cautious about the Cameras being around.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada