»   » ಶಿವಣ್ಣ ನಮಲ್ಲಿ ಹೊಸ ಚಾಲೆಂಜ್ ಸೃಷ್ಟಿಸುವ ಮಾಂತ್ರಿಕ: ಮಾನ್ವಿತಾ

ಶಿವಣ್ಣ ನಮಲ್ಲಿ ಹೊಸ ಚಾಲೆಂಜ್ ಸೃಷ್ಟಿಸುವ ಮಾಂತ್ರಿಕ: ಮಾನ್ವಿತಾ

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರ 55ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಅಭಿಮಾನಿಗಳು ಮತ್ತು ಸ್ಯಾಂಡಲ್ ವುಡ್ ತಾರೆಯರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಹುಟ್ಟು ಹಬ್ಬದ ಪ್ರಯುಕ್ತ ನಟ ಶ್ರೀಮುರಳಿ ಗಿಫ್ಟ್ ಆಗಿ 'ಮಫ್ತಿ' ಚಿತ್ರದಲ್ಲಿನ ಶಿವಣ್ಣನ ಲುಕ್ ಅನ್ನು ಎರಡನೇ ಟೀಸರ್ ಆಗಿ ಬಿಡುಗಡೆ ಮಾಡಿದ್ದಾರೆ.

'ಟಗರು' ಗೊಂಬೆ ಮಾನ್ವಿತಾ ಹೊಸ ಲುಕ್ ನೋಡಿದ್ರೆ ನೀವು ಶಾಕ್ ಆಗ್ತೀರಾ

'ಟಗರು' ಚಿತ್ರದಲ್ಲಿ ನಟಿಸಿರುವ 'ಕೆಂಡಸಂಪಿಗೆ' ಬೆಡಗಿ ಮಾನ್ವಿತಾ ಹರೀಶ್ ರವರು ಸಹ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ, ಶಿವಣ್ಣನಿಂದ ಅವರು ಎಷ್ಟು ಸ್ಫೂರ್ತಿಗೊಂಡಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

Actress Manvitha Harish wishes to Shivarajkumar Birthday

ಮಾನ್ವಿತಾ ಹರೀಶ್ 'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಸೆಂಚುರಿ ಸ್ಟಾರ್ ಗೆ ಹುಟ್ಟುಹಬ್ಬದ ವಿಶ್ ಮಾಡಲು ಮಾನ್ವಿತಾ ಹರೀಶ್ 'ಟಗರು' ಚಿತ್ರದ ಶಿವಣ್ಣನ ಲುಕ್ ಒಂದನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿ, 'ನಿಮ್ಮನ್ನು ನೋಡಿದಾಗಲೆಲ್ಲ ನನ್ನಲ್ಲಿ ಹೊಸ ಚಾಲೆಂಜ್ ಸೃಷ್ಟಿಯಾಗುತ್ತದೆ, ನನ್ನನ್ನು ನಾನು ಇನ್ನೂ ಪರಿಪೂರ್ಣಗೊಳಿಸಿಕೊಳ್ಳಲು ಸ್ಫೂರ್ತಿ ಸಿಗುತ್ತದೆ. ನಿಮ್ಮ ಹೃದಯವಂತಿಕೆ ತುಂಬಾ ದೊಡ್ಡದು. ನಿಮ್ಮ ದಯೆ, ವಿನಮ್ರತೆಯ ಗುಣ ಮತ್ತು ಉದಾರ ಮನೋಭಾವನೆಗಳು ಅತಿಹೆಚ್ಚು ವಿಶೇಷವಾದ ಪ್ರತಿಭೆಗಳು. ಹ್ಯಾಪಿ ಬರ್ತ್‌ಡೇ ಶಿವಣ್ಣ' ಎಂದು ಬರೆದಿದ್ದಾರೆ. ಈ ಮೂಲಕ ಮಾನ್ವಿತಾ ಅಭಿನಯಕ್ಕೆ ಆಗಲಿ ಅಥವಾ ಜೀವನದಲ್ಲಿ ಹೊಸ ಹೊಸ ಚಾಲೆಂಜ್ ಗಳನ್ನು ಸ್ವೀಕರಿಸಲು ಶಿವಣ್ಣನಿಂದ ಎಷ್ಟು ಪ್ರೇರಣೆಗೊಂಡಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

Actress Manvitha Harish wishes to Shivarajkumar Birthday

'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ

ಅಂದಹಾಗೆ 55 ವರ್ಷದ ಶಿವಣ್ಣ ರವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಎಲ್ಲರಿಗೂ ಅತ್ಯದ್ಭುತ ಸ್ಫೂರ್ತಿ. ಸದಾ ಯಾವುದಾದರೊಂದು ಚಿತ್ರೀಕರಣದಲ್ಲಿ ತೊಡಗಿಕೊಂಡಿರುತ್ತಾರೆ. ವರ್ಷಕ್ಕೆ 3-4 ಚಿತ್ರಗಳಲ್ಲಿ ಅಭನಯಿಸುತ್ತಾರೆ.

English summary
Kannada Actress Manvitha Harish has taken her facebook account to wish Shivarajkumar birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada