»   » ಸುದೀಪ್ ಸೋದರತ್ತೆಯಾಗಿ 'ಬೊಂಬೆ' ರೀ ಎಂಟ್ರಿ

ಸುದೀಪ್ ಸೋದರತ್ತೆಯಾಗಿ 'ಬೊಂಬೆ' ರೀ ಎಂಟ್ರಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ಬೊಂಬೆ ಬೊಂಬೆ ಬೊಂಬೆ ...' ಎಂದು ಕನಸುಗಾರ ರವಿಚಂದ್ರನ್ ರಿಂದ ಹಾಡಿ ಹೊಗಳಿಸಿಕೊಂಡಿದ್ದ ಆ ಕಾಲದ ಬ್ಯೂಟಿ ಮಧೂ ಈಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಭರ್ಜರಿಯಾಗಿ ರೀ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದ ಮಧೂ ಅವರು ಇನ್ನೂ ಹೆಸರಿಡದ ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಆ ಚಿತ್ರ ಬೇರೆ ಯಾವುದೂ ಅಲ್ಲ. ಇತ್ತೀಚೆಗೆ ಸೈಲಂಟಾಗಿ ಸೆಟ್ಟೇರಿದ ಕಿಚ್ಚ ಸುದೀಪ್ ಅವರ ಮತ್ತೊಂದು ರಿಮೇಕ್ ಚಿತ್ರ. ಪವನ್ ಕಲ್ಯಾಣ್ ಅವರ ಸೂಪರ್ ಹಿಟ್ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರವನ್ನು ನಂದ ಕಿಶೋರ್ ಅವರು ಕನ್ನಡಕ್ಕೆ ತರುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.[ಸೈಲೆಂಟಾಗಿ ಸೆಟ್ಟೇರಿದ ಸುದೀಪ್ ಚಿತ್ರ]

ಈ ಚಿತ್ರದಲ್ಲಿ ನಾಯಕ ನಟನಿಗೆ ಸರಿ ಸಮಾನವಾದ ಪಾತ್ರವಾಗಿರುವ ಆತನ ಸೋದರತ್ತೆ ಪಾತ್ರಕ್ಕೆ ಮಧೂ ಅವರು ಆಯ್ಕೆಯಾಗಿದ್ದಾರೆ. ತೆಲುಗಿನಲ್ಲಿ ನಾದಿಯಾ ಅವರು ಈ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದರು.

Madhoo in Kannada remake of 'Attarintiki Daaredhi'

ಅತ್ತೆ ಸೊಸೆ ಕಥೆಯುಳ್ಳ ಅಣ್ಣಯ್ಯ ಚಿತ್ರದಲ್ಲಿ ಸಕತ್ತಾಗಿ ನಟಿಸಿದ್ದ ಮಧೂ ಅವರು ಈಗ ಈ ಚಿತ್ರದ ಮೂಲಕ ಸೊಸೆ ರೋಲ್ ನಿಂದ ಅತ್ತೆ ರೋಲ್ ಗೆ ಬಡ್ತಿ ಹೊಂದಿದ್ದಾರೆ ಎನ್ನಬಹುದು.

ಆಗಸ್ಟ್ ತಿಂಗಳಿನಿಂದ ಈ ರಿಮೇಕ್ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ನಾನು ಮುಂಬೈನಿಂದ ಬೆಂಗಳೂರಿಗೆ ಹೊರಡುತ್ತಿದ್ದೇನೆ ಎಂದು ಐಎಎನ್ಎಸ್ ಸುದ್ದಿಸಂಸ್ಥೆಗೆ ಮಧೂ ಹೇಳಿದ್ದಾರೆ. ಇತ್ತೀಚೆಗಷ್ಟೇ ತಮಿಳಿನ ರೋಮ್ಯಾಂಟಿಕ್ ಕಾಮಿಡಿ ಚಿತ್ರ 'ವಾಯ್ ಮೂಡಿ ಪೇಸುವುಮ್' ನಲ್ಲಿ ಮಧು ನಟಿಸಿದ್ದರು.

ಚಿತ್ರರಂಗ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಹೇಮಮಾಲಿನಿ ಅವರ ಸಂಬಂಧಿಕಳು ಎಂಬ ಹೆಮ್ಮೆ ಇದ್ದೇ ಇದೆ. ಕನ್ನಡ ಚಿತ್ರರಂಗದಲ್ಲಿ ಅಣ್ಣಯ್ಯ ಚಿತ್ರದ ನಟನೆಗೆ ಒಳ್ಳೆ ಹೆಸರು ಸಿಕ್ಕಿತು ಎಂದು ಮಧೂ ಹೇಳಿದ್ದಾರೆ.

ತೆಲುಗಿನ ವಿಕ್ರಮಾರ್ಕುಡು ಚಿತ್ರವನ್ನು ವೀರ ಮದಕರಿಯಾಗಿ, ಸಿಂಗಂ ಚಿತ್ರವನ್ನು ಕೆಂಪೇಗೌಡ ಚಿತ್ರವನ್ನಾಗಿಸಿ ಇತ್ತೀಚಿಗೆ ತೆಲುಗಿನ ಮಿರ್ಚಿಯನ್ನು ಕನ್ನಡದಲ್ಲಿ ಮಾಣಿಕ್ಯದಂತೆ ಹೊಳೆಯುವಂತೆ ಮಾಡಿರುವ ಸುದೀಪ್ ಅವರು ಜೂ.29ರಂದು ಆರಂಭಗೊಳ್ಳಲಿರುವ ಬಿಗ್ ಬಾಸ್ 2 ನಡುವೆಯೂ ಈ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಒಂದೆರಡು ರಿಮೇಕ್ ಚಿತ್ರದ ನಂತರ ಸಾಲು ಸಾಲು 6 ಸ್ವಮೇಕ್ ಚಿತ್ರಗಳನ್ನು ನೀಡುವ ಭರವಸೆಯನ್ನು ಸುದೀಪ್ ನೀಡಿದ್ದಾರೆ.

ಆ ಕಾಲದಲ್ಲಿ ಹಲವರ ಮೈಚಳಿ ಬಿಡಿಸಿದ್ದ ಅಣ್ಣಯ್ಯ ಚಿತ್ರದ ವಿಡಿಯೋ:

<iframe width="640" height="480" src="//www.youtube.com/embed/QVuFIaK7nVk" frameborder="0" allowfullscreen></iframe>
English summary
Actress Madhoo, who recently made her southern comeback with Tamil romantic-comedy "Vaayai Moodi Pesavum", has been signed on for the Sudeep Starrer yet-untitled Kannada remake of recent Telugu blockbuster "Attarintiki Daaredhi".
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada