»   » ಸದ್ದಿಲ್ಲದೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ 'ಕೆಂಡಸಂಪಿಗೆ' ಚೆಲುವೆ

ಸದ್ದಿಲ್ಲದೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ 'ಕೆಂಡಸಂಪಿಗೆ' ಚೆಲುವೆ

Posted By:
Subscribe to Filmibeat Kannada

'ಕೆಂಡಸಂಪಿಗೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಕಮಾಲ್ ಮಾಡಿದ್ದ ನಟಿ ಮಾನ್ವಿತಾ ಹರೀಶ್ ಅವರಿಗೆ ಇದೀಗ ಅವಕಾಶಗಳ ಮೇಲೆ ಅವಕಾಶ ದೊರೆಯುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ 'ಟಗರು' ಚಿತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ, 'ಚೌಕ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತಾಯ್ತು.

ಇದೀಗ ಮತ್ತೆ ಇನ್ನೊಂದು ಸಿನಿಮಾ ಒಪ್ಪಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಬೆಂಗಳೂರು ಮೂಲದ ಸಿನಿಮಾ ನಿರ್ಮಾಪಕ ಅರವಿಂದ್ ಕಾಮತ್ ಅವರ ಚೊಚ್ಚಲ ಪ್ರಯತ್ನದ ಚಿತ್ರದಲ್ಲಿ ಮಾನ್ವಿತಾ ಹರೀಶ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ]

Actress Manvitha Harish's next movie is 'Arishadvarga'

'ಮನುಷ್ಯನ ಮನಶಾಂತಿಯನ್ನು ಕದಡುವ ಆರು ಭಾವನೆಗಳಾದ 'ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರ, ಹೀಗೆ 'ಅರಿಷಡ್ವರ್ಗ'ದ ಹೆಸರನ್ನೇ ಚಿತ್ರಕ್ಕೆ ಟೈಟಲ್ ಇಟ್ಟಿದ್ದಾರೆ. ಇದೇ ಆರು ವಿಷಯಗಳನ್ನು ಇಟ್ಟುಕೊಂಡು ಅರವಿಂದ್ ಕಾಮತ್ ಅವರು ಸಿನಿಮಾ ಮಾಡಲಿದ್ದಾರಂತೆ.

ಕ್ರೈಮ್ ಥ್ರಿಲ್ಲರ್ ಮತ್ತು ಮಿಸ್ಟರಿಯುಳ್ಳ 'ಅರಿಷಡ್ವರ್ಗ' ಚಿತ್ರದಲ್ಲಿ ಎಲ್ಲಾ ಪ್ರಮುಖ ಪಾತ್ರಧಾರಿಗಳು ಕೂಡ ವಿಭಿನ್ನ ಪಾತ್ರ ಮಾಡಲಿದ್ದಾರೆ. ಸದ್ಯಕ್ಕೆ ನಟಿ ಮಾನ್ವಿತಾ ಹರೀಶ್, ನಟ ಅವಿನಾಶ್ ಮತ್ತು ಸಿನಿಮಾ ನಿರ್ಮಾಪಕ ಮಹಾಂತೇಶ್ ರಾಮದುರ್ಗ ಅವರು ತಾರಾಗಣದಲ್ಲಿ ಅಯ್ಕೆಯಾಗಿದ್ದಾರೆ.[ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ]

Actress Manvitha Harish's next movie is 'Arishadvarga'

ಇನ್ನುಳಿದ ಪಾತ್ರಗಳ ಶೋಧನೆಯಲ್ಲಿ ಅರವಿಂದ್ ಕಾಮತ್ ಅವರು ಬಿಜಿಯಾಗಿದ್ದು, ಎಲ್ಲವನ್ನು ಬೇಗ-ಬೇಗ ಮುಗಿಸಿ, ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಬಗ್ಗೆ ದೊರಕಿರುವ ಮಾಹಿತಿ ಇಷ್ಟು, ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ನೋಡ್ತಾಯಿರಿ.

English summary
Bengaluru-based filmmaker Aravind Kamath is all set to make his first Kannada feature film, titled 'Arishadvarga'. Kannada Actress Manvitha Harish, Actor Avinash, Mahantesh Ramdurg in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada