»   » ಹೊಸ ದಾಖಲೆ ಬರೆದ ಕನಸಿನ ರಾಣಿ ಮಾಲಾಶ್ರೀ

ಹೊಸ ದಾಖಲೆ ಬರೆದ ಕನಸಿನ ರಾಣಿ ಮಾಲಾಶ್ರೀ

Posted By:
Subscribe to Filmibeat Kannada

ತೊಂಬತ್ತರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮಾಸ್ ಚೆಲುವೆ ಮಾಲಾಶ್ರೀ ಯಾರಿಗೆ ತಾನೇ ಗೊತ್ತಿಲ್ಲ. ಪೋಲೀಸ್, ರೌಡಿ, ಗಯ್ಯಾಳಿ ಹೀಗೆ ಎಲ್ಲ ತರಹದ ಪಾತ್ರಗಳನ್ನು ನಿರ್ವಹಿಸಿದ್ದ ಆಕೆಯ ಹೆಸರಿನಲ್ಲೇ ಹೊಸ ಚಿತ್ರವೊಂದು ಮೊನ್ನೆ ಚಾಲನೆಗೊಂಡಿತು. ಪ್ಯಾಕ್ಟ್ರೀಲ್ ಸಂಸ್ಥೆಯಡಿ ಕವಿತಾ, ಬೆಳ್ಳಿಗಂಗಾಧರ (ತಿಪಟೂರು) ಹಾಗೂ ಪಲ್ಲಕ್ಕಿ ರಾಧಾಕೃಷ್ಣ ನಿರ್ಮಿಸುತ್ತಿರುವ ಚಿತ್ರವಿದು.

ಈ ಚಿತ್ರಕ್ಕೆ ಅಯ್ಯಪ್ಪ.ಪಿ.ಶರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು 'ಮಾಲಾಶ್ರೀ'. ಈ ಚಿತ್ರಕ್ಕೆ ಇತ್ತೀಚೆಗೆ ಸಹಕಾರನಗರದ ಶ್ರೀಗುಂಡ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆಯೊಂದಿಗೆ ಚಿತ್ರದ ಕೆಲಸವನ್ನು ಆರಂಭಿಸಲಾಯಿತು.


ಇದುವರೆಗೂ ನಿರ್ವಹಿಸಿರದಂಥಹ ವಿಶೇಷ ಪಾತ್ರವನ್ನು ನಟಿ ಮಾಲಾಶ್ರೀ ಈ ಚಿತ್ರದಲ್ಲಿ ಮಾಡಲಿದ್ದಾರೆ. ದೇಶ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟಂತೆ ಕಥೆ ಹೆಣೆದಿರುವ ನಿರ್ದೇಶಕರು ಗುಪ್ತದಳಕ್ಕೆ ಇಂಟಲಿಜೆನ್ಸ್ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ಈ ಚಿತ್ರದ ಪಾತ್ರದ ಮುಖಾಂತರ ಹೇಳ ಹೊರಟಿದ್ದಾರೆ.

ಇದೇ 27 ರಿಂದ ಮಾಲಾಶ್ರೀ ಚಿತ್ರದ ಮುಹೂರ್ತ ಪ್ರಾರಂಭಗೊಳ್ಳಲಿದೆ. ಎರಡು ದಶಕಗಳ ಹಿಂದೆ ಮಾಲಾಶ್ರೀ ಹಾಗೂ ಮುಖ್ಯಮಂತ್ರಿ ಚಂದ್ರು ಪ್ರಧಾನ ಪಾತ್ರದಲ್ಲಿದ್ದ 'ಮಾಲಾಶ್ರೀ ಮಾಮಾಶ್ರೀ' ಹೆಸರಿನ ಚಿತ್ರವೊಂದು ನಿರ್ಮಾಣವಾಗಿತ್ತು. ಆದರೆ ನಾಯಕಿಯೊಬ್ಬಳ ಹೆಸರನ್ನು ಶೀರ್ಷಿಕೆಯಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದಾಗಲಿದೆ. ಈ ಮೂಲಕ ಮಾಲಾಶ್ರೀ ಹೊಸ ದಾಖಲೆ ಬರೆದಿದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯರ ಸಂಗೀತ, ರಾಜೇಶ್ ಶೆಟ್ಟಿ ಛಾಯಾಗ್ರಹಣ, ರವಿ ಶ್ರೀವತ್ಸ ಸಂಭಾಷಣೆ, ಥ್ರಿಲ್ಲರ್ ಮಂಜು ಸಾಹಸ, ಗೌತಮ್ ರಾಜ್ ಸಂಕಲನ, ತ್ರಿಭುವನ ನೃತ್ಯ ನಿರ್ದೇಶನವಿದೆ. ಬಾಲಿವುಡ್ ನಟ ಮುಖೇಶ್ ಖನ್ನ, ನಾಜರ್ ಹಾಗೂ ರವಿಶಂಕರ್ ರಂಗಾಯಣ ರಘು, ಸಾಧುಕೋಕಿಲ, ರಾಧಾಕೃಷ್ಣ ಪಲ್ಲಕ್ಕಿ, ಬುಲೆಟ್ ಪ್ರಕಾಸ್ ಮೊದಲಾದವರ ತಾರಾಗಣವಿದೆ. (ಒನ್ಇಂಡಿಯಾ ಕನ್ನಡ)

English summary
Kannada actress Malashri back to action. This time her name itself became a movie title as 'Malashri'. The movie being directed by Ayyappa P Sharma.
Please Wait while comments are loading...