For Quick Alerts
  ALLOW NOTIFICATIONS  
  For Daily Alerts

  DCP ಆಗಿ ಪ್ರಮೋಶನ್‌ ಪಡೆದ ನಟಿ ಮೇಘನಾ ಗಾಂವ್ಕರ್!

  |

  ಕನ್ನಡ ಸಿನಿಮಾರಂಗದಲ್ಲಿ ಕೆಲವರು ಸ್ಟಾರ್‌ ಹೀರೋಗಳ ಹೀರೋಯಿನ್ ಎನಿಸಿಕೊಂಡಿದ್ದಾರೆ. ಆದ್ರೆ ಇನ್ನು ಕೆಲವರು ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಗಮನ ಸೆಳೆಯುತ್ತಾರೆ. ಕೇವಲ ನಾಯಕ ನಟಿ ಅನ್ನುವ ಪಟ್ಟಕ್ಕೆ ಸೀಮಿತ ಆಗದೇ ಒಂದಷ್ಟು ಪ್ರಯೋಗಾತ್ಮಕ ಪಾತ್ರಗಳಿಗೂ ಒಗ್ಗಿ ಬಿಡುತ್ತಾರೆ. ಅಂತಹ ಅವರಲ್ಲಿ ಕನ್ನಡದ ನಟಿ ಮೇಘನಾ ಗಾಂವ್ಕರ್ ಕೂಡ ಒಬ್ಬರು. ಈಗ ಮೇಘನಾ ಖಾಕಿ ತೊಟ್ಟು ತೆರೆಯ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ.

  ಶಿವಾಜಿಗೆ ಜೊತೆಯಾದ ಮೇಘನಾ ಗಾಂವ್ಕರ್!

  ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಹೊಸ ಅವತಾರದಲ್ಲಿ ಸಿನಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಮೇಘನಾ ಡಿಸಿಪಿ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶಿವಾಜಿಯ ಹುಡುಕಾಟಕ್ಕೆ ಮೇಘನಾ ಪಾತ್ರವೆ ಬೆನ್ನೆಲುಬಾಗಿ ಇರುತ್ತೆ. ಶಿವಾಜಿ ಪಾತ್ರದ ಡಿಟೆಕ್ಟಿವ್ ಅವತಾರದಲ್ಲಿ ನಟ ರಮೇಶ್ ಅರವಿಂದ್ ಹುಡುಕಾಟಕ್ಕಿಳಿಯಲಿದ್ದಾರೆ.

  ಶಿವಾಜಿಯ ಪ್ರತಿ ಹೆಜ್ಜೆಯ ಜೊತೆಗೆ ಡಿಸಿಪಿ ಮೇಘನಾ ಪಾತ್ರ ಸಾಗುತ್ತೆ. ಈ ಪಾತ್ರ ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರ ಅಂತರೆ ನಿರ್ದೇಶಕ ಆಕಾಶ್‌ ಶ್ರೀವತ್ಸ. ನಟಿ ಮೇಘನಾ ಗಾಂವ್ಕರ್ ವಿಚಾರಕ್ಕೆ ಬರುವುದಾದರೆ ಮೇಘನಾ ಸಾಕಷ್ಟು ಸಿನಿಮಾಗಳಲ್ಲಿ ಭಿನ್ನ ಪಾತ್ರಗಳಲ್ಲಿ ಗಮನಸೆಳೆದಿರುವ ನಟಿ. ಯಾವುದೇ ಪಾತ್ರ ಆದ್ರು ಸರಿ ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನಿಸಿ ಕೊಳ್ಳುವಂತಹ ನಟಿ. ಮೇಘನಾ ಗಾಂವ್ಕರ್ ಈ ಹಿಂದೆ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

  ಸೀಕ್ವೆಲ್‌ನಲ್ಲೂ ಮೋಡಿ ಮಾಡಿರೋ ಶಿವಾಜಿ!

  ಶಿವಾಜಿ ಸುರತ್ಕಲ್ ಭಾಗ-1 ಸಿನಿ ಪ್ರೇಕ್ಷಕರ ಮನ ಗೆದ್ದಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದೊಂದಿಗೆ ನೋಡುಗರ ತಲೆಗೆ ಹುಳ ಬಿಟ್ಟಿತ್ತು.

  ಇದೀಗ ಶಿವಾಜಿಯ ಮುಂದುವರೆದ ಭಾಗ ಮತ್ತಷ್ಟು ರೋಚಕಥೆಯನ್ನ ಕಟ್ಟಿಕೊಡಲಿದೆ. ಈ ಚಿತ್ರವು ಒಂದು "ಮಿಸ್ಟೀರಿಯಸ್ ಮಾಯಾವಿ" ಕೇಸ್‌ನ ಸುತ್ತಲೂ ಸುತ್ತುತ್ತೆ. ನಿರ್ದೇಶಕ ಆಕಾಶ್ ಶ್ರೀವತ್ಸ ಗಟ್ಟಿ ಕಥೆ ಬರೆದು ಕೊಂಡು ನಿರ್ದೇಶನಕ್ಕೆ ಇಳಿದಿದ್ದಾರೆ. ಭಾಗ ಒಂದನ್ನು ಕೂಡ ನಿರ್ದೇಶಕ ಆಕಾಶ್ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದರು. ಭಾಗ-1 ಚಿತ್ರಕ್ಕೆ ಸಿಕ್ಕಂಥ ಪ್ರತಿಕ್ರಿಯೆ ಶಿವಾಜಿ ಸುರತ್ಕಲ್ ಸೀಕ್ವೆಲ್‌ ಆಗುವುದಕ್ಕೆ ಕಾರಣವಾಗಿದೆ.

  Actress Meghana Gaonkar gets on board for Shivaji surathkal2 film!

  ಶಿವಾಜಿ ಸುರತ್ಕಲ್ ಚಿತ್ರದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ನಟ ರಮೇಶ್ ಅವರಿಂದ್ ಪಾತ್ರ ಹಾಗೆ ಮುಂದುವರೆಯಲಿದೆ. ಆದ್ರೆ ಚಿತ್ರಕ್ಕೆ ನಾಯಕಿ ಅಂತ ಯಾರು ಇಲ್ಲ. ಎಲ್ಲವೂ ಚಿತ್ರದ ಪ್ರಮುಖ ಪಾತ್ರಗಳಾಗಿ ಸಾಗುತ್ತವೆ. ಈ ಸೀಕ್ವೆಲ್ ಚಿತ್ರಕ್ಕೂ ರೇಖಾ ಕಿಗೆನ್ ಮತ್ತು ಅನುಪ ಗೌಡ ಬಂಡವಾಳ ಹೂಡಿದ್ದಾರೆ. ಶಿವಾಜಿ ಸೂರತ್ಕಲ್ ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣವಿದೆ. ಇನ್ನುಳಿದಂತೆ ಚಿತ್ರದಲ್ಲಿ ರಾಧಿಕಾ ನಾರಾಯಣ್, ರಘು ರಾಮನಕೊಪ್ಪ, ವಿದ್ಯಾ ಮೂರ್ತಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಇದ್ದಾರೆ. ಡಿಸೆಂಬರ್‌ ನಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಒಂದೇ ಹಂತದಲ್ಲಿ ಇಡೀ ಚಿತ್ರದ ಶೂಟಿಂಗ್ ಮುಗಿಸುವ ಯೋಜನೆಯಲ್ಲಿದೆ ಶಿವಾಜಿ ಸುರತ್ಕಲ್ ಚಿತ್ರತಂಡ.

  English summary
  Actress Meghana Gaonkar to play cop role in shivaji surathkal2 film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X